Advertisement

ಯಾರೋ ಸೋತವರು ದೆಹಲಿಗೆ ಹೋದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಮಾಡಲ್ಲ: ರೇಣುಕಾಚಾರ್ಯ

02:53 PM May 13, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಮಾಡುವುದು ಅಪಪ್ರಚಾರ, ಹಸಿ ಸುಳ್ಳು ಮತ್ತು ಊಹಾಪೋಹ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಪ್ರಶ್ನಾತೀತ ನಾಯಕ. 2023ರ ಚುನಾವಣೆಗೂ ಅವರ ಮಾರ್ಗದರ್ಶನದಲ್ಲೇ ಸಂಘಟನೆ ಮಾಡುತ್ತೇವೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ  ಅವರು, ಯಾರೋ ಒಬ್ಬರು ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ ತಕ್ಷಣ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಲ್ಲ. ಅವರನ್ನು ಮಂತ್ರಿ ಮಾಡಿದ್ದಕ್ಕೆ ಇದೇ ಕೊಡುಗೆ. ಅವರ ಕ್ಷೇತ್ರಕ್ಕೂ ಇಲ್ಲ ಜನಪರ ಕೆಲಸ ಮಾಡಲ್ಲ. ಕೋವಿಡ್ ಬಂದಾಗ ಒಬ್ಬ ಮಂತ್ರಿಯಾಗಿ ಜನರ ಪರ ಕೆಲಸ ಮಾಡುವುದು ಬಿಟ್ಟು ದೆಹಲಿಯಲ್ಲಿ ಲಾಬಿ ಮಾಡುತ್ತಿಯಲ್ಲೊ ಪುಣ್ಯಾತ್ಮ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಇದನ್ನೂ ಓದಿ:ಭಾರತ್ ಬಯೋಟೆಕ್ ನ 50 ಉದ್ಯೋಗಿಗಳಿಗೆ ಕೋವಿಡ್!; ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

ಜನರು ಸಾವು ಬದುಕಿನ ನಡುವೆ ಹೋರಾಡುವಾಗ ನಾವು ರಾಜಕಾರಣ ಮಾಡಬಾರದು. ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರು ಮತ್ತು ರಾಜ್ಯಾಧ್ಯಕ್ಷರು ಅನೇಕಬಾರಿ ಸ್ಪಷ್ಟಪಡಿಸಿದ್ದಾರೆ. ಈ ಅವಧಿ ಸಂಪೂರ್ಣವಾಗಿ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next