ಬೆಂಗಳೂರು: ರಾಜ್ಯದ ಸಚಿವ ಸಂಪುಟದಲ್ಲಿ ಬೆಳಗಾವಿ ಮತ್ತು ಬೆಂಗಳೂರಿಗೆ ಸಿಂಹಪಾಲು ನೀಡಲಾಗಿದೆ. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹಗರಣ ಮಾಡಿದವರಿಗೆ, ಶಾಸಕರ ಮಧ್ಯೆ ವಿಷಬೀಜ ಬಿತ್ತಿದವರಿಗೆ ಸ್ಥಾನ ನೀಡಿದ್ದಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅಸಮಧಾನ ವ್ಯಕ್ತಪಡಿಸಿದರು.
ದೆಹಲಿಗೆ ಹೊರಟ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಡಿಯೂರಪ್ಪ, ಮೋದಿಯವರ ಮುಖ ನೋಡಿ ಜನ ಬೆಂಬಲ ನೀಡಲಾಗಿದೆ. ಯೋಗೀಶ್ವರ್ ಮುಖ ನೋಡಿ ಮುಖ ನೋಡಿ ಬೆಂಬಲ ನೀಡಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು? ಯೋಗೇಶ್ವರ್ ಅವರ ಕ್ಷೇತ್ರದಲ್ಲಿಯೇ ಸೋತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲೀಗ ಬಾಗಲಕೋಟೆ ಶಕ್ತಿ ಕೇಂದ್ರ: ಯಾವ ಜಿಲ್ಲೆಗೂ ಇಲ್ಲದ ಸೌಭಾಗ್ಯ ಕೋಟೆನಾಡಿಗೆ
ಲೋಕಸಭೆ ಎಲೆಕ್ಷನ್ ಗೆ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು. ರಾಮನಗರ ಉಪಚುನಾವಣೆಗೂ ನಿಲ್ಲದೆ ಫಿಕ್ಸಿಂಗ್ ಮಾಡಿಕೊಂಡಿದ್ದರು. ಮೆಗಾಸಿಟಿ ದೊಡ್ಡ ಹಗರಣ ನಡೆಸಿದ್ದಾರೆ. ನಮ್ಮ ನಾಯಕರನ್ನು ಭೇಟಿಯಾಗಿ ಹಗರಣದ ಬಗ್ಗೆ ದೂರು ನೀಡುವೆ. ಮೆಗಾಸಿಟಿ ಹಗರಣದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಸಮಯ ಬಂದಾಗ ಅವೆಲ್ಲವನ್ನು ಬಿಡುಗಡೆ ಮಾಡುತ್ತೇನೆ ಎಂದು ಯೋಗೇಶ್ವರ್ ವಿರುದ್ಧ ಆಕ್ರಶೋ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿಯಾಗಲು ನಾನು ಸಮಯ ಕೇಳಿಲ್ಲ. ಯಾರಾದರೂ ಸಿಕ್ಕರೆ ಮಾತನಾಡುತ್ತೇನೆ. ಸಚಿವ ಸ್ಥಾನ ಸಿಗದೆ ಇರುವ ಬಗ್ಗೆ ನೋವಿದೆ. ಆದರೆ ಸಿಎಂ ಯಡಿಯೂರಪ್ಪ, ಸಂಘಟನೆಯ ವಿರುದ್ಧ ದೂರು ನೀಡುವುದಿಲ್ಲ ರೇಣುಕಾಚಾರ್ಯ ಹೇಳಿದರು.