ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಅದೇಗೆ ಮಾಡುವುದಿಲ್ಲವೋ ನೋಡಿಯೇ ಬಿಡುತ್ತೇನೆ. ಉಪ ಚುನಾವಣೆ ನಂತರ ಹೋರಾಟ ನಡೆಸಿ ಇದೇ ಸರ್ಕಾರದಿಂದ ಸಾಲಮನ್ನಾ ಮಾಡಿಸುತ್ತೇನೆ. ಇದು ತನ್ನ ಸವಾಲು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗುಡುಗಿದರು.
ನಂಜನಗೂಡಿನ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಅವಧಿಯಲ್ಲಿ ರಾಜ್ಯ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾ ಮಾಡುವುದು ಬೇರೆ ವಿಷಯ. ಆದರೆ, ಸಿದ್ದರಾಮಯ್ಯ ಸರ್ಕಾರ ಅದೇಗೆ ರೈತರ ಸಾಲಮನ್ನಾ ಮಾಡುವು ದಿಲ್ಲ ಎಂದು ನೋಡುತ್ತೇನೆ. ಉಪ ಚುನಾ ವಣೆಯ ನಂತರ ಹೋರಾಟ ನಡೆಸಿ ಇದೇ ಸರ್ಕಾರದಿಂದ ಸಾಲ ಮನ್ನಾ ಮಾಡಿಸು ತ್ತೇವೆ ಎಂದು ಸವಾಲು ಹಾಕಿದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಹೇರಳವಾಗಿ ಹಣ ಸುರಿಯು ತ್ತಿದ್ದೀರಲ್ಲ ಸಿದ್ದರಾಮಯ್ಯನವರೆ, ಯಾರಪ್ಪನ ದುಡ್ಡು ಎಂದು ಜನರ ಹಣ ವನ್ನು ಹೀಗೆ ಖರ್ಚು ಮಾಡುತ್ತಿದ್ದೀರಿ? ನಿಮ್ಮ ತುಘಲಕ್ ದರ್ಬಾರು, ಸೊಕ್ಕಿನ ನಡೆ, ದುರಹಂಕಾರಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಿಜೆಪಿ ತತ್ವ, ನೀತಿ, ಸಿದ್ಧಾಂತಗಳಿಗೆ ಅನುಗುಣವಾಗಿ ಚುನಾವಣೆ ಎದುರಿಸು ತ್ತಿದೆ ಹೊರತು ಹಣಬಲದಿಂದ ಎಂದೂ ಚುನಾವಣೆ ಮಾಡಿಲ್ಲ. ಕಾಂಗ್ರೆಸ್‌ನವರು ಜನರ ಹಣವನ್ನು ಕೊಳ್ಳೆ ಹೊಡೆದು ತಂದು ಜನರಿಗೇ ಹಂಚಿ ಮತ ಗಳಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದ ಬಲದಿಂದ ಪೊಲೀಸರನ್ನು ದುರುಪ ಯೋಗಪಡಿಸಿ ಕೊಂಡು, ಎಲ್ಲಾ ಬಗೆಯ ವಾಮ ಮಾರ್ಗ ಗಳನ್ನು ಬಳಸಿಕೊಂಡು ಗೆಲ್ಲಲು ಯತ್ನಿಸು ತ್ತಿದ್ದಾರೆ. ಆದರೆ, ಈ ಬಾರಿ ಮತದಾರರು ಅವರ ತಂತ್ರಗಳಿಗೆ ಶರಣಾ ಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತಿಲ್ಲ. ವಾಸ್ತವಾಂಶ ಗಳನ್ನು ಜನರ ಎದುರಿಗಿಟ್ಟು ಮತ ಕೇಳುತ್ತಿದ್ದೇವೆ. ನಂಜುಂಡೇಶ್ವರ ಮತ್ತು ಚಾಮುಂಡೇಶ್ವರಿ ನಾಡಿನಲ್ಲಿ ಬದಲಾ ವಣೆಗಳನ್ನು ತರುವ ರೀತಿಯಲ್ಲಿ ಈ ಉಪ ಚುನಾವಣೆಗಳ ಫಲಿತಾಂಶ ಹೊರಬೀಳಲಿ ಎಂದು ಬೇಡಿಕೊಂಡಿದ್ದೇವೆ. ಅದು ಫಲ ನೀಡಲಿದೆ ಎಂದರು.
ಹ
ಣ ಹಂಚೋರನ್ನು ಹಿಡಿಯಿರಿ: ಹಣಹಂಚುವ ಕಾಂಗ್ರೆಸ್‌ನವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ಎಂದು ಕಾರ್ಯ ಕರ್ತರಿಗೆ ಕರೆ ನೀಡಿದ ಅವರು, ಶ್ರೀನಿವಾಸ ಪ್ರಸಾದ್ ಅವರ ಸ್ವಾಭಿಮಾನ ವನ್ನು ಬೆಂಬಲಿಸಿ ಬಿಜೆಪಿ ಗೆಲ್ಲಿಸಿ ಎಂದರು. ಸಚಿವರು ಬಂದಿರು ವುದು ಪ್ರಚಾರಕ್ಕಲ್ಲ, ಹಣ ಹಂಚಲು ಠಿಕಾಣಿ ಹೂಡಿದ್ದಾರೆ. ನಿಮ್ಮ ದುರಹಂಕಾರದ ಆಡಳಿತ ಮದ್ದರೆಯಲು ಎರಡೂ ಕ್ಷೇತ್ರದ ಮತದಾರರು ಸಿದ್ಧರಾಗಿದ್ದಾರೆ.
ರಾಜ್ಯದ ಖಜಾನೆಯನ್ನ ಲೂಟಿ ಮಾಡಿದ ಹಣ ಇಲ್ಲಿ ಹರಿಯುತ್ತಿದೆ. ನಂಜನಗೂಡಿನಲ್ಲಿ ಕಾಂಗ್ರೆಸ್ ದಯಾನೀಯ ಸೋಲು ಖಚಿತ ಎಂದರು. ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಎಂ.ಉದಾಸಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಸದಸ್ಯ ಸಿ.ರಮೇಶ್ ಇತರರು ಉಪಸ್ಥಿತರಿದ್ದರು.