Advertisement
ಮೊದಲಿಗೆ ನೀಲಕಂಠೇಶ್ವರ ದೇವಸ್ಥಾನ, ಹೊಳಲ್ಕೆರೆ ರಸ್ತೆಯ ಶ್ರೀಬರಗೇರಮ್ಮ ದೇವಿ ಹಾಗೂ ಉಚ್ಚಂಗಿ ಎಲ್ಲಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿತು. ಆನಂತರ ಮದಕರಿ ವೃತ್ತದಲ್ಲಿರುವ ರಾಜಾವೀರ ಮದಕರಿ ನಾಯಕರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮುರುಘಾ ಮಠಕ್ಕೆ ತೆರಳಿದರು. ಈ ವೇಳೆ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾಥ್ ನೀಡಿದರು.
Related Articles
Advertisement
ಜತೆಗೆ ಹಿರಿಯ ನಟರಾದದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಅವರು ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಸಿನಿಮಾ ಮಾಡೋಣ ಎಂದು ಹುಮ್ಮಸ್ಸು ತುಂಬಿದ್ದಾರೆ. ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಕಳೆದ 8-10 ವರ್ಷಗಳಿಂದ ಈ ಸಿನಿಮಾಬಗ್ಗೆ ಮಾತನಾಡುತ್ತಿದ್ದರು. ಕಥೆ ಆರಂಭಿಸಿ 4 ವರ್ಷ ಆಯ್ತು. 3 ವರ್ಷದಿಂದ ಹಲವು ಆಯಾಮಗಳಲ್ಲಿ ಕಥೆ ಬರೆಸಿದ್ದೇವೆ. ಚಿತ್ರದುರ್ಗದ ಬಿ.ಎಲ್ ವೇಣು ಅವರ ಕಥೆ, ಸಂಭಾಷಣೆ ಇದೆ‘ಎಂದರು.
“ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಸಿನಿಮಾ ಮುಹೂರ್ತ ನಡೆಯಲಿದೆ. 150 ದಿನದ ಚಿತ್ರೀಕರಣದಲ್ಲಿ ಶೇ.25 ರಷ್ಟು ಕೋಟೆಯಲ್ಲಿ ಶೂಟ್ ಮಾಡಲಿದ್ದು, ಉಳಿದಂತೆ ಕೋಟೆಯ ಗತ ವೈಭವವನ್ನು ಸ್ಟುಡಿಯೋದಲ್ಲಿ ಸೆಟ್ ಹಾಕಿ, ಗ್ರಾಫಿಕ್ಸ್ ಮೂಲಕ ಮಾಡಲಿದ್ದೇವೆ‘ ಎಂದು ಮಾಹಿತಿ ನೀಡಿದರು ರಾಕ್‌ಲೈನ್ ವೆಂಕಟೇಶ್. ಇಬ್ಬರು ನಾಯಕಿಯರು: ಚಿತ್ರದ ಬಗ್ಗೆ ಮಾತನಾಡಿದ ರಾಕ್‌ಲೈನ್ ವೆಂಕಟೇಶ್, “ಚಿತ್ರಕ್ಕೆ ಇಬ್ಬರು ನಾಯಕಿಯರಿರುತ್ತಾರೆ. ಪಂಚ ಭಾಷೆಗಳಲ್ಲಿ ಸಿನಿಮಾ ಬರುವುದರಿಂದ ಇನ್ನೂ ಆಯ್ಕೆ ನಡೆಯುತ್ತಿದೆ. ಒಂದು ವಾರದಲ್ಲಿ ಅಂತಿಮವಾಗಬಹುದು. ಇನ್ನೂ ಚಿತ್ರದ ಬಜೆಟ್,
ಲಾಭ, ನಷ್ಟದ ಬಗ್ಗೆ ನಾನು ಎಂದೂ ಮಾತನಾಡುವುದಿಲ್ಲ‘ ಎಂದರು. ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮಾತನಾಡಿ, “ಚಿತ್ರದುರ್ಗದಲ್ಲಿ ಜನರಬೆಂಬಲ ನೋಡಿ ನಮಗೆ ಆನೆ ಬಲ ಬಂದಂತಾಗಿದೆ. ಇಂಥದೊಂದು ಐತಿಹಾಸಿಕ ಚಿತ್ರವನ್ನು ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಸೇರಿ ಮಾಡಬೇಕುಎಂಬ ಆಸೆ ಮದಕರಿ ನಾಯಕರಿಗೂ ಇತ್ತು ಅನ್ನಿಸುತ್ತೆ. ಆ ಕಾರಣಕ್ಕೆ ಈವರೆಗೆ ಸಿನಿಮಾ ಆಗಿಲ್ಲ‘ ಎಂದರು.
“ಭಾರತದ ಯಾವುದೇ ಚಿತ್ರರಂಗದ ಸಿನಿಮಾಗಳಿಗೆ ಕಡಿಮೆ ಇಲ್ಲದಂತ ಗಂಡುಗಲಿ ಮದಕರಿ ನಾಯಕ ನಿರ್ಮಿಸುತ್ತೇವೆ. ಕನ್ನಡ ಬಾವುಟ ಹಾಗೂ ಮದಕರಿಯನ್ನು ಇಡೀ ಇಂಡಿಯಾ ತಲುಪಿಸುತ್ತೇವೆ. ಮದಕರಿ ಎಂತಹ ಸೇನಾನಿ ಎನ್ನುವುದು ಈ ಚಿತ್ರದ ಮೂಲಕ ಗೊತ್ತಾಗಬೇಕು ಎಂದು ಹೇಳಿದರು. “ಈ ಸಂಬಂಧ ಕಥೆಗಾರ ಬಿ.ಎಲ್ ವೇಣು, ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ಅವರ ಜತೆ ಮೂರು ದಿನ ಚರ್ಚಿಸಿದ್ದೇವೆ. ಗೆಜೆಟಿಯರ್‌ಗಳಲ್ಲೂ ಹುಡುಕಾಡಿ ಮಾಹಿತಿ ಸಂಗ್ರಹಿಸಿದ್ದೇವೆ. ಹೈದರಾಲಿ ಪಾತ್ರ ಸೇರಿದಂತೆ ಎಲ್ಲವನ್ನೂ ಶೋಧಿಸಿ ಚಿತ್ರ ಮಾಡುತ್ತಿದ್ದೇವೆ. ನಮಗೆ ನವ ದುರ್ಗೆಯರ ಆಶೀರ್ವಾದವೂ ಬೇಕು‘ ಎಂದರು.
–ತಿಪ್ಪೇಸ್ವಾಮಿ ನಾಕೀಕೆರೆ