Advertisement

ಮಾಬುಕಳ ಸೇತುವೆ ಪ್ರದೇಶ; ಊರಿನ ತ್ಯಾಜ್ಯಕ್ಕೆಲ್ಲ  ಇದುವೇ ಡಂಪಿಂಗ್‌ಯಾರ್ಡ್‌

09:03 PM Aug 26, 2021 | Team Udayavani |

ಕೋಟ: ಮಾಬುಕಳ ಸೇತುವೆಯ ಅಕ್ಕ-ಪಕ್ಕದ ಪ್ರದೇಶ  ಕೊಳಕು ತ್ಯಾಜ್ಯದಿಂದ ಗಬ್ಬು ನಾರುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಿವಿಧ ಪ್ರದೇಶಗಳ ಜನರು ತಮ್ಮ ಮನೆ ಬಳಕೆ ಹಾಗೂ ವಾಣಿಜ್ಯ ತ್ಯಾಜ್ಯಗಳನ್ನು ಇಲ್ಲಿ ಎಸೆಯುತ್ತಿದ್ದಾರೆ.

Advertisement

ಇದಕ್ಕೆ ಕಡಿವಾಣ ಹಾಕಲು ಸ್ಥಳೀಯಾಡಳಿತ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇಲ್ಲಿ ಹರಿಯುವ ಸೀತಾ ನದಿಯ ಒಡಲು ಅಪಾರ ಪ್ರಮಾಣದ ತಾಜ್ಯವನ್ನು ಪ್ರತಿನಿತ್ಯ ತನ್ನೊಳಗೆ ತುಂಬಿಕೊಳ್ಳುತ್ತಿದೆ. ಒಮ್ಮೊಮ್ಮೆ ಹೊಳೆಗೆ ತ್ಯಾಜ್ಯ ಎಸೆಯುವ ಬರದಲ್ಲಿ  ಸೇತುವೆಯ ಮೇಲೆ ಚೆಲ್ಲಾಪಿಲ್ಲಿಯಾಗುತ್ತದೆ. ಮನೆ ಹಾಗೂ ಕೋಳಿ ಫಾರ್ಮ್, ಕುರಿಯಂಗಡಿ ಸೇರಿದಂತೆ ನೂರಾರು ವಾಣಿಜ್ಯ ಮಳಿಗೆಗಳ ಕಸ ಇಲ್ಲಿ ಎಸೆಯಲಾಗುತ್ತದೆ.

ನೀರು-ಪರಿಸರ ಮಾಲಿನ್ಯ:

ಅಪಾರ ಪ್ರಮಾಣದ ತಾಜ್ಯ ಎಸೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರಿಗೆ ಈ ಪ್ರದೇಶ ಅತ್ಯಂತ ಕೊಳಕಾಗಿ ಕಾಣುತ್ತಿದ್ದು  ಊರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.  ಪ್ರತಿನಿತ್ಯ ಹೇರಳ ಪ್ರಮಾಣದ ತಾಜ್ಯ ಹೊಳೆ ಸೇರುತ್ತಿರುವುದರಿಂದ ನದಿಯ ನೀರು ಹಾಳಾಗುತ್ತಿದೆ.

ಸಿಸಿ ಕೆಮರಾ ಅಳವಡಿಸಲು ಸಲಹೆ:

Advertisement

ಸೇತುವೆಯ ಎರಡೂ ಕಡೆಗಳಲ್ಲಿ ಸಿಸಿ ಕೆಮರಾವನ್ನು ಅಳವಡಿಸಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹೆಚ್ಚಿ ಶಿಕ್ಷೆ ನೀಡುವುದು ಉತ್ತಮ ಎನ್ನುವ ಸಲಹೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಇತರ ಸಮಸ್ಯೆಗಳೇನು? :

  • ಕುಡಿಯುವ ನೀರಿನ ಸಮಸ್ಯೆ.
  • ಕೆಲವೊಂದು ಒಳ ರಸ್ತೆಗಳ ಅಭಿವೃದ್ಧಿ ಅಗತ್ಯವಿದೆ.
  • ಸಿ.ಆರ್‌.ಝಡ್‌.ನಿಂದ ಕೆಲವೆಡೆ ಹಕ್ಕುಪತ್ರ ಸಮಸ್ಯೆ ಇದೆ.

ದಂಡವಿಧಿಸುವ ಎಚ್ಚರಿಕೆಗೂ ಬೆಲೆ ಇಲ್ಲ  :

ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯು ವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಇಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ಸ್ಥಳೀಯ ಐರೋಡಿ ಗ್ರಾಮ ಪಂಚಾಯ ತ್‌ ನೀಡಿತ್ತು ಹಾಗೂ ತಪ್ಪಿತಸ್ಥರನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟಲ್ಲಿ ಬಹುಮಾನ ನೀಡುವುದಾಗಿ ಎಚ್ಚರಿಕೆಯ ಬ್ಯಾನರ್‌ ಕೂಡ ಅಳವಡಿಸಿದೆ. ಆದರೆ ಸಮಸ್ಯೆ ಇನ್ನೂ ಕೂಡ ನಿಂತಿಲ್ಲ.

ಹಿಡಿದುಕೊಟ್ಟವರಿಗೆ ಬಹುಮಾನ:  ಮಾಬುಕಳದ ಅಸುಪಾಸಿನ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವವರ ಪೋಟೋ ಅಥವಾ ವೀಡಿಯೋ ತೆಗೆದು 9980510880 ಈ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿದಲ್ಲಿ ತಪ್ಪಿಸ್ಥರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕೈಗೊಳ್ಳುವುದರ ಜತೆಗೆ, ಅಪರಾಧಿಗಳನ್ನು ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಐರೋಡಿ ಗ್ರಾ.ಪಂ. ಬ್ಯಾನರ್‌ ಅಳವಡಿಸಿದೆ.

ಹಲವು ಪ್ರಯತ್ನ :

ಸೇತುವೆಯ ಇಕ್ಕೆಲಗಳನ್ನು ಹಲವು ಬಾರಿ ಸ್ವತ್ಛಗೊಳಿಸಲಾಗಿದೆ. ಆದರೆ ಮತ್ತೆ-ಮತ್ತೆ ತ್ಯಾಜ್ಯ ಬಿಸಾಡುತ್ತಿದ್ದಾರೆ.  ನಮ್ಮ ಪಂಚಾಯತ್‌ ವ್ಯಾಪ್ತಿಯ ನಿವಾಸಿಗಳಿಗಿಂತ ಹೊರಗಿನವರೇ ಹೆಚ್ಚಿನ ಪ್ರಮಾಣದಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಪ್ಪಿತಸ್ಥರನ್ನು ಹಿಡಿದುಕೊಟ್ಟವರಿಗೆ ಬಹುಮಾನದ ಕೊಡುಗೆಯನ್ನು ಘೋಷಿಸಲಾಗಿದೆ. ಗ್ರಾ.ಪಂ.ನಲ್ಲಿ ಅನುದಾನದ ಕೊರತೆ ಇದ್ದು, ಮುಂದೆ ಸಿ.ಸಿ. ಟಿವಿ ಅಳವಡಿಸುವ ಕುರಿತೂ ಕ್ರಮಕೈಗೊಳ್ಳಲಿದ್ದೇವೆ.ರಾಜೇಶ್‌ ಶೆಣೈ, ಪಿಡಿಒ ಐರೋಡಿ ಗ್ರಾ.ಪಂ.

ಸೂಕ್ತ ಕ್ರಮ ಅಗತ್ಯ :

ಇಲ್ಲಿನ ತ್ಯಾಜ್ಯ ನಮ್ಮ ಊರಿಗೆ ಕಪ್ಪು ಚುಕ್ಕೆಯಾಗಿದೆ. ಕಸ ಎಸೆಯುವವರು ಸ್ವಲ್ಪ ಪ್ರಜ್ಞಾವಂತಿಕೆಯಿಂದ ಯೋಚಿಸಬೇಕು. ಸಮಸ್ಯೆ ಪರಿಹಾರಕ್ಕೆ  ಶಾಶ್ವತವಾದ ಕ್ರಮ ಸ್ಥಳೀಯಾಡಳಿತದಿಂದ ಅಗತ್ಯವಿದೆ. ರಾಜೇಶ್‌ ಹಂಗಾರಕಟ್ಟೆ, ಸ್ಥಳೀಯ ನಿವಾಸಿ

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next