ಬೆಂಗಳೂರು: ಕಾಂಗ್ರಸ್ ನವರು ಅಲ್ಪಸಂಖ್ಯಾತ ಉದ್ದಾರಕರು ಎನ್ನುವುದು ಬರೀ ಹೆಸರಗೋಸ್ಕರ ಅಷ್ಟೇ. ಕಾಂಗ್ರಸ್ ಇದುವರೆಗೆ ಅಲ್ಪಸಂಖ್ಯಾತರನ್ನು ಉದ್ದಾರ ಮಾಡಿಲ್ಲ ಬದಲಿಗೆ ಅವರನ್ನು ಬಳಸಿ ಬಿಸಾಕುವಂತ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನಿನ್ನೆ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರ ಪದಗ್ರಹಣ ನಡೆದಿದೆ. ಈ ವೇಳೆ ಜಮೀರ್ ಅಹಮದ್ ರನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್ ಅಲ್ಪ ಅಲ್ಪಸಂಖ್ಯಾತರನ್ನು ಓಟಿಗಾಗಿ ಮಾತ್ರ ಬಳಿಸಿಕೊಳ್ಳುತ್ತಿದೆ. ಇದನ್ನುಅಲ್ಪಸಂಖ್ಯಾತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಬೆಂಬಲಿಗರನ್ನು ಮೂಲೆಗುಂಪು ಮಾಡುವ ಕೆಲಸ ಕಾಂಗ್ರೆಸ್ ಅಗ್ರಗಣ್ಯ ನಾಯಕಿಯಿಂದ ನಡೆಯುತ್ತಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಸೂಚನೆ ಕೊಟ್ಟು ಸಿದ್ದರಾಮಯ್ಯ ರನ್ನು ಕಡೆಗಣಿಸಲಾಗುತ್ತಿದೆ. ನೂರಕ್ಕೆ ನೂರು ರಾಜಕೀಯವಾಗಿ ಸಿದ್ದರಾಮಯ್ಯ ಬೆಂಬಲಿಗರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜಮೀರ್ ಅಹಮದ್ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಪ್ರಕರಣ ಹೆಚ್ಚಳ: ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ
ಬಿಟ್ ಕಾಯಿನ್ ವಿಚಾರದ ಬಗ್ಗೆ ಮಾತಾನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ನಮ್ಮ ಅವಧಿಯಲ್ಲಿ ಆಗಿಲ್ಲ. ಇದರಲ್ಲಿ ಕಾಂಗ್ರೆಸ್ ಶಾಸಕರ ಮಕ್ಕಳು ಕೂಡ ಶಾಮೀಲಾಗಿದ್ದಾರೆ. ಕಾಂಗ್ರೆಸ್ ನವರು ಹಿಟ್ ಆ್ಯಂಡ್ ರನ್ ರೀತಿ ಆರಂಭದಲ್ಲಿ ಮಾತಾನಾಡುತ್ತಾರೆ. ಆಮೇಲೆ ಸುಮ್ಮನಾಗಿಬಿಡ್ತಾರೆ ತಾಕತ್ತಿದ್ದರೆ ಕಾಂಗ್ರೆಸ್ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಬರ್ತೀರಾ ಚರ್ಚೆಗೆ ಬನ್ನಿ ಸವಾಲು ಎಂದು ಸವಾಲು ಹಾಕಿದರು.
ಕಾಂಗ್ರಸ್ ನವರು ದೇಶವನ್ನು ಲೂಟಿ ಮಾಡಿದವರು. ಪ್ರಿಯಾಂಕ್ ಖರ್ಗೆ ಹೇಗಿದ್ದವರು ಈಗ ಹೇಗಿದ್ದಾರೆ ಗೊತ್ತಿದೆ. ಬಿಜೆಪಿ ಹೆಚ್ಚು ವಿಧಾನ ಪರಿಷತ್ ಸದಸ್ಯರು ಆಯ್ಕೆ ಆಗುತ್ತಾರೆ ಎನ್ನುವ ಹತಾಶ ಮನೋಭಾವನೆಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ.ಮತ್ತೆ ಬಿಜೆಪಿ ಅಧಿಕಾರಕ್ಕೆ ಬರತ್ತದೆ ಅಂತ ಚುನಾವಣೆ ತನಕ ಇದನ್ನು ದೊಡ್ಡ ವಿಷಯ ಮಾಡೋದಕ್ಕೆ ಹೊರಟಿದ್ದಾರೆ ಎಂದರು.