Advertisement

Award ಸಮಾಜದ ಬೆಳವಣಿಗೆಯಲ್ಲಿ ಮಾಧ್ಯಮ ಸೇವೆ ವಿಶಿಷ್ಟ : ಖಾದರ್‌

12:00 AM Sep 11, 2023 | Team Udayavani |

ಬೆಂಗಳೂರು: ಸಮಾ ಜದ ಬೆಳವಣಿಗೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಅತ್ಯಂತ ಆದರಣೀಯ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಬರುವ ಹೊಸಬರನ್ನು ಪರಿಷ್ಕರಣೆಗೊಳಪಡಿಸುವ ನಿಟ್ಟಿನಲ್ಲಿ “ಮಾಮ್‌’ ಸಂಸ್ಥೆ ತೊಡಗಿಕೊಳ್ಳಲಿ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

Advertisement

ಮೀಡಿಯಾ ಅಸೋಸಿಯೇಶನ್‌ ಆಫ್ ಮಂಗಳ ಗಂಗೋತ್ರಿ (ಮಾಮ್‌- ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ), ಕರ್ನಾಟಕ ಮಹಿಳಾ ಯಕ್ಷಗಾನ ಬೆಂಗಳೂರು ಸಹಯೋಗದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ “ಮಾಮ್‌ ಇನ್‌ಸ್ಪೈರ್‌’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮಾಮ್‌ ಕಾರ್ಯಕ್ರಮಗಳಿಗೆ 30 ಸಾವಿರ ರೂ. ನೆರವು ನೀಡುವುದಾಗಿ ಘೋಷಿಸಿದರು.

ವಿದ್ಯಾರ್ಥಿಗಳಿಗೆ ಸಹಕಾರ
ಮಾಮ್‌ ಗೌರವಾಧ್ಯಕ್ಷ ವೇಣು ಶರ್ಮಾ ಮಾತನಾಡಿ, 24 ವರ್ಷಗಳನ್ನು ಮುಗಿಸಿ ಮುಂದಿನ ವರ್ಷ ಅತಿ ದೊಡ್ಡ ಕಾರ್ಯಕ್ರಮ ಮಾಡುವ ಸಂಕಲ್ಪ ಹೊಂದಿದ್ದೇವೆ. ಸಮಾನ ಮನಸ್ಕರೆಲ್ಲ ಸೇರಿ ಮಾಮ್‌ ಸಂಸ್ಥೆಯನ್ನು ಕಟ್ಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು. ಕೆ.ಆರ್‌.ಪುರ ಕಾಲೇಜಿನ ಪ್ರಾಂಶುಪಾಲ ಪ್ರತಿಭಾ ಪಾರ್ಶ್ವನಾಥ್‌ ಮಾತನಾಡಿ, ಮಾಮ್‌ ಕೇವಲ ಮಂಗಳೂರು ವಿಶ್ವವಿದ್ಯಾನಿಲಯಕ್ಕಷ್ಟೇ ಸೀಮಿತವಾಗಿರದೆ ಕರ್ನಾಟಕದ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು. ಕರ್ನಾಟಕ ಕಲಾದರ್ಶಿನಿಯ ಶ್ರೀನಿವಾಸ್‌ ಸಾಸ್ತಾನ ಮತ್ತಿತರರಿದ್ದರು.

ಪ್ರಶಸ್ತಿ ವಿಜೇತರು
2020-21 ನೇ ಸಾಲಿನ ಪದವಿಪೂರ್ವ ವಿಭಾಗ
1.ರಶ್ಮಿ ಯಾದವ್‌ (ಎಸ್‌ಡಿಎಂ ಕಾಲೇಜು, ಉಜಿರೆ)
2.ಯಕ್ಷಿತಾ (ಆಳ್ವಾಸ್‌ ಕಾಲೇಜು, ಮೂಡುಬಿದಿರೆ)
3.ಶಾಮ ಪ್ರಸಾದ್‌ (ಎಸ್‌ಡಿಎಂ, ಉಜಿರೆ)
4. ಪ್ರೋತ್ಸಾಹಕ ಬಹುಮಾನ ನವ್ಯಶ್ರೀ ಶೆಟ್ಟಿ, ಎಂಜಿಎಂ ಕಾಲೇಜು ಉಡುಪಿ.
2020-21ನೇ ಸಾಲಿನ ಸ್ನಾತಕೋತ್ತರ ವಿಭಾಗ
1. ಚೈತ್ರಾ (ಎಸ್‌ಡಿಎಂ ಕಾಲೇಜು ಉಜಿರೆ)
2. ಸ್ವಸ್ತಿಕ್‌ ಕನ್ಯಾಡಿ (ಎಸ್‌ಡಿಎಂ ಕಾಲೇಜು ಉಜಿರೆ)
2021-22ನೇ ಸಾಲಿನ ಸ್ನಾತಕೋತ್ತರ ವಿಭಾಗ
1. ಇಂದೂಧರ ಹಳೆಯಂಗಡಿ (ಆಳ್ವಾಸ್‌ ಕಾಲೇಜು ಮೂಡುಬಿದಿರೆ)
2. ನಳಿನಿ (ಆಳ್ವಾಸ್‌ ಕಾಲೇಜು ಮೂಡುಬಿದಿರೆ)

Advertisement

Udayavani is now on Telegram. Click here to join our channel and stay updated with the latest news.

Next