Advertisement

“ದೇಗುಲಗಳ ಅಭಿವೃದ್ಧಿಗೆ ಸಹಕಾರ ಅಗತ್ಯ’

09:00 PM Sep 16, 2019 | mahesh |

ಮೂಲ್ಕಿ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

Advertisement

ಅನಂತರ ಸಚಿವರು ದೇಗುಲದ ಆಡಳಿತ ಮಂಡಳಿಯ ಮನೋಹರ ಶೆಟ್ಟಿ ಮತ್ತು ದುಗ್ಗಣ್ಣ ಸಾವಂತರು, ಅಭಿವೃದ್ಧಿ ಸಮಿತಿಯ ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ , ಸುನಿಲ್‌ ಆಳ್ವರ ಜತೆ ಮಾತನಾಡಿ, ದೇವಸ್ಥಾನದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ನಿರ್ಮಾಣ ಹಂತದಲ್ಲಿ ಇರುವ ಚಿನ್ನದ ಪಾಲಕಿ ಯೋಜನೆ ಮತ್ತು ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸರಕಾರದಿಂದ ಸಿಗಬೇಕಾದ ಅನುಮತಿಯನ್ನು ನೇರವಾಗಿ ತನ್ನ ಕಚೇರಿಯ ಅಧಿಕಾರಿಗಳ ಜತೆಗೆ ದೂರ ವಾಣಿ ಮೂಲಕ ಮಾತನಾಡಿ ಎರಡು ದಿನಗಳ ಒಳಗೆ ಅನುಮತಿ ಕೊಡಿಸುವ ಭರವಸೆ ನೀಡಿದರು.

ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ನಿಗಾವಹಿಸಿ
ದೇವಸ್ಥಾನದ ಅಭಿವೃದ್ದಿ ಕಾರ್ಯ ಯೋಜನೆಗಳಿಗೆ ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸುವ ಜತೆಗೆ ದೇಗುಲದ ಆದಾಯ ಹೆಚ್ಚಿಸುವ ಕಾರ್ಯಯೋಜನೆಗಳ ಬಗ್ಗೆ ನಿಗಾ ವಹಿಸುವಂತೆ ಸಚಿವರು ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಅವರಿಗೆ ಸೂಚಿಸಿದರು.

ಸರಕಾರದ ಮೂಲಕ ಎಲ್ಲ ಸಹಕಾರವನ್ನು ಕೊಡುತ್ತೇವೆ ಪಾರದರ್ಶ ಕತೆಯಿಂದ ಭಕ್ತರ ನೆರವು ಪಡೆದು ಉತ್ತಮ ಕಾರ್ಯಕ್ರಮಗಳನ್ನು ದೇಗುಲದ ಹಣ ಪೋಲಾಗದಂತೆ ಪ್ರಾಮಾಣಿಕವಾಗಿ ಮುಂದುವರಿಸಿದಲ್ಲಿ ಯಾವ ಭಯವು ಬೇಡ ಎಂದು ಸಚಿವರು ಆಡಳಿತ ಮಂಡಳಿಗೆ ಅಭಯ ನೀಡಿದರು.  ತಾಂತ್ರಿಕ ಅಡಚಣೆಯಿಂದ ಯೋಜನೆ ಹಿಂದುಳಿದಿದೆ ಹೆಜಮಾಡಿ ಬಂದರು ಯೋಜನೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಯೋಜನೆಗೆ ಅಗತ್ಯ ಇರುವ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಯೋಜನೆ ಹಿಂದೆ ಬಿದ್ದಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು. ಬಂದರು ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ರೀತಿಯಲ್ಲಿ ಅನುದಾನದ ಕೊರತೆ ಇಲ್ಲ ಕೇವಲ ತಾಂತ್ರಿಕ ಅಡಚಣೆಯಿಂದ ಕೆಲಸ ಹಿಂದೆ ಬಿದ್ದಿದೆ ಎಂದವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಂತ್ರಿಗಳು ಮತ್ತು ಶಾಸಕರು ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ಮಾಡಬೇಕಾಗಿದೆ ಎಂದು ಮುಖ್ಯ ಮಂತ್ರಿಯವರ ಆದೇಶ ಇರುವುದರಿಂದ ಪ್ರಯತ್ನ ಮುಂದುವರಿದಿದೆ. ನಮ್ಮ ಜತೆಗೆ ಟೀಕೆ ನಡೆಸುತ್ತಿರುವ ವಿರೋಧ ಪಕ್ಷಗಳ ಶಾಸಕರು ಕೂಡ ಉತ್ತಮವಾಗಿ ದುಡಿಯುತ್ತಿದ್ದಾರೆ ಎಂದು ಸಚಿವರು ಹೇಳಿದರು.

Advertisement

ಈ ಸಂದರ್ಭ ಮೂಲ್ಕಿ ಸೀಮೆಯರಸ ರಾದ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇ ಸರರಾದ ಎನ್‌.ಎಸ್‌. ಮನೋಹರ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಹರಿಕೃಷ್ಣ ಪುನ ರೂರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾ ಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಆಳ್ವ ಹಾಗೂ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ಬಿ. ನರಸಿಂಹ ಭಟ್‌, ಗೋಪಾಲಕೃಷ್ಣ ಉಪಾ ಧ್ಯಾಯ, ದೇಗುಲದ ನಾಗೇಶ್‌ ಬಪ್ಪನಾಡು ಹಾಗೂ ಪಕ್ಷದ ಮುಖಂಡರು ಸ್ಥಳೀಯಾಡಳಿತ ಸದಸ್ಯರಾದ ಶೈಲೇಶ್‌ ಕುಮಾರ್‌, ದಯಾವತಿ ಅಂಚನ್‌, ರಾಧಿಕಾ ಯಾದವ ಕೋಟ್ಯಾನ್‌, ಸತೀಶ್‌ ಅಂಚನ್‌, ಬಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್‌ ಪುತ್ರನ್‌, ತಾ.ಪಂ. ಸದಸ್ಯ ಶರತ್‌ ಕುಬೆವೂರು ಮೊದಲಾದವರು ಉಪಸ್ಥಿತರಿದ್ದರು.

ಸೌಕರ್ಯ ಒದಗಿಸಲು ಕಾರ್ಯ ಯೋಜನೆ
ರಾಜ್ಯದ 34 ಸಾವಿರ ದೇವಸ್ಥಾನಗಳಲ್ಲಿ 15 ಸಾವಿರ ದೇಗುಲಗಳಲ್ಲಿ ನಿತ್ಯದ ದೀಪ ಮತ್ತು ಎಣ್ಣೆ ಗೂ ಕಷ್ಟವಿದೆ ಉತ್ತಮ ಪರಿಸ್ಥಿತಿಯಲ್ಲಿ ಇರುವ ದೇವಸ್ಥಾನಗಳು ಬಡಜನರಿಗೆ ಸಹಾಯ, ಭಕ್ತರಿಗೆ ಉತ್ತಮಸೌಕರ್ಯ ಕೊಡುವ ಕಾರ್ಯಯೋಜನೆಗಳನ್ನು ಮುಂದುವರಿಸಿ ಸರಕಾರದ ಸಹಾಯ ವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next