Advertisement

ಚಿಂತಾಮಣಿ ಮಾರುಕಟ್ಟೆಯಲ್ಲೀಗ ಹುಣಸೆ ಘಮಲು-ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ

01:24 PM Mar 01, 2024 | Team Udayavani |

ಉದಯವಾಣಿ ಸಮಾಚಾರ
ಚಿಂತಾಮಣಿ: ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈಗ  ಹುಣಸೆ ಹಣ್ಣಿನದೇ ಘಮಲು. ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ರಾಶಿ ರಾಶಿ ಹುಣಸೆ ಹಣ್ಣು ಕಾಣುತ್ತಿದ್ದು, ಹುಣಸೆ ಹಣ್ಣಿನ ಸುಗ್ಗಿ ಆರಂಭಗೊಂಡಿದೆ.

Advertisement

ಇಡೀ ರಾಜ್ಯದಲ್ಲಿ ಹುಣಸೆ ಮಾರುಕಟ್ಟೆಗೆ ಚಿಂತಾಮಣಿ ಹೆಸರುವಾಗಿದೆ. ವಾರದಲ್ಲಿ ಮಂಗಳವಾರ, ಭಾನುವಾರ ಹಾಗೂ ಶುಕ್ರವಾರ ಮಾತ್ರ ಇಲ್ಲಿ ಹುಣಸೆ ಹಣ್ಣಿನ ವಹಿವಾಟು ನಡೆಯುತ್ತಿದ್ದು, ಕೋಟ್ಯಾಂತರ ರೂ. ವಾಣಿಜ್ಯ ವಹಿವಾಟು ನಡೆದು ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರದ ಮಾರುಕಟ್ಟೆಗೆ ಹುಣಸೆ ಹರಿದು ಬರುತ್ತಿದೆ.

ಬಯಲು ಸೀಮೆ ಜಿಲ್ಲೆಗಳಲ್ಲಿ ಹೇರಳ ಪ್ರಮಾಣದಲ್ಲಿ ಹುಣಸೆ ಬೆಳೆಯುವ ರೈತರಿದ್ದು ಅದರಲ್ಲೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಇತರೇ ತಾಲೂಕುಗಳಿಗೆ ಹೋಲಿಸಿಕೊಂಡರೆ ಚಿಂತಾಮಣಿ ತಾಲೂಕಿನಲ್ಲಿ ಹುಣಸೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ವರ್ಷ ಹುಣಸೆ ಮರಗಳು ಬಂಪರ್‌ ಇಳುವರಿ ಕೊಟ್ಟಿದ್ದು, ಸಹಜವಾಗಿಯೆ ಹುಣಸೆ ಕೃಷಿಕರಲ್ಲಿ ಸಂತಸ ಮೂಡಿಸಿದ್ದು ಹಲವು ವಾರಗಳಿಂದ ಹುಣಸೆ ಮಾರುಕಟ್ಟೆ ಆರಂಭಗೊಂಡಿದ್ದು ವಿವಿಧಡೆಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಹುಣಸೆ ಹಣ್ಣು ಮಾರಾಟಕ್ಕೆ ತರುತ್ತಿದ್ದಾರೆ.

ಎಲ್ಲಿ ನೋಡಿದರೂ ಮಾರುಕಟ್ಟೆಯಲ್ಲಿ ಈಗ ಹುಣಸೆ ಘಮಲು ಕಂಡು ಬರುತ್ತಿದೆ. ವಾರದಲ್ಲಿ 3 ದಿನ ನಡೆಯುವ ಹುಣಸೆ ಮಾರುಕಟ್ಟೆ ನೂರಾರು ಕಾರ್ಮಿಕರಿಗೆ ಉದ್ಯೋಗ ನೀಡಿದ್ದು, ಕೈ ತುಂಬ ಕೂಲಿ ಹಣ ಸಿಗುತ್ತಿದೆ. ಮಾರುಕಟ್ಟೆಗೆ ಬರುವ ಹುಣಸೆಯನ್ನು ಗೋಣಿ ಚೀಲಗಳಿಗೆ ತುಂಬುವುದರಿಂದ ಹಿಡಿದು ಲಾರಿಗಳಿಗೆ ಲಾಟ್‌ ಮಾಡುವುದರಿಂದ ನೂರಾರು ಕಾರ್ಮಿಕರ ಅಗತ್ಯವಾಗಿದೆ.

ಕ್ವಿಂಟಲ್‌ ಹುಣಸೆ 3 ರಿಂದ 5 ಸಾವಿರ
ಸದ್ಯ ಚಿಂತಾಮಣಿ ಮಾರುಕಟ್ಟೆ ಹುಣಸೆ ಕ್ವಿಂಟಾಲ್‌ಗೆ 3000 ರಿಂದ 5500 ರೂ. ವರೆಗೂ ಮಾರಾಟಗೊಳ್ಳುತ್ತಿದೆ. ಕಳೆದ ವರ್ಷ 4ರಿಂದ 6 ಸಾವಿರೂಗೆ ಕ್ವಿಂಟಾಲ್‌ ಮಾರಾಟಗೊಂಡಿತ್ತು. ಆದರೆ ಈ ವರ್ಷ ತುಸು ಕಡಿಮೆ ಆಗಿದೆ. ಈ ಬಾರಿ ಹುಣಸೆ ಇಳುವರಿ ಹೆಚ್ಚಾಗಿ ಬಂದಿರುವುದರಿಂದ ಬೆಲೆ ಕಡಿಮೆ ಆಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ನಡೆಯುವ ಹುಣಸೆ ಮಾರುಕಟ್ಟೆಯಲ್ಲಿ 15 ರಿಂದ 20 ಲಾರಿ ಲೋಡ್‌ನ‌ಷ್ಟು ಹುಣಸೆ ಬರುತ್ತಿದೆ.

Advertisement

ಎಪಿಎಂಸಿ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ವಹಿವಾಟು ಶುರುವಾಗಿದೆ. ಪ್ರತಿ ವಾರದಲ್ಲಿ 3 ದಿನ ಮಾತ್ರ ಹುಣಸೆ ಹಣ್ಣಿನ ಖರೀದಿ ಮಾಡಲಾಗುತ್ತಿದೆ. ಹುಣಸೆ ಹಣ್ಣು ಮಾರುಕಟ್ಟೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಬೆಳೆಗಾರರು ಹುಣಸೆ ತರುತ್ತಿದ್ದಾರೆ.
●ಎಂಎಂಎಸ್‌ ಶ್ರೀನಿವಾಸ್‌, ಹುಣಸೆ ವ್ಯಾಪಾರಿ.

■ ಎಂ.ಡಿ.ತಿಪ್ಪಣ್ಣ

Advertisement

Udayavani is now on Telegram. Click here to join our channel and stay updated with the latest news.

Next