Advertisement

ದಂಟು ಕೆಂಪು ಬಸಳೆ ಸೊಂಪು

03:45 AM Jan 09, 2017 | Harsha Rao |

ಹಸಿರು ವರ್ಣದ ದಂಟಿರುವ ಬಸಳೆಯನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿದ್ದಾರೆ. ಆದರೆ ಕೆಂಪು ಬಣ್ಣದ ದಂಟುಗಳಿರುವ ಅಪರೂಪದ ಬಸಳೆಯನ್ನು ಬೆಳೆಯುತ್ತಿದ್ದಾರೆ ಈ ಗೃಹಿಣಿ ಸೌಮ್ಯ ನಾಗೇಶ್‌. ಸೂರತ್ಕಲ್‌ ಸನಿಹದ ಪಾವಂಜೆಯಲ್ಲಿದೆ ಅವರ ಮನೆ. ಬಂಡೆ, ಬಸಳೆ ಮೊದಲಾದ ತರಕಾರಿ ಗಿಡಗಳೊಂದಿಗೆ ಒಂದು ದೊಡ್ಡ ಚಪ್ಪರ ತುಂಬ ಹರಡಿಕೊಂಡಿರುವ ಕೆಂಪು ಬಸಳೆಯೂ ಇದೆ.

Advertisement

ಕೆಂಪು ಬಸಳೆಗೆ ಏನು ವೈಶಿಷ್ಟ್ಯವಿದೆ ಎಂದು ಕೇಳಿದರೆ ಹಸಿರು ಬಸಳೆಗಿಂತ ತುಂಬ ರುಚಿಕರವಾಗಿದ್ದು ಹೆಚ್ಚು ಸಿಹಿಯಾಗಿದೆ ಎನ್ನುತ್ತಾರೆ ಸೌಮ್ಯ. ಇದರ ಎಲೆಗಳ ಗಾತ್ರ ದೊಡ್ಡ. ಹಸಿರು ಬಸಳೆಗಿಂತ ದಪ್ಪಗಿದ್ದರೂ ಮೃದುವಾಗಿ ಬೇಯುತ್ತವೆ. ಬೇಯುವಾಗಲೇ ಘಮಘಮ ಪರಿಮಳ ಬರುತ್ತದೆ. ದಂಟಿನೊಳಗಿರುವ ತಿರುಳೂ ರುಚಿಕರ. ಕಸದ ಅಂಶ ಕಡಮೆಯಂತೆ. ಈ ಬಸಳೆಯ ಎಲೆಗಳ ರಸ ಬೆಂಕಿಯಿಂದ ಸುಟ್ಟ ಗುಳ್ಳೆಗಳ ಉಪಶಮನಕ್ಕೆ ಸೂಕ್ತ ಔಷಧವೂ ಹೌದೆಂಬುದು ಅವರ ವಿವರಣೆ. ಮಾರಾಟ ಮಾಡುವವರಿಗೂ ತೂಕ ಹೆಚ್ಚು. ಒಂದೆರಡು ದೊಡ್ಡ ದಂಟುಗಳ ಸುರುಳಿಯಿದ್ದರೆ ಒಂದು ಕಿಲೋ ತೂಗುತ್ತದೆ. ಪೇಟೆಯಲ್ಲಿ ಹದಿನೈದರಿಂದ ಇಪ್ಪತ್ತು ರೂಪಾಯಿ ತನಕ ಬೆಲೆಯೂ ಬರುತ್ತದೆ.  ಇದರಿಂದ ಬಸಳೆ ಬೆಳೆಯುವವರಿಗ ಲಾಸು ಇಲ್ಲ. ಲಾಭವೇ ಎಲ್ಲಾ. 

ಕೆಂಪು ಬಸಳೆಗೆ ರಾಸಾಯನಿಕ ಬೇಡವೇ ಬೇಡ. ಪಾತ್ರೆ ಮತ್ತು ಬಟ್ಟೆ ತೊಳೆಯುವ ನೀರು, ಸೆಗಣಿ, ಗಂಜಲದ ನೀರು ಇದ್ದರೆ ಸಮೃದ್ಧವಾಗಿ ಹರಡುತ್ತದೆ. ಸಣ್ಣ ಹಿತ್ತಿಲಿರುವವರು ಒಂದು ಚಪ್ಪರ ತುಂಬ ಬೆಳೆದರೆ ನಿತ್ಯವೂ ಬಳಸಬಹುದು. ರುಚಿ ಮತ್ತು ಪೋಷಕಾಂಶಭರಿತವಾದ ಕಾರಣ ನಿತ್ಯ ಬಳಸಿದರೂ ಸಾಕು ಅನಿಸುವುದಿಲ್ಲ. ಮನೆ ಖರ್ಚಿಗೆ ಆಗಿ ಮಿಕ್ಕಿದುದನ್ನು ಮಾರಾಟ ಮಾಡಿದರೆ ಬೇಡಿಕೆಯೂ ಇದೆಯಂತೆ. ಒಂದು ಸಲ ನೆಟ್ಟ ಬಳ್ಳಿ ಹಲವು ವರ್ಷ ಬದುಕುತ್ತದೆ.

– ಪ. ರಾಮಕೃಷ್ಣ ಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next