Advertisement

ಲಿನ್‌ ಭುಜಕ್ಕೆ ಮತ್ತೆ ಪೆಟ್ಟು

06:35 AM Feb 22, 2018 | |

ಮೆಲ್ಬರ್ನ್: ಆಸ್ಟ್ರೇಲಿಯದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ಲಿನ್‌ ನ್ಯೂಜಿಲ್ಯಾಂಡ್‌ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ದುಬಾೖಯಲ್ಲಿ ನಡೆಯಲಿರುವ ಪಾಕಿಸ್ಥಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಸರಣಿಯಿಂದ ದೂರ ಉಳಿಯಲಿದ್ದಾರೆ. ಆದರೆ ಎಪ್ರಿಲ್‌ ತಿಂಗಳಲ್ಲಿ ಪ್ರಾರಂಭವಾಗಲಿರುವ ಐಪಿಎಲ್‌ ಹೊತ್ತಿಗೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Advertisement

ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್‌ ಮಾಡುತ್ತಿದ್ದ ಲಿನ್‌ ಮಿಡ್‌ವಿಕೆಟ್‌ ಸಮೀಪ ಒಮ್ಮಿಂದೊಮ್ಮೆಲೆ ಕುಸಿದರು. ಇದರಿಂದ ಅವರ ಎಡ ಭುಜದ ಕೀಲು ತಪ್ಪಿತು. ಕೂಡಲೇ ವೈದ್ಯರು ಲಿನ್‌ ಅವರನ್ನು ಸ್ಕ್ಯಾನಿಂಗ್‌ಗಾಗಿ ಕರೆದೊಯ್ದರು. ಆದರೆ ಆಸ್ಪತ್ರೆ ತಲುಪುವುದರೊಳಗಾಗಿ ಆರೋಗ್ಯ ಸಿಬಂದಿ ಲಿನ್‌ ಭುಜವನ್ನು ಸ್ವಲ್ಪ ಮಟ್ಟಿಗೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದರು.

ಪಿಎಸ್‌ಎಲ್‌ನಲ್ಲಿ ಲಿನ್‌ ಪಾಲ್ಗೊಳ್ಳುತ್ತಿಲ್ಲ ಎಂದು ದೃಢಪಡಿಸಿರುವ ಆಸ್ಟ್ರೇಲಿಯನ್‌ ಫಿಸಿಯೋ ಅಲೆಕ್ಸ್‌ ಕೌಂಟೂರಿಸ್‌, “ಎಕ್ಸ್‌-ರೇಯಲ್ಲಿ ಮೂಳೆಗೆ ಯಾವುದೇ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.  ಆದರೆ ಈಗಿನ ಸ್ಥಿತಿಯಲ್ಲಿ  ಕ್ರಿಸ್‌ ಲಿನ್‌ ದುಬಾೖಯಲ್ಲಿ ನಡೆಯುವ ಪಾಕಿಸ್ಥಾನ ಸೂಪರ್‌ ಸೀರೀಸ್‌ನಲ್ಲಿ ಪಾಲ್ಗೊಳ್ಳಲಾರರು. ಹೆಚ್ಚಿನ ಚಿಕಿತ್ಸೆಗಾಗಿ ಅವರು ಬ್ರಿಸ್ಬೇನ್‌ಗೆ ಮರಳಲಿದ್ದಾರೆ’ ಎಂದು ಹೇಳಿದ್ದಾರೆ.

ಈಗಾಗಲೇ ಎಡ ಭುಜಕ್ಕೆ 3 ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡಿರುವ ಲಿನ್‌, ಐಪಿಎಲ್‌ನಲ್ಲಿಮ ಕೆಕೆಆರ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ತಂಡದ ನಾಯಕತ್ವದ ರೇಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next