Advertisement

ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು

02:15 PM Dec 28, 2017 | Team Udayavani |

ಬಜಪೆ: ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಗುರುಗಳಾದ ಮು| ಡೆನ್ನಿಸ್‌ ಮೊರಾಸ್‌ ಪ್ರಭು ಅವರ ಗುರುದೀಕ್ಷೆಯ ಸ್ವರ್ಣ ಮಹೋತ್ಸವವನ್ನು ಅವರ ಹುಟ್ಟೂರು ಬಜಪೆಯಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ಬಜಪೆ ಸೈಂಟ್‌ ಜೋಸೆಫ್‌ ಚರ್ಚ್‌ನಲ್ಲಿ ಬಲಿಪೂಜೆ ನಡೆಯಿತು. ಪ್ರಧಾನ ಯಾಜಕರಾಗಿ ಮು| ಡೆನ್ನಿಸ್‌ ಮೊರಾಸ್‌ ಪ್ರಭು ಬಲಿಪೂಜೆಯನ್ನು ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಬೆಂಗಳೂರು ಆರ್ಚ್‌ ಬಿಷಪ್‌ ರೆ| ಡಾ| ಬರ್ನಾರ್ಡ್‌ ಮೊರಾಸ್‌, ಮಂಗಳೂರು ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ, ಉಡುಪಿ ಬಿಷಪ್‌ ರೆ| ಡಾ| ಜೆರಾಲ್ಡ್‌ ಲೋಬೋ, ಗುಲ್ಬರ್ಗ ಬಿಷಪ್‌ ರೆ| ಡಾ| ರೋಬರ್ಟ್‌ ಮಿರಾಂದ, ಬಳ್ಳಾರಿ ಬಿಷಪ್‌ ರೆ| ಡಾ| ಹೆನ್ರಿ ಡಿ’ಸೋಜಾ,
ಸಿ.ಎಸ್‌.ಐ.ನ ನಿವೃತ್ತ ಬಿಷಪ್‌ ರೆ| ಡಾ| ಸಿ.ಎಲ್‌. ಫುರ್ಟಾಡೋ, ಬೆಳ್ತಂಗಡಿ ಬಿಷಪ್‌ ರೆ| ಡಾ| ಲಾರೆನ್ಸ್‌ ಹಾಗೂ ನೂರಕ್ಕೂ ಅಧಿಕ ಧರ್ಮಗುರುಗಳು, ಧರ್ಮ ಭಗಿನಿಯರು ಬಲಿಪೂಜೆಯಲ್ಲಿ ಭಾಗಿಯಾಗಿದ್ದರು. ಬಳಿಕ ಸೈಂಟ್‌ ಜೋಸೆಫ್‌ ಚರ್ಚ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ವರ್ಣ ಮಹೋತ್ಸವ ಸಂಭ್ರಮ ನಡೆಯಿತು.

ಸ್ವರ್ಣ ಮಹೋತ್ಸವದ ಕೇಕ್‌ ಅನ್ನು ಮು| ಡೆನ್ನಿಸ್‌ ಮೊರಾಸ್‌ ಪ್ರಭು ಕತ್ತರಿಸಿದರು. ಬಳಿಕ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮೊರಾಸ್‌ ಕುಟುಂಬ, ಊರಿನ ಹಾಗೂ ಪರ ಊರಿನ ಗಣ್ಯರು ಭಾಗಿಯಾಗಿದ್ದರು. ಜೋನ್‌ ಮೊರಾಸ್‌ ಸ್ವಾಗತಿಸಿದರು.ಪುತ್ತೂರಿನ ಸೈಂಟ್‌  ಫಿಲೋಮಿನಾ ಕಾಲೇಜಿನ ಆಡಳಿತಾಧಿಕಾರಿ ಫಾ| ಆ್ಯಂಟನಿ ಮೊಂತೆರೋ ಅವರು ಮು| ಡೆನ್ನಿಸ್‌ ಮೊರಾಸ್‌ ಪ್ರಭು ಅವರ ಗುರುದೀಕ್ಷೆಯ ಸ್ವರ್ಣ ಮಹೋತ್ಸವದ ಅಭಿನಂದನ ನುಡಿಗಳನ್ನು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next