Advertisement
1. ತಡ ಮಾಡಬೇಡಿ, ಈಗಲೇ ಆರಂಭಿಸಿ: CAT, MAT ಅಥವಾ PEACU, ಯಾವುದೇ ಪ್ರವೇಶ ಪರೀಕ್ಷೆ ಆಗಿರಬಹುದು. ಪರೀಕ್ಷೆಗಳಿಗಾಗಿ ಸಿದ್ಧತೆಯನ್ನು ಇಂದೇ ಆರಂಭಿಸಿ, ಸಕಾರಣವಿಲ್ಲದೆ, ತಯಾರಿಯನ್ನು ಯಾವ ಕಾರಣಕ್ಕೂ ಮುಂದೂಡಬೇಡಿ. ಉತ್ತಮ ವಿದ್ಯಾಲಯಗಳಲ್ಲಿ ಅಥವಾ ಉತ್ತಮವಾದ ಬಿ-ಸ್ಕೂಲ್‌ಗಳಲ್ಲಿ ಯಾವುದೇ ಡೋನೇಷನ್ ಇಲ್ಲದೆ ಪ್ರವೇಶ ಗಿಟ್ಟಿಸಬೇಕಾದಲ್ಲಿ ಇಂದಿನಿಂದಲೇ ಉತ್ತಮ ತಯಾರಿ ನಡೆಸಿ.
Related Articles
Advertisement
ಇಂಗ್ಲೀಷ್ ವಿಷಯದ ಬಗೆಗಿನ ಜ್ಞಾನ Profi ciency in English Language):- ಎ)ಸಮಾನಾರ್ಥಕ ಪದ (Synonyms) ಬಿ)ವಿರುದ್ಧಾರ್ಥಕ ಪದ (Antonyms) ವಾಕ್ಯಗಳಿಗೆ ಸಿ)ಒಂದು ಶಬ್ಧದಲ್ಲಿ ಉತ್ತರ ಕೊಡುವ ಸಾಮರ್ಥ್ಯ (One word Substitute); ಡಿ)ಪಡೆ ನುಡಿಗಳು (Idioms & phrase), ಇ)ಸಾಮಾನ್ಯ ವ್ಯಾಕರಣ General Grammar), ಎಫ್) ಇಂಗ್ಲಿಷ್ ಭಾಷೆಯಲ್ಲಿನ ಉತ್ತಮ ಪುಸ್ತಕಗಳು, ಜಿ)ಸರಿಯಾದ ವಾಕ್ಯ ರಚನೆ (Sentence correction),, ಹೆಚ್)ಸಂಬಂಧ ವಾಚಕಗಳು (Pairs expressing relationships) ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ.
ಸಾಮಾನ್ಯ ಜ್ಞಾನ:
1) ಭಾರತದ ವ್ಯಾಪಾರ ವ್ಯವಸ್ಥೆ,2) ಜಾಗತಿಕ ವ್ಯಾಪಾರ ವಹಿವಾಟುಗಳ ಪರಿಸರ
3) ಪ್ರಚಲಿತ ವಿದ್ಯಮಾನಗಳು,
4) ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳು, ಅರ್ಥಶಾಸ್ತ್ರ, ಮೂಲ ಮ್ಯಾನೇಟ್‌ಮೆಂಟ್ ಪರಿಕಲ್ಪನೆಗಳು, ರಾಜಕೀಯ ವಿದ್ಯಮಾನಗಳು, ಕ್ರೀಡೆ, ಪ್ರಶಸ್ತಿ ಹಾಗೂ ವ್ಯಕ್ತಿಗಳು ಮತ್ತು ಅವರ ಸಾಧನೆಗಳ ಬಗ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಸ್ಕೃತವಾಗಿ ಅಧ್ಯಯನ ಮಾಡಿ. ಪ್ರತಿನಿತ್ಯ ಯಾವುದಾದರೊಂದು “ದಿನ ಪತ್ರಿಕೆಯನ್ನು’ ಓದಲು ಮರೆಯಬೇಡಿ. ತಾರ್ಕಿಕ ಪರೀಕ್ಷೆ ಮತ್ತು ಮಾನಸಿಕ ಸಾಮರ್ಥ್ಯ Test of Reaso ning and General Intelligence) :- ಸರಿಯಾದ ವಿಚಾರ ಮಾಡಿ ಉತ್ತರ ನೀಡಬೇಕಾಗಿರುವುದರಿಂದ, Puzzles(ಒಗಟ್ಟಿನ ರೂಪದಲ್ಲಿರುವ ಪ್ರಶ್ನೆಗಳು), ರೇಖಾ ಚಿತ್ರಗಳು, ಸಾದೃಶ್ಯಗಳು (Analogies)ತರ್ಕ, ಮೌಖಿಕ ಸಾಮರ್ಥ್ಯ, ವಿಶ್ಲೇಷಣ ಸಾಮರ್ಥ್ಯಗಳ ಬಗ್ಗೆ ಪ್ರಶ್ನೆಗಳು ಬರುವುದರಿಂದ ಸಾಕಷ್ಟು ಅಧ್ಯಯನ ನಡೆಸಿ. ಈ ವಿಭಾಗದಲ್ಲಿ ಒಬ್ಬರೇ ಕುಳಿತುಕೊಂಡು ಅಧ್ಯಯನ ಮಾಡುವುದಕ್ಕೆ ಕಷ್ಟವಾದಲ್ಲಿ ನಿಪುಣರ ಹಾಗೂ ಸ್ನೇಹಿತರ ಸಹಾಯ ಪಡೆದುಕೊಳಕ್ಷೆು ಹಿಂಜರಿಯಬೇಡಿ. ಪರಿಣಾಮಾತ್ಮಕ ವಿಶ್ಲೇಷಣೆ (Quantitative Analysis) :- ಅಂಕಗಣಿತ, ದತ್ತಾಂಶ ವಿಶ್ಲೇಷಣೆ, ವಿವರಣೆ ಹಾಗೂ ವ್ಯಾಖ್ಯಾನ, ಸಂಖ್ಯಾ ಶಾಸ್ತ್ರದ ಮೇಲೆ ಕೆಲವೊಂದು ಸಾರಿ ಪ್ರಶ್ನೆಗಳು ಬರುವ ಸಾಧ್ಯವಿದೆ. 5. ಈ ಪುಸ್ತಕಗಳನ್ನು ಅಧ್ಯಯನ ಮಾಡಿ: 6. ಹಳೆಯ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ: ಅಧ್ಯಯನ ಮಾಡುತ್ತಲೇ ಹಳೆಯ ಪ್ರಶ್ನೆ ಪ್ರತಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನೀವೇನಾದರೂ ಹತ್ತಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೇ ಆದಲ್ಲಿ ನಿಮ್ಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ನಿಮಗೆ ವಿಶ್ವಾಸ ಹೆಚ್ಚಾಗುತ್ತದೆ. (Confidence level) 7. ಅವಶ್ಯವಿದ್ದಲ್ಲಿ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ : ನೀವು ಅಧ್ಯಯನ ಮಾಡುತ್ತಿರುವಾಗ ಕೆಲವು ವಿಷಯಗಳು ಕ್ಲಿಷ್ಟ ಅನಿಸಿದ್ದಲ್ಲಿ ಉತ್ತಮವಾದ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ, ಹಾಗೆಯೇ ನಿಮ್ಮ ಪಠ್ಯಕ್ರಮದಲ್ಲಿನ ಎಲ್ಲ ವಿಷಯಗಳ ಮೇಲೂ ಕೋಚಿಂಗ್ ಸೆಂಟರ್‌ನವರು ಹೆಚ್ಚಿನ ತರಬೇತಿಯನ್ನು ನೀಡುತ್ತಾರೆಯೇ ಎಂದು ತಿಳಿದುಕೊಳ್ಳಿ. 8. ಅಣಕು ಪರೀಕ್ಷೆಗೆ ಹಾಜರಾಗಿ: ಕೆಲವು ಸಂಸ್ಥೆಗಳು ಎಂ.ಬಿ.ಎ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದೇ ಪರೀಕ್ಷೆ ಹತ್ತಿರ ಇರುವಾಗ ಅಣುಕು ಪರೀಕ್ಷೆ ಗಳನ್ನು ನಡೆಸುತ್ತಾರೆ. ಅಂತಹ ಅಣುಕು ಪರೀಕ್ಷೆಗಳಿಗೆ ಹೆಚ್ಚು ಯೋಚಿಸದೆ ಹೆಸರು ನೋಂದಾಯಿಸಿ. 9. ನಿತ್ಯ ವೇಳಾ ಪಟ್ಟಿ ಹಾಗೂ ಸಮಯ ನಿರ್ವಹಣೆ: ಎಲ್ಲ ವಿಷಯಗಳಿಗೂ ಪ್ರತಿ ನಿತ್ಯ 1 ಗಂಟೆ ಮೀಸಲಿಡಿ ಕಷ್ಟವಾದ ವಿಷಯಗಳ ಮೇಲೆ ನಿಮ್ಮ ಅನುಕೂಲದ ಪ್ರಕಾರ ಹೆಚ್ಚು ಸಮಯ ಕಳೆಯಬಹುದು. ಯಾವುದೇ ಶಾರ್ಟ್-ಕಟ್ ವಿಧಾನಗಳಿಗೆ ಪ್ರಯತ್ನ ಪಡಬೇಡಿ. ಸಮಯವನ್ನು ಕೇವಲ ಅಧ್ಯಯನ ವಸ್ತುವನ್ನು ಹುಡುಕುವುದರಲ್ಲಿಯೇ ಸಮಯ ಕಳೆಯಬೇಡಿ. ಸಮಯವನ್ನು ಅತ್ಯುತ್ತಮವಾಗಿ ನೀವು ನಿರ್ವಹಿಸಿದಲ್ಲಿ ನೀವು ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆಯವುದರಲ್ಲಿ ಸಂಶಯವಿಲ್ಲ. 10. ಈ ಅಧ್ಯಯನದ ವೇಳೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೆಗೆದುಕೊಳ್ಳಿ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಲ್ಲಿ ನೀವು ಪಟ್ಟ ಶ್ರಮ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಸರಿಯಾದ ಸಮಯದಲ್ಲಿ ಊಟ ಹಾಗೂ ನಿದ್ದೆ ಮಾಡಿ. ಮೊಬೈಲ್, ವಾಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರೀಕ್ಷೆ ಮುಗಿಯುವವರಿಗೆ ಮಿತಗೊಳಿಸಿ. -ಪ್ರೊ| ಪಿ. ಪರಮಶಿವಯ್ಯ/ ಡಾ| ಗಿರೀಶ ವೈ.ಎಂ. ತುಮಕೂರು ವಿವಿ