Advertisement

ಗ್ರಾಹಕರಿಗೆ ರೈಲ್ವೇ ‘ಮದದ್‌’

09:10 AM Apr 16, 2018 | Team Udayavani |

ಹೊಸದಿಲ್ಲಿ: ರೈಲ್ವೇಯ ಕಾರ್ಯ ವೈಖರಿ, ಸೌಲಭ್ಯ ಕುರಿತು ಪ್ರಯಾಣಿಕರು ಟ್ವಿಟರ್‌, ಫೇಸ್‌ಬುಕ್‌, ಸಹಾಯವಾಣಿಗಳಲ್ಲಿ ಇಷ್ಟು ದಿನ ದೂರುಗಳನ್ನು ದಾಖಲಿಸುತ್ತಿದ್ದರು. ಈಗ ರೈಲ್ವೇಯದ್ದೇ ಆ್ಯಪ್‌ ಮೂಲಕ ದೂರು ದಾಖಲಿಸಬಹುದಾದಂಥ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಸದ್ಯದಲ್ಲೇ ಪರಿಚಯಿಸಲಿದೆ.

Advertisement

ಮದದ್‌ (ಮೊಬೈಲ್‌ ಅಪ್ಲಿಕೇಷನ್‌ ಫಾರ್‌ ಡಿಸೈರ್ಡ್ ಅಸಿಸ್ಟೆನ್ಸ್‌ ಡ್ನೂರಿಂಗ್‌ ಟ್ರಾವೆಲ್‌) ಎಂಬ ಹೆಸರಿನ ಮೊಬೈಲ್‌ ಆ್ಯಪ್‌ ಅನ್ನು ಈ ತಿಂಗಳಾಂತ್ಯಕ್ಕೆ ಇಲಾಖೆ ಪರಿಚಯಿಸಲಿದೆ. ಪ್ರಯಾಣದ ವೇಳೆಯೇ ಪ್ರಯಾಣಿಕರು ಶುಚಿತ್ವ, ಶೌಚಾಲಯ, ಆಹಾರದ ಗುಣಮಟ್ಟ ಮತ್ತು ಇತರ ಸಮಸ್ಯೆಗಳ ಕುರಿತು ಕುರಿತು ರೈಲ್ವೇ ಸಚಿವಾಲಯಕ್ಕೆ ದೂರು ನೀಡಬಹುದು. ಅಷ್ಟೇ ಅಲ್ಲದೆ, ತುರ್ತು ಸೇವೆಗಳಿಗೂ ಈ ಆ್ಯಪ್‌ ಮೂಲಕ ಬೇಡಿಕೆ ಇಡಬಹುದು. ಜತೆಗೆ ತಾವು ನೀಡಿದ ದೂರಿನ ಪ್ರಕ್ರಿಯೆಯ ಹಂತವನ್ನೂ ತಿಳಿದುಕೊಳ್ಳಬಹುದು.

ರೈಲ್ವೇ ಸಂಬಂಧ ದೂರು ನೀಡಲು ಸದ್ಯ 14 ಮಾರ್ಗಗಳಿವೆ. ಆದರೆ ಇವೆಲ್ಲವೂ ಪ್ರತಿಕ್ರಿಯೆ ನೀಡಲು ಅದರದ್ದೇ ಆದ ಪ್ರಕ್ರಿಯೆ ಸಮಯವನ್ನು ಹೊಂದಿವೆ. ಈ ಮಾರ್ಗಗಳ ಪೈಕಿ ಕೆಲವು ಮಾತ್ರ ಚಾಲನೆಯಲ್ಲಿವೆ.ಆದ್ದರಿಂದ ದೂರು ಪ್ರಕ್ರಿಯೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮತ್ತು ಪಾರದರ್ಶಕಗೊಳಿಸಲು ಪ್ರಯತ್ನಿಸಿದ್ದೇವೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಪ್ರಯಾಣಿಕರು ತಮ್ಮ ದೂರುಗಳನ್ನು ತಮ್ಮ ಪಿ.ಎನ್‌.ಆರ್‌. ಸಂಖ್ಯೆ ಜತೆ ಸಲ್ಲಿಸಬೇಕು. ದೂರು ದಾಖಲಾಗುತ್ತಿದ್ದಂತೆ ಪ್ರಯಾಣಿಕರಿಗೆ ಮೊಬೈಲ್‌ ಸಂದೇಶ ತಲುಪುತ್ತದೆ. ತಿಂಗಳು ಪೂರ್ತಿ ಪಡೆದ ದೂರುಗಳು ಮತ್ತು ನೀಡಿದ ಪರಿಹಾರದ ಕುರಿತು ಪ್ರಕಟನೆ ನೀಡುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next