Advertisement
ಕೆಲವರಿಗೆ ತಮ್ಮ ಮಾರ್ಕ್ಸ್ ಬಗ್ಗೆ ಅಸಮಾಧಾನ. ಇನ್ನೂ ಕೆಲವರಿಗೆ ಕಡಿಮೆ ಮಾರ್ಕ್ಸ್ನಲ್ಲೂ ಸೈನ್ಸ್ ಬೇಕು ಅನ್ನೋ ಹಠ. ಈ ಸಮಯದಲ್ಲಿ ಆಗಷ್ಟೇ ನಾನು ಮತ್ತು ನನ್ನ ಸ್ನೇಹಿತ ಅಪ್ಲಿಕೇಶನ್ ಹಿಡಿದುಕೊಂಡು ಅತ್ತಿತ್ತ ಓಡಿ ಕೊನೆಗೆ ಆಡ್ಮಿಷನ್‌ಗಾಗಿ “ನಾಳೆ ಬರುತ್ತೇವೆ’ ಹೇಳಿ ಆ ಜನಜಂಗುಳಿಯಿಂದ ತಪ್ಪಿಸಿಕೊಂಡು ಬಂದಿದ್ದೆವು. ನನ್ನ ಸ್ನೇಹಿತ ಬೇರೆ ಕಾಲೇಜಿಗೆ ಜಮೆಯಾದ. ಆದ್ರೆ ನಾನು ಮಾತ್ರ ಎಂಜಿಎಂ ಕಾಲೇಜಿಗೆ ಸೇರುವ ಉಮೇದು ಮಾಡಿದೆ. ಅದಕ್ಕೆ ಒಂದು ಕಾರಣ, ನನ್ನ ಮೆಚ್ಚಿನ ಪತ್ರಿಕೋದ್ಯಮ ವಿಷಯ ಅಲ್ಲಿ ಇದ್ದದ್ದು. ಇನ್ನೊಂದು ಕಾರಣ ಅದು ನಮ್ಮ ಮನೆಯ ಪಕ್ಕದಲ್ಲಿ ಇದ್ದದ್ದು.
Related Articles
Advertisement
ಈ ಸಲವೋ ನನ್ನ ದುರದೃಷ್ಟಕ್ಕೆ ನಾನೇ ಸಿಕ್ಕಿ ಬಿದ್ದಿದ್ದೆ. ಕೂದಲು ಸ್ವಲ್ಪ ಜಾಸ್ತಿ ಬಿಟ್ಟು ನೇರವಾಗಿ ಬಾಚಿದ್ದರಿಂದ ಪ್ರಿನ್ಸಿಪಾಲ್ ಮೇಡಮ್, “”ನಿನೆ ಅಡ್ಮಿಷನ್ ಕೊಡಲ್ಲ. ಟಿ.ಸಿ ತಕ್ಕೊಂಡು ಹೋಗು” ಅಂದ್ರು. ನಾನು ಎಷ್ಟೇ ರಿಕ್ವೆಮಾಡಿದ್ರೂ ಅದಕ್ಕೆ ಉತ್ತರಿಸಲೇ ಇಲ್ಲ. ಅಮ್ಮ ನನ್ನನ್ನೇ ನೋಡುತ್ತ ಇದ್ರು. ಕೊನೆಗೆ ನಾಳೆ ಪೂರ್ತಿ ಕಟ್ಟಿಂಗ್ ಮಾಡಿಕೊಂಡು ಬಾ. ಆಗ ಮಾತ್ರ ನಿನೆY ಅಡ್ಮಿಷನ್ ಕೊಡುತ್ತೇನೆ ಅನ್ನೋ ನಿರ್ಧಾರ ಮಾಡಿ ಬಿಟ್ರಾ. ನಾನು ಅದೇ ದಿನ ಮಧ್ಯಾಹ್ನ ಫುಲ್ ಬೋಳು ಮಾಡಿ ಬಂದೆ. ಈ ಕಟ್ಟಿಂಗ್‌ಗೆ ಪ್ರಿನ್ಸಿಪಾಲ್‌ರಿಂದ ಶ್ಲಾಘನೆ ಬಂತು.
ಪ್ರತಿಸಲವೂ ನಾನೇ ಸಿಕ್ಕಿ ಬೀಳ್ಳೋದು ಅಂತ ಅಂದುಕೊಳ್ಳುತ್ತ ಇದ್ದ ನಾನು, ಆ ದಿನ ನನ್ನ ಸ್ನೇಹಿತ ಸಿಕ್ಕಿಬಿದ್ದಾಗ ಅವನೊಡನೆ ಅವನ ಸಹಾಯಕ್ಕೆ ಅವನಿಗೆ ಧೈರ್ಯ ತುಂಬಲು ಅವನೊಂದಿಗೆ ಇದ್ದೆ. ಈ ಬಾರಿ ನಾನು ಸಿಕ್ಕಿ ಬೀಳಲ್ಲ. ಏಕೆಂದರೆ, ಕಟ್ಟಿಂಗ್ ಸರಿ ಮಾಡಿದ್ದೇನೆ ಅಂತ ಭಾವಿಸಿದ್ದೆ. ಆದ್ರೆ ಮೆಡಮ್ ಮಾತ್ರ ಸೀದಾ ಬಂದು, “”ಸಿಟ್ಟಲ್ಲಿ ನೀನು ಯಾಕೆ ಇಲ್ಲಿ ಬಂದದ್ದು. ನಿನೆYàನು ಕೆಲ್ಸ ಇಲ್ಲಿ” ಅಂತ ನನೆY ಬೈದ್ರು. ಸ್ವಲ್ಪ ನಿರಾಶೆಯಾಯಿತು. ಪರವಾಗಿಲ್ಲ , ಇದು ಕಾಲೇಜಿನಲ್ಲಿ ಕಾಮನ್ ಅಂತ ಮರುದಿನದಿಂದ ಅದನ್ನು ಮರೆತುಬಿಟ್ಟೆ. ಮುಂದೆ ಸಹ ಸಿಕ್ಕಿ ಬೀಳುತ್ತ ಇದ್ದೆ. ಒಂದು ಸಲ ಉದ್ದ ತೋಳಿನ ಯೂನಿಫಾರಂ ಹಾಕಿಕೊಂಡು ಬಂದಾಗ, ಇನ್ನೊಂದು ಸಲ ಐಡಿ ಹಾಕದೆ ಇದ್ದಾಗ, ಮತ್ತೆ ಪುನಃ ಕಟ್ಟಿಂಗ್‌ನ ವಿಷಯದಲ್ಲಿ , ಎಷ್ಟೋ ಸಲ ಅನ್ನಿಸಿದೆ, ಅವರ ಕಣ್ಣಿಗೆ ನಾನೇ ಕಾಣೋದು ಅಂತ !
ಕಾಲೇಜಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿ ಅಧ್ಯಕ್ಷೀಯತೆಯನ್ನು ವಹಿಸಿಕೊಂಡು ಆ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗುತ್ತಾರೆ. ಅಲ್ಲದೆ ಕಾಲೇಜಿನ ಪ್ರತಿ ಆಗು-ಹೋಗುಗಳ ಬಗ್ಗೆ ಗಮನಹರಿಸುತ್ತಾರೆ. ಸದಾ ಬ್ಯುಸಿ ಇದ್ದರೂ ಕೂಡ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಎಂದೂ ನಿರಾಕರಿಸಲಿಲ್ಲ. ವಿದ್ಯಾರ್ಥಿಗಳು ಯಾವುದನ್ನು ಮಾಡ್ಬೇಕು, ಕಾಲೇಜಿನಲ್ಲಿ ಹೇಗೆ ಇರಬೇಕು, ಶಿಸ್ತು- ಸ್ವತ್ಛತೆ ಎಲ್ಲಕ್ಕೂ ಮಹತ್ವ ಕೂಡುತ್ತ ಇದ್ದರು. ಕಾಲೇಜಿನ ನೀತಿನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯನ್ನು ಕೂಡುವಾಗಲೂ ಸದಾ ಧೈರ್ಯವಂತೆ. ಒಂದು ದಿನ ಹೀಗೆ ಕಾರ್ಯಕ್ರಮ ಒಂದರಲ್ಲಿ ಸೆಮಿನಾರ್ ಆಗುವ ವೇಳೆಯಲ್ಲಿ ಅದರಲ್ಲಿ ನಾನು ಮಾತಾಡಿ¨ªೆ. ನನ್ನ ಮಾತುಗಳನ್ನು ಕೇಳಿ ಪ್ರಿನ್ಸಿಪಾಲ್ ಮೇಡಮ್, “”ಒಳ್ಳೆ ಮಾತಾಡ್ತೀಯ, ವಿದ್ಯಾರ್ಥಿಗಳು ಹೀಗೆ ಇರಬೇಕು” ಅಂತ ಹೇಳಿದಾಗ ನಿಜಕ್ಕೂ ತುಂಬಾ ಖುಷಿಯಾಯಿತು. ಆವತ್ತಿನಿಂದ ಅವರು ಯಾವಾಗಲೂ ಸಿಟ್ಟಲ್ಲಿ ಇರುವವರು ಅಲ್ಲ, ನಾವು ತಪ್ಪು ಮಾಡಿದ್ರೆ ಅವರು ಸಹ ಬುದ್ಧಿವಾದ ಹೇಳುತ್ತಾರೆ ಅನ್ನೋದು ತಿಳಿಯಿತು.
ಇತ್ತೀಚೆಗೆ ನಮ್ಮ ಪ್ರಿನ್ಸಿಪಾಲ್ ಮೇಡಮ್‌ರವರ ನಿವೃತ್ತಿ ಕಾರ್ಯಕ್ರಮ ನಡೆಯಿತು. ಮೂರು ವರ್ಷ ಅವರ ಶಿಸ್ತಿನ ಪಾಳೆಯದಲ್ಲಿ ಬೆಳೆದ ನಮ್ಮಂಥ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟ ವಂತರು. ಮೇಡಮ್, ನೀವು ಹೇಳಿಕೊಟ್ಟ ಶಿಸ್ತು ನಮ್ಮ ಜೀವನದಲ್ಲಿ ಸದಾ ಇರುತ್ತದೆ. ನಿಮ್ಮ ಮುಂದಿನ ಜೀವನ ಆನಂದಮಯ ಆಗಿರಲಿ, ಮಿಸ್ ಯೂ ಮ್ಯಾಮ….
– ಸುಹಾನ್ ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ.ಕಾಲೇಜು, ಉಡುಪಿ