Advertisement

ಎಚ್ಚರ…ಅತಿಯಾಗಿ ಸೇವಿಸಿದಲ್ಲಿ ಟೊಮೆಟೊ ಅಪಾಯಕಾರಿ!

01:42 PM May 12, 2018 | Sharanya Alva |

ಟೊಮೆಟೊ ಅನೇಕ ರುಚಿಕರವಾದ ಭಕ್ಷ್ಯಗಳಲ್ಲಿ ಸ್ವಾದ ಮತ್ತು ಕಂಪನ್ನು ಹೆಚ್ಚಿಸುವಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತದೆ. ಸಲಾಡ್‌ನಿಂದ ಸೂಪ್‌ವರೆಗೆ ಮತ್ತು ಸಾಸ್‌ನಿಂದ ಮೇಲೋಗರಗಳಲ್ಲಿ ಟೊಮೆಟೊವಿಲ್ಲದಲ್ಲಿ ಅಡುಗೆ ಅಪೂರ್ಣಗಳ್ಳುತ್ತದೆ. ಆದರೆ ಕಟುವಾಸನೆಯ ಕೆಂಪಗಿನ ಈ ಟೊಮೆಟೊ ಹಣ್ಣುಗಳ ಅತಿಯಾದ ಸೇವನೆಯಿಂದ ಆರೋಗ್ಯಕ್ಕೆ ಹಾನಿಕಾರಕ. ಈ ರಸಭರಿತವಾದ ಟೊಮೆಟೊ ತರಕಾರಿಯ ಆಮ್ಲಿàಯ ಪ್ರಕೃತಿಯಿಂದಾಗಿ ಅದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಲ್ಲಿ ಟೊಮೆಟೊ ಹಣ್ಣು ಅಲ್ಲದೇ ಟೊಮೆಟೊ ಎಲೆಗಳು ಕೂಡ ಬಹಳ ಅಪಾಯಕಾರಿ. ನಮ್ಮ ದೈನಂದಿನ ಅಡುಗೆಯಲ್ಲಿ ಟೊಮೆಟೊ ತ್ಯಜಿಸಿದಲ್ಲಿ ನೀವು ಅನಾರೋಗ್ಯಗೊಳ್ಳುವುದನ್ನು ತಪ್ಪಿಸಬಹುದು.

Advertisement

ಆಮ್ಲಿಯ ಅಜೀರ್ಣ ಅಥವಾ ಆಮ್ಲಿàಯ ಹಿಮ್ಮುಕ ಹರಿವು:

ನೆನಪಿಡಿ! ನಿಮ್ಮ ಹೊಟ್ಟೆಯಲ್ಲಿ ಉರಿ, ಎದೆಯಲ್ಲಿ ಉರಿ ಭಾವನೆಗಳು ಕಂಡು ಬಂದಲ್ಲಿ ಅದಕ್ಕೆ ಕಾರಣ ಟೊಮೆಟೊದಲ್ಲಿ ಇರುವ ಆಮ್ಲಿàಯ ಅಂಶಗಳಾದ ಮೆಲಿಕ್‌ ಮತ್ತು ಸಿಟ್ರಿಕ್‌ ಆಮ್ಲಗಳು. ಜೀರ್ಣಕ್ರಿಯೆ ಶುರುವಾದಲ್ಲಿ ಟೊಮೆಟೊದಲ್ಲಿರುವ ಆಮ್ಲಿàಯ ಅಂಶಗಳು ಗ್ಯಾಸ್ಟ್ರಿಕ್‌ ಆಮ್ಲವನ್ನು ಪ್ರಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಸುತ್ತದೆ. ಈ ಆಮ್ಲಿಯ ಅಂಶ ಅನ್ನನಾಳದಲ್ಲಿ ಹರಿದು ಎದೆ ಉರಿ ಹೆಚ್ಚಿಸುತ್ತದೆ.ಇಂತಹ ತೊಂದರೆಗಳಿಂದ ದೂರವಿರಬೇಕಾದರೆ ಟೊಮೆಟೊವನ್ನು ತ್ಯಜಿಸುವುದು ಒಳ್ಳೆಯದು.

ಕೆರಳಿಸುವ ಅಥವಾ ಉಬ್ಬುವ ಕರುಳಿನ ಲಕ್ಷಣಗಳು:

ಊಟ ಆದ ನಂತರ ನಿಮ್ಮ ಹೊಟ್ಟೆಯು ಉಬ್ಬಿಕೊಂಡಿರುವಂತೆ ಅನ್ನಿಸುತ್ತದೆಯೇ?ಹಾಗಾದರೆ ಅದಕ್ಕೆ ಕಾರಣ ಟೊಮೆಟೊ! ಕಟುವಾಸನೆಯ ಟೊಮೆಟೊ ಹಣ್ಣಿನಲ್ಲಿರುವ ಬೇಗನೆ ಜೀರ್ಣವಾಗದಂತಹ ಆದರ ಸಿಪ್ಪೆ ಹಾಗೂ ಬೀಜಗಳು ಹೊಟ್ಟೆಯ ಕರುಳಿನ ಸಂಬಂಧಿತ ತೊಂದರೆಗಳು ಹೆಚ್ಚಾಗಿ ಟೊಮೆಟೊ ಬೀಜಗಳಿಂದ ಶುರುವಾಗುತ್ತದೆ.ಅದಕ್ಕೆ ಟೊಮೆಟೋ ಅತಿ ಸೇವನೆ ಬೇಡ.

Advertisement

ಪ್ರತಿ ರಕ್ಷಣಾ ವ್ಯವಸ್ಥೆಯ ಪರಿಣಾಮ:

ಟೊಮೆಟೊದಲ್ಲಿರುವ ಲೈಕೊಪೆನ್‌ ರಾಸಾಯನಿಕ ನಮ್ಮ (ರೋಗ ನಿರೋಧಕ)ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಸೇವಿಸುವುದರಿಂದ ದೇಹದಲ್ಲಿ ಲೈಕೊಪೆನ್‌ ಹೆಚ್ಚಿಸಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಒಟ್ಟಾರೆ ರೋಗನಿರೋಧಕ ಶಕ್ತಿ ಕುಗ್ಗುವುದಲ್ಲದೇ ದೇಹವು ತೊಂದರೆಗೆ ಒಳಗಾಗುತ್ತದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ)ಭಯ:

ಟೊಮೆಟೊಗಳ ಸೇವನೆಯಿಂದ ದೇಹದಲ್ಲಿ ಲೈಕೊಪೆನ್‌  ಪ್ರಮಾಣ ಹೆಚ್ಚಿಸಿ ಪುರುಷರಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ) ಬರುವ ಸಾಧ್ಯತೆ ಹೆಚ್ಚಿಸುತ್ತದೆ. ರಸಭರಿತ ಈ ಟೊಮೆಟೊ ಹಣ್ಣು ಮೂತ್ರಕೋಶ ಕಂಠ ಗ್ರಂಥಿಯನ್ನು ದುರ್ಬಲಗೊಳಿಸುವುದಲ್ಲದೇ ಮೂತ್ರ ವಿಸರ್ಜನೆ ಮಾಡುವಾಗ ನೋವು ಉಂಟು ಮಾಡುತ್ತದೆ. ಇದರಿಂದಾಗಿ ನಿರುಪಯುಕ್ತ  ಕಲ್ಮಶ ದೇಹದಲ್ಲಿ ಉಳಿದುಕೊಳ್ಳುವುದರಿಂದ ಪ್ರಾಸ್ಟೇಟ್‌ ಕ್ಯಾನ್ಸರ್‌(ಮೂತ್ರಕೋಶ ಕಂಠ)ಗೆ ಕಾರಣವಾಗುತ್ತದೆ.

ಮೂತ್ರ ಪಿಂಡದಲ್ಲಿನ  ಕಲ್ಲುಗಳ ಪರಿಣಾಮ:

ಕ್ಯಾಲ್ಸಿಯಂ ಮತ್ತು ಒಕ್ಸಲೇಟ್‌ಗಳ ಪೋಷಕಾಂಶಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಈ ಪೋಷಕಾಂಶಗಳು ಸರಿಯಾಗಿ ಪಚನಗೊಳ್ಳದೆ ಹೆಚ್ಚಿನ ಪ್ರಮಾಣದಲ್ಲಿ ಉಳಿದುಕೊಂಡು ಕಿಡ್ನಿ ಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತದೆ. ಇದು ನಮಗೆ ಮಾರಕವಾಗುವುದು ಖಂಡಿತ, ಆದುದರಿಂದ ಟೊಮೆಟೊವನ್ನು ತ್ಯಜಿಸುವುದು ಒಂದು ಮಾರ್ಗ.

ಸಂಧಿವಾತ ಮತ್ತು ಮೈ-ಕೈ ನೋವು:

ಟೊಮೆಟೊದಲ್ಲಿ ಇರುವ ಹಿಸ್ಟ್‌ಮಿನ್‌ ಮತ್ತು ಸೋಲಾನಿನ್‌ ವೈರಾಣು ದೇಹದಲ್ಲಿ ಕ್ಯಾಲ್ಸಿಯಂ ಅಂಗಾಂಶಗಳನ್ನು ನಿರ್ಮಿಸುತ್ತದೆ ಇದು ಸಾಮಾನ್ಯವಾಗಿ ಕೀಲುಗಳ ಊತಕ್ಕೆ ಕಾರಣವಾಗುತ್ತದೆ. ಉಬ್ಬಿಕೊಳ್ಳುವ ಕೀಲು ನೋವು ಹೆಚ್ಚಿಸುವುದಲ್ಲದೆ ನಮ್ಮ ದೈನಂದಿನ ದಿನಚರಿಗೆ ತೊಂದರೆವುಂಟು ಮಾಡುತ್ತದೆ. ಹೆಚ್ಚಿನ ಟೊಮೆಟೊ ಸೇವನೆಯಿಂದ ಬರುವ ಕೀಲು ನೋವು ಸಂಧಿವಾತಕ್ಕೆ ಕಾರಣವಾಗುತ್ತದೆ.

ಹೃದ್ರೋಗ ಸಮಸ್ಯೆ:

ಟೊಮೆಟೊಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಇರುವುದರಿಂದ,ಇದನ್ನು ಅತಿಯಾಗಿ ಸೇವನೆ ಮಾಡಿದರೆ ಹೃದ್ರೋಗ ಕಾಯಿಲೆಗಳಿಗೆ ಅನುವು ಮಾಡಿಕೊಡುತ್ತದೆ. ದೇಹದಲ್ಲಿರುವ ಹೆಚ್ಚಿನ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುವುದಲ್ಲದೆ ಹೃದಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next