ಮುಂಬಯಿ: ಬಾಲಿವುಡ್ ನಟ ಸಂಜಯ್ ದತ್ ಅವರು ಥರ್ಡ್ ಸ್ಟೇಜ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಬಾಲಿವುಡ್ ಹಾಗೂ ಸಂಜು ಬಾಬಾ ಅಭಿಮಾನಿಗಳನ್ನು ಶಾಕ್ ಗೊಳಗಾಗುವಂತೆ ಮಾಡಿದೆ.
ಈ ನಡುವೆ ದತ್ ಅವರ ಪತ್ನಿ ಮಾನ್ಯತಾ ಅವರು ತನ್ನ ಪತಿಯ ಅನಾರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಅವರು ತಮ್ಮ ಪತಿಯ ಮನೋಸ್ಥೈರ್ಯದ ಕುರಿತಾಗಿ ಭರವಸೆಯ ಮಾತನ್ನಾಡಿದ್ದಾರೆ ಮಾತ್ರವಲ್ಲದೇ ಈ ಕಠಿಣ ಪರಿಸ್ಥಿತಿಯನ್ನು ಸಂಜು ಗೆದ್ದು ಬರಲಿದ್ದಾರೆ ಎಂದು ಮಾನ್ಯತಾ ಅವರ ನಂಬಿಕೆಯಾಗಿದೆ.
‘ಸಂಜು ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಕಠಿಣ ಪರಿಸ್ಥಿತಿಯಿಂದ ಪಾರಾಗಲು ನಮಗೆ ನಿಮ್ಮೆಲ್ಲರ ಭರವಸೆ ಹಾಗೂ ಪ್ರಾರ್ಥನೆಗಳ ಅಗತ್ಯವಿದೆ. ಈ ಹಿಂದೆಯೂ ಇಂತಹ ಅನೇಕ ಕಠಿಣ ಪರಿಸ್ಥಿತಿಗಳನ್ನು ನಮ್ಮ ಕುಟುಂಬ ಎದುರಿಸಿದೆ ಮತ್ತು ಅವುಗಳನ್ನು ಗೆದ್ದು ಬಂದಿದೆ. ಹಾಗಾಗಿ ಇದರಿಂದಲೂ ನಾವು ಪಾರಾಗಲಿದ್ದೇವೆ ಎಂಬ ವಿಶ್ವಾಸ ನನಗಿದೆ’ ಎಂದು ಮಾನ್ಯತಾ ಅವರು ಇಂದು ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Related Articles
ಸಂಜಯ್ ದತ್ ಅವರು ಶ್ವಾಸಕೋಶದ ಮೂರನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಮಂಗಳವಾರವಷ್ಟೇ ಸುದ್ದಿಯಾಗಿತ್ತು. ಮತ್ತು ಇದರ ಚಿಕಿತ್ಸೆಗಾಗಿ ತಾನು ‘ಮೆಡಿಕಲ್ ಬ್ರೇಕ್’ ತೆಗೆದುಕೊಳ್ಳುತ್ತಿರುವುದಾಗಿ ಸಂಜು ಬಾಬಾ ಅವರು ತಮ್ಮ ಟ್ವಿಟ್ಟರ್ ಸಂದೇಶದ ಮೂಲಕ ತಿಳಿಸಿದ್ದರು. ಮತ್ತು ತಮ್ಮ ಅಭಿಮಾನಿಗಳಿಗೆ ಧೈರ್ಯ ತಾಳುವಂತೆಯೂ ಸಂಜು ಮನವಿ ಮಾಡಿಕೊಂಡಿದ್ದರು.
ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣದಿಂದಾಗಿ ನಟ ಸಂಜಯ್ ದತ್ ಅವರು ಕಳೆದ ವಾರ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಆಗಸ್ಟ್ 10ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ಮನೆಗೆ ಹಿಂದಿರುಗಿದ್ದರು.
ದತ್ ಅವರ ಕೋವಿಡ್ 19 ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು ಆದರೆ ಇಲ್ಲಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವ ವಿಚಾರ ತಪಾಸಣೆಯಲ್ಲಿ ಬೆಳಕಿಗೆ ಬಂದಿತ್ತು.
ನಟ ಸಂಜಯ್ ದತ್ ಅವರು ಆಗಸ್ಟ್ 08ರಂದು ಮಾಡಿದ್ದ ಟ್ವೀಟ್: