Advertisement

ಯಂತ್ರ ಯೋಧ: ಸೇನೆಗಿನ್ನು ರೊಬೋಟ್‌ ಸಾಥ್‌

07:10 AM Aug 13, 2017 | |

ಹೊಸದಿಲ್ಲಿ: ದೇಶದ ಕಿರೀಟದಂತಿರುವ ಜಮ್ಮು-ಕಾಶ್ಮೀರದಲ್ಲಿ ಸೇನೆ ಪಡಬಾರದ ಕಷ್ಟಗಳನ್ನು ಎದುರಿಸಬೇಕಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲಿ ಕಿಡಿಗೇಡಿಗಳು ನಡೆಸುವ ಕಲ್ಲು ತೂರಾಟ, ಉಗ್ರರ ಉಪಟಳವು ಸೇನೆಯ ನಿದ್ದೆಗೆಡಿಸಿರುವಾಗ, ನಮ್ಮ ಯೋಧರ ಸಹಾಯಕ್ಕೆ ಯಂತ್ರ ಮಾನವ ಧಾವಿಸಿದ್ದಾನೆ!

Advertisement

ಏನಿದು ಎಂದು ಯೋಚಿಸುತ್ತಿದ್ದೀರಾ? ಕಲ್ಲುತೂರಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಾಗ, ಉಗ್ರರ ವಿರುದ್ಧ ಹೋರಾಡು ವಾಗ ಸೈನಿಕರಿಗೆ ಸಾಥ್‌ ನೀಡಲೆಂದು ರೊಬೋಟಿಕ್‌ ಶಸ್ತ್ರಾಸ್ತ್ರಗಳನ್ನು ಇನ್ನು ಬಳಸ ಲಾಗುತ್ತದೆ. ಹೀಗೊಂದು ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ಬಂದಿದ್ದು, ಈಗಾಗಲೇ 544 ರೊಬೋಟ್‌ಗಳ ಖರೀದಿಗೆ ಒಪ್ಪಿಗೆಯನ್ನೂ ನೀಡಿದೆ.

ಕಳೆದ 8 ತಿಂಗಳಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಸಿಎಐಆರ್‌ ಲ್ಯಾಬ್‌ ಈ ಯೋಜನೆಯನ್ನು ಕೈಗೆತ್ತಿಕೊಂಡು ಕಾರ್ಯನಿರ್ವಹಿಸುತ್ತಿದೆ. ಸದ್ಯದಲ್ಲೇ ಈ ಸಶಸ್ತ್ರ ರೊಬೋಟ್‌ಗಳು ಭಾರತೀಯ ಸೇನಾಪಡೆಯನ್ನು ಸೇರಿ, ಯೋಧರ ಸಾವು-ನೋವುಗಳನ್ನು ತಗ್ಗಿಸಲು ನೆರವಾಗಲಿದೆ. ದೇಶದ ಸದ್ಯದ ಸೇನಾ ಸ್ಥಿತಿಗತಿಗಳನ್ನು ಅರಿತು, ಎಂತಹ ಪ್ರದೇಶದ ಲ್ಲಾದರೂ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವಂತೆಯೇ ಈ ರೊಬೋಟ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next