ಹೊಸಪೇಟೆ: ವಿಶ್ಚವಿಖ್ಯಾತ ಹಂಪಿ ವಿಜಯನಗರ ಸಾಮ್ರಾಜ್ಯ ಹಾಗೂ ಕೃಷ್ಣ ದೇವರಾಯರ ಕುರಿತು ಇತಿಹಾಸಕಾರರು ಬೆಳಕು ಚೆಲ್ಲಬೇಕಾದ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅಭಿಪ್ರಾಯ ಪಟ್ಟರು.
ಹಂಪಿಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಪರಂಪರೆ, ಸಂಸ್ಕೃತಿ, ಕಲೆ, ಇತಿಹಾಸ ಹಾಗೂ ಪುರಾತನ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮೀಸಲಿಡಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ವಿಜಯನಗರ ಸಾಮ್ರಾಜ್ಯವನ್ನು ಹಲವಾರು ವಂಶಗಳು ಆಳಿದ್ದಾರೆ.
ಅದರಲ್ಲಿ ಶ್ರೀ ಕೃಷ್ಣದೇವರಾಯರ ಅಳ್ವಿಕೆ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಉತ್ತಂಗದಲ್ಲಿತ್ತು. ಅವರ ಆಡಳಿತಾವಧಿಯಲ್ಲಿ ಕೇವಲ ಶಿಲ್ಪಕಲೆ ಮಾತ್ರ ಆದ್ಯತೆ ನೀಡಿರದೇ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಆಧ್ಯತೆ ನೀಡಲಾಗಿತ್ತು.ಯುವಪೀಳಿಗೆ ಹಂಪಿಗೆ ಭೇಟಿ ನೀಡಿ, ಇಲ್ಲಿನ ಸಾಹಿತ್ಯ, ಸಂಸ್ಕೃತಿ, ಕೆಲೆ, ಅರಿಯಬೇಕಿದೆ. ಈ ಮೂಲಕ ಹಂಪಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ:ಅಸ್ತಿತ್ವ ಕಳೆದುಕೊಳ್ಳುತ್ತಿರುವ ಎಸ್‌ಟಿ 596 ಮಿಡಿ ಬಸ್‌ಗಳು
ವಿರೂಪಾಕ್ಷೇಶರನ ದರ್ಶನ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಕುಟುಂಬ ಸದಸ್ಯರು ಶನಿವಾರ ಬೆಳಗ್ಗೆ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದರು.
ಕಮಲಾಪುರದ ಮಯೂರ ಹೋಟೆಲ್‌ನಿಂದ ನೇರವಾಗಿ ಹಂಪಿಗೆ ತೆರಳಿದ ಅವರು ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದರು. ದೇವಸ್ಥಾನದ ಪಟ್ಟದ ಆನೆ ಲಕ್ಷ್ಮೀ ಹೂಮಾಲೆ ಹಾಕಿ ಬರ ಮಾಡಿಕೊಂಡಿತು. ಬಳಿಕ ಕಮಲಾ ಮಹಲ್, ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳಿ ಸ್ಮಾರಕಗಳನ್ನು ವೀಕ್ಷಿಸಿದರು.