Advertisement

M.C Ashwath: ಚನ್ನಪಟ್ಟಣ ಮಾಜಿ ಶಾಸಕ ಎಂ.ಸಿ.ಅಶ್ವಥ್ ಗೆ ಮಾತೃವಿಯೋಗ

10:49 AM Nov 28, 2023 | Team Udayavani |

ರಾಮನಗರ: ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರ ತಾಯಿ ದೊಡ್ಡತಾಯಮ್ಮ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

Advertisement

ದೊಡ್ಡತಾಯಮ್ಮ ಅವರು ಎಂ.ಸಿ.ಅಶ್ವಥ್ ಸೇರಿ 4 ಜನ ಗಂಡು ಮಕ್ಕಳು, ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆವರೆಗೆ ಚನ್ನಪಟ್ಟಣ ನಗರದ ಎಂ.ಸಿ.ಅಶ್ವಥ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 2.30 ಕ್ಕೆ ಸಂತೆಮೊಗೇನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡಲಾಗಿದೆ.

ಎಂ.ಸಿ.ಅಶ್ವಥ್ ಅವರು ಈ ಹಿಂದೆ ಜೆಡಿಎಸ್ ನಿಂದ ಶಾಸಕರಾಗಿ ಸದ್ಯ ಕಾಂಗ್ರೆಸ್ ಸೇರಿದ್ದಾರೆ.

ಇದನ್ನೂ ಓದಿ: Kerala: ಮಕ್ಕಳ ಮೇಲೆಯೇ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ ತಾಯಿಗೆ 40 ವರ್ಷ ಜೈಲು ಶಿಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next