Advertisement

ಗುರು-ಶಿಷ್ಯ ಪರಂಪರೆಯಿಂದ ಕಲಾವಿದರ ಕೊರತೆ ನೀಗಲಿ: ಎಂ.ಎಲ್‌. ಸಾಮಗ

11:33 AM May 27, 2019 | keerthan |

ಉಡುಪಿ: ಮಲ್ಪೆ ರಾಮದಾಸ ಸಾಮಗರು ಪುರಾಣಗಳ ಮೂಲ ಭಾವನಗಳಿಗೆ ಧಕ್ಕೆ ಬಾರ ದಂತಹ ರೀತಿಯಲ್ಲಿ ಯಕ್ಷಗಾನ ಪಾತ್ರ ಗಳನ್ನು ನಿರ್ವಹಿಸುತ್ತಿದ್ದರು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್‌ ಸಾಮಗ ಹೇಳಿದರು ತಿಳಿಸಿದ್ದಾರೆ.

Advertisement

ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ, ಕೋಟೇಶ್ವರ ಸಂಯಮಂ ಸಹಯೋಗದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜಿಸಿದ್ದ ಎಂ.ಆರ್‌. ವಾಸುದೇವ ಸಾಮಗ -70
ಸಮಾರಂಭ ಸಾಮಗ ಸಪ್ತತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಸಾಮಗರು ತುಳು ಯಕ್ಷಗಾನದ ಕಾಲ್ಪನಿಕ ಪಾತ್ರಗಳಲ್ಲಿ ಮಾತ್ರ ಸರಳ ಭಾಷೆಯನ್ನು ಬಳಕೆ ಮಾಡುತ್ತಿದ್ದರು. ಹಿಂದಿನ ಕಾಲದಲ್ಲಿ ವಿದ್ಯೆ ಮನುಷ್ಯ ನನ್ನು ಸುಸಂಸ್ಕೃತರನ್ನಾಗಿಸುವ ಸಾಧನ ವಾಗಿತ್ತು. ಆದರೆ ಇಂದು ವಿದ್ಯೆ
ಯನ್ನು ವೃತ್ತಿಪರದ ಮಾರ್ಗವನ್ನಾಗಿಸಿ ಕೊಂಡಿದ್ದಾರೆ. ಇಲ್ಲಿ ಹಣ ಸಂಪಾದನೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ ಎಂದು ವಿಷಾದಿಸಿದರು.

ಯಕ್ಷಗಾನ ಕಲಾವಿದರು ಕನ್ನಡ ವನ್ನು ಚೆನ್ನಾಗಿ ಮಾತನಾಡುತ್ತಾರೆ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಸಂಭಾಷಣೆಗಳಲ್ಲಿರುವ ಶುದ್ಧ ಕನ್ನಡ ಇದಕ್ಕೆ ಕಾರಣ. ಭಾಷೆ ಸ್ವತ್ಛಗೊಳಿಸುವ ಕಾರ್ಯ ಸಾಹಿತಿ ಮತ್ತು ಕಲಾವಿದರಿಂದ ನಡೆಯುತ್ತಿದೆ. ಅದಕ್ಕಾಗಿ ಅವರನ್ನು ಸ್ಮರಿಸುವ ಕಾರ್ಯ ನಡೆಯಬೇಕು ಎಂದವರು ತಿಳಿಸಿದರು.

ಬಹುಮೇಳಗಳ ಯಜಮಾನ ಪಿ.ಕಿಶನ್‌ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿ 45 ಮೇಳಗಳು ಇರುವುದರಿಂದ ಹೆಚ್ಚಿನ ಕಲಾವಿದರ ಅವಶ್ಯಕತೆ ಇದೆ. ಯಕ್ಷಗಾನ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆಯಿಂದ ಕಲಾವಿದರ ಕೊರತೆ ನೀಗಲಿದೆ ಎಂದರು.

Advertisement

ಸಾಮಗ ಪ್ರಶಸ್ತಿ ಪ್ರದಾನ
ಪರ್ಯಾಯ ಶ್ರೀ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಕಲಾವಿದರಾದ ಕಂದಾವರ ರಘುರಾಮ ಶೆಟ್ಟಿ ಮತ್ತು ಬೋಳಾರ ಸುಬ್ಬಯ್ಯ ಶೆಟ್ಟಿ ಅವರಿಗೆ ರಾಮದಾಸ ಸಾಮಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಸುದೇವ ಸಾಮಗರ ಕಲಾಸಾಧನೆಯ ವಿವಿಧ  ಮುಖಗಳ ಅನಾವರಣ ಗೋಷ್ಠಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ಯಲ್ಲಿ ನಡೆಯಿತು.  ಯಕ್ಷಗಾನ ಅಕಾಡೆಮಿ ಸದಸ್ಯ ರಾಜಶೇಖರ್‌ ಹೆಬ್ಟಾರ್‌, ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ. ಗಣೇಶ್‌ ರಾವ್‌, ಎಸ್‌.ವಿ. ಭಟ್‌, ಮುರಳಿ ಕಡೇಕಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next