Advertisement

ಎಂ.ಎ.ಹೆಗಡೆ ಅವರಿಗೆ‌ ಮರಣೋತ್ತರ ಚಂದುಬಾಬು‌ ಪ್ರಶಸ್ತಿ ಪ್ರದಾನ‌

06:15 PM Oct 24, 2021 | Team Udayavani |

ಶಿರಸಿ: ಸರಕಾರಕ್ಕೆ ಬಾಗದ ಹೋರಾಟಗಾರ, ಯೋಜನೆ ‌ತಲುಪಿಸಲು ಜನ ಸೇವಕ ಎಂದು ಹಿರಿಯ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.

Advertisement

ನಗರದ ಟಿಎಂಎಸ್ ಸಭಾಂಗಣದಲ್ಲಿ ರವಿವಾರ ಯಕ್ಷ ಸಂಭ್ರಮ ಟ್ರಸ್ಟ ನೀಡುವ ಚಂದುಬಾಬು ಪ್ರಶಸ್ತಿಯನ್ನು ದಿವಂಗತ‌ ಪ್ರೋ.ಎಂ.ಎ.ಹೆಗಡೆ ಅವರಿಗೆ ಮರಣೋತ್ತರವಾಗಿ ಅವರ ಮಗ ವಿನಾಯಕ ಹೆಗಡೆ ಅವರಿಗೆ ಪ್ರದಾನ ಮಾಡಿ‌ ಮಾತನಾಡಿದರು.

ದೋಷ ಕಂಡರೆ ಸಹಿಸದೇ ಇದ್ದರೂ ಪ್ರತಿಭೆ‌ ಕಂಡಾಗ ಪ್ರೋತ್ಸಾಹಿಸುವ ಗುಣ ಪ್ರೋ.ಎಂ.ಎ.ಹೆಗಡೆ ಅವರದ್ದು. ಪಾಂಡಿತ್ಯ ಉಳ್ಳ ಶಿಕ್ಷಕ. ವಿದ್ವತ್ ಪರಂಪರೆ ಬೆಳೆಸುವ ಆಧ್ಯಾಪಕರು. ಎಂ.ಎ.ಹೆಗಡೆ ಅವರ ಕಾರ್ಯ ಕ್ಷಮತೆಗೆ ಸರಕಾರವೇ ಎದೆ ಮುಟ್ಟಿಕೊಳ್ಳುವಂತಿತ್ತು. ವಿನಯ, ದೈನ್ಯವನ್ನು ಬೇರ್ಪಡಿಸಿಕೊಂಡು‌ ಕೆಲಸ ಮಾಡಿದವರು ಅವರು ಎಂದರು‌.

ಎಂ ಎ ಹೆಗಡೆ ಅಡಿಯಲ್ಲಿ ಬೆಳೆದವರಿಗೆ ವ್ಯಕ್ತಿತ್ವ, ಮಾತುಗಾರಿಕೆ ಎಲ್ಲವೂ ಸಹಜವಾಗಿಯೇ ಬೆಳೆದುಬರುತ್ತಿತ್ತು. ಪದ ಪ್ರಯೋಗ ಬಳಕೆ, ಅದಕ್ಕೆ ಪೂರಕ ಮಾತುಕಥೆ ಅವರಿಂದ ಅನೇಕರು ಕಲಿತಿದ್ದರು ಎಂದರು.

ಇದನ್ನೂ ಓದಿ: ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

Advertisement

ಯಕ್ಷ ಸಂಭ್ರಮದ ತಾಳ ಮದ್ದಲೆ‌ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಟಿ ಎಂ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಹುಳಗೋಳ, ಮನುಷ್ಯನಿಗೆ ಆರೋಗ್ಯ ಮತ್ತು ಧೈರ್ಯ ಮುಖ್ಯ. ಇವೆರಡಿದ್ದರೆ ಮುಂದುವರಿಯಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನನ್ನು ಉಲ್ಲಸಿತವಾಗಿ ಇಡುತ್ತವೆ. ಯಕ್ಷಗಾನ ನಮ್ಮ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿದ್ದು, ನಮಗೆ ಕಟ್ಟಿಕೊಟ್ಟಿದೆ ಎಂದರು.

ಸಂಕಲ್ಪದ ಪ್ರಮೋದ ಹೆಗಡೆ, ಎಂ.ಎ.ಹೆಗಡೆ ಅವರು ಮೂರೂ ಸರಕಾರದ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಜಿಲ್ಲೆಗೊಂದು‌ ವ್ಯವಸ್ಥಿತ ರಂಗ‌ ಮಂದಿರದ‌ ಕೊರತೆ‌ ಇದೆ‌ ಎಂದರು.

ಯಕ್ಷ ಸಂಭ್ರಮದ ಅಧ್ಯಕ್ಷ ಕೇಶವ ಹೆಗಡೆ ಗಡಿಕೈ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಚಂದು ಸ್ವಾಗತಿಸಿದರು. ಅನಂತ‌ ದಂತಳಿಕೆ ಸಮ್ಮಾನ‌ ಪತ್ರ ವಾಚಿಸಿದರು. ವಾದಿರಾಜ  ಕಲ್ಲೂರಾಯ‌ ನಿರ್ವಹಿಸಿದರು. ಎಂ.ವಿ.ಹೆಗಡೆ‌ ಅಮಚಿಮನೆ ವಂದಿಸಿದರು.

ಈ ವೇಳೆ ವಿನಾಯಕ‌ ಎಂ.ಹೆಗಡೆ, ಬಕುಲ ಹೆಗಡೆ, ಸಾವಿತ್ರಿ ಹೆಗಡೆ, ಶ್ರೀಪಾದ ಹೆಗಡೆ  ಸೋಮನಮನೆ,‌ ಇಂದಿರಾ‌ ಹೆಗಡೆ ಇತರರು ಇದ್ದರು.

ಮತ್ತೀಘಟ್ಟದ ರಾಮಕೃಷ್ಣ‌ ಹೆಗಡೆ ಅವರಿಗೆ ಚಂದುಬಾಬು‌ ಪ್ರಶಸ್ತಿ ಮೊತ್ತವನ್ನು ಅಕಾಡೆಮಿ‌ ಸದಸ್ಯೆ ನಿರ್ಮಲಾ‌ ಹೆಗಡೆ ಅವರ ಮೂಲಕ‌ ಹಸ್ತಾಂತರಿಸಿದರು.

ಬಳಿಕ ಎಂ.ಎ.ಹೆಗಡೆ ಅವರು ಬರೆದ ಗಯಯಜ್ಞ ಆಖ್ಯಾನ ಪ್ರಸ್ತುತಗೊಂಡಿತು. ವಿ.ಗಣಪತಿ ಭಟ್ಟ, ಅನಂತ ದಂತಳಿಕೆ, ನರಸಿಂಹ ಭಟ್ಟ, ಪ್ರಸನ್ನ ಭಟ್ ಹಿಮ್ಮೇಳದಲ್ಲಿ, ಉಮಾಕಾಂತ ಭಟ್ಟ, ವಾಸುದೇವ ರಂಗಾ ಭಟ್ಟ, ಗಣಪತಿ ಸಂಕದಗುಂಡಿ, ವಾದಿರಾಜ‌ ಕಲ್ಲೂರಾಯ, ಪ್ರಸಾದ ಭಟಕಳ, ಡಿ.ಕೆ.ಗಾಂವ್ಕರ್ ಅರ್ಥದಾರಿಗಳಾಗಿ‌ ಪಾಲ್ಗೊಂಡರು. ಸೋಮವಾರ ದಕ್ಷಾದ್ವರ ತಾಳಮದ್ದಲೆ ನಡೆಯಲಿದ್ದು, ಸತೀಶ ಪಟ್ಲ ಇತರರು ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next