Advertisement

ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿ ಜೋರು; ಫೋನ್‌ ಕರೆ ಮಾಡಿದರೆ ಸಿಗಲಿದೆ ಅದ್ಧೂರಿ ಸೌಕರ್ಯ

08:19 PM Mar 06, 2023 | Team Udayavani |

ನವದೆಹಲಿ: ಕೊರೊನಾ ನಂತರ ದೇಶದಲ್ಲಿ ರಿಯಲ್‌ ಎಸ್ಟೇಟ್‌ ಸುಧಾರಿಸಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ.

Advertisement

ಫೆಬ್ರವರಿಗೆ ಸಂಬಂಧಿಸಿದಂತೆ ಭಾರತದಲ್ಲಿ 72 ಗಂಟೆಗಳ ಅವಧಿಯಲ್ಲಿ ಡಿಎಲ್‌ಎಫ್ ಕಂಪನಿ ಒಟ್ಟು 8,000 ಕೋಟಿ ರೂ. ಮೌಲ್ಯದ ಐಷರಾಮಿ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದೆ. ಅದೇ ರೀತಿ ಗೋದ್ರೇಜ್‌ ಪ್ರಾಪರ್ಟಿಸ್‌ 24 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದೆ.

ಕೊರೊನಾ ನಂತರ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಅಧಿಕವಾಗಿದೆ. ಐಟಿ ಕಂಪನಿಗಳು ಈಗಲೂ ವರ್ಕ್‌ ಫ್ರಮ್ ಹೋಮ್‌ ಸಂಸ್ಕೃತಿಯನ್ನು ಮುಂದುವರಿಸಿವೆ. ಹೀಗಾಗಿ ವಿಶಾಲವಾದ ಮನೆಗಳು, ಪ್ರತ್ಯೇಕ ಕೆಲಸದ ಕೊಠಡಿ, ಸ್ಪಾ, ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ, ಹಸಿರು ಆವರಣ, ಸ್ವಿಮ್ಮಿಂಗ್‌ ಪೂಲ್‌, ಮಕ್ಕಳ ಆಟದ ಆವರಣ ಸೇರಿದಂತೆ ಅನೇಕ ಸೌಲಭ್ಯಗಳು ಇದೆ. ಅದಕ್ಕಾಗಿ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಇಂಥ ವ್ಯವಸ್ಥೆಗಳಲ್ಲಿ ಫೋನ್‌ ಕರೆ ಮಾಡದರೆ ಸ್ಪಾ, ಮನೆಗಳಲ್ಲಿ ಕೆಲಸ ಮಾಡುವವರ ಸೌಲಭ್ಯ ಸಿಗಲಿದೆ ಎಂದು ಮಾರಾಟಗಾರರು ಪ್ರಚಾರ ಮಾಡುತ್ತವೆ.

ನವದೆಹಲಿ ಸಮೀಪದ ಗುರುಗ್ರಾಮದಲ್ಲಿ ತಲಾ 7 ಕೋಟಿ ರೂ. ಬೆಲೆಯ 1,137 ಐಷಾರಾಮಿ ಅಪಾರ್ಟ್‌ಮೆಂಟ್‌ ಗಳನ್ನು ಡಿಎಲ್‌ಎಫ್ ನಿರ್ಮಿಸಿದೆ. ಫೆಬ್ರವರಿ ಮಾಸಾಂಕ್ಯಕ್ಕೆ ನಡೆದ ಮೇಳದಲ್ಲಿ ಈ ಅಪಾರ್ಟ್‌ಮೆಂಟ್‌ಗಳ ಖರೀದಿಗೆ 3,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next