Advertisement

ಪಕ್ಷದ ಮಾತಿಗೆ ಒಪ್ಪಿ ಸಿಎಂ ಬಾದಾಮಿ ಸ್ಪರ್ಧೆ

06:15 AM Apr 24, 2018 | |

ರಾಜ್ಯ ಕಾಂಗ್ರೆಸ್‌ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಪಕ್ಷದ ಕಾರ್ಯತಂತ್ರಗಳು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಉದಯವಾಣಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

Advertisement

ಈ ಬಾರಿಯ ಪ್ರಣಾಳಿಕೆಯಲ್ಲಿ ಏನೇನು ವಿಶೇಷ ಇರಬಹುದು ?
          ಈ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ನ ರಾಜಕೀಯ ಇಚ್ಛಾ ಶಕ್ತಿ ಪ್ರದರ್ಶಿಸಲು ಬದ್ಧರಾಗಿದ್ದೇವೆ. ಕಳೆದ ಪ್ರಣಾಳಿಕೆಯಲ್ಲಿ ಘೋಷಿಸಿ ರುವ 2,165 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡದ ಇಪ್ಪತ್ತಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ಪರ್ಫಾರ್ಮಿಂಗ್‌ ಸರಕಾರ. ನಮ್ಮ ಸರಕಾರದ ಬಗ್ಗೆ ಆಡಳಿತ ವಿರೋಧಿ ಅಲೆ ಇಲ್ಲ. ಎಲ್ಲ ಯೋಜನೆಗಳು ಸಾಮಾನ್ಯ ಜನರಿಗೆ ತಲುಪುವ ಯೋಜನೆಗಳಿವೆ. ಒಂದಿಲ್ಲೊಂದು ಯೋಜನೆಗಳು ರಾಜ್ಯದ ಜನತೆಗೆ ತಲುಪಿವೆ. 

ಈ ಚುನಾವಣೆಯಲ್ಲಿ ಸ್ವತಃ ಮುಖ್ಯಮಂತ್ರಿಯೇ ಸೋಲುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
        ಅದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿಯವರು ಚಾಮುಂಡೇಶ್ವರಿ ಯಲ್ಲಿ ನಿಲ್ಲಿಸಿರುವ ಅಭ್ಯರ್ಥಿ ನೋಡಿದರೆ ಅವರ ದಯನೀಯ ಸ್ಥಿತಿ ಗೊತ್ತಾಗುತ್ತದೆ. ಬಾದಾಮಿಯಲ್ಲಿ ಸ್ಪರ್ಧೆ ಮಾಡುವುದು ಮುಖ್ಯಮಂತ್ರಿಯ ಇಚ್ಚೆಯಾಗಿರಲಿಲ್ಲ. ಪಕ್ಷದ ಮಾತಿಗೆ ಕಟ್ಟುಬಿದ್ದು ಮುಖ್ಯಮಂತ್ರಿ ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿಎಂ ಗೆದ್ದೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಅಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ.

ಜೆಡಿಎಸ್‌- ಬಿಜೆಪಿ ಚಾಮುಂಡೇಶ್ವರಿಯಲ್ಲಿ ಮಾತ್ರ ಒಳ ಒಪ್ಪಂದ ಮಾಡಿಕೊಂಡಿದ್ದಾರಾ ?
       ಮುಖ್ಯಮಂತ್ರಿಗಳ ವಿರುದ್ಧ ಒಳ ಒಪ್ಪಂದ ಮಾಡಿಕೊಂಡಿರುವುದು ನೋಡಿದರೆ, ಆ ಪಕ್ಷಗಳ ಸ್ಥಿತಿ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ಜೆಡಿಎಸ್‌ ಸ್ಥಿತಿ ಹೇಗಿದೆ ಎನ್ನುವುದು ಅವರು ಬೇರೆ ಪಕ್ಷಗಳ ಅಭ್ಯರ್ಥಿ ಗಳಿಗಾಗಿ ಕಾಯುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಬಿಜೆಪಿ ಯವರು ನಾಲ್ಕು ಲಿಸ್ಟ್‌ ಬಿಡುಗಡೆ ಮಾಡಿದರೂ ಇನ್ನೂ 224 ಅಭ್ಯರ್ಥಿಗಳು ಸಿಗದಿರುವುದು ಅವರ ದಯನೀಯ ಸ್ಥಿತಿ ಎದ್ದು ಕಾಣುತ್ತಿದೆ. 

– ಶಂಕರ ಪಾಗೋಜಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next