Advertisement

ಲುವಾನ್‌ ಟೆನಿಸ್‌: ಸೆಮಿಯಲ್ಲಿ ಸೋತ ಅಂಕಿತಾ

01:16 AM May 12, 2019 | Team Udayavani |

ಲುವಾನ್‌ (ಚೀನ): ‘ಲುವಾನ್‌ ಟೆನಿಸ್‌ ಟೂರ್ನಿ’ಯ ಸೆಮಿಫೈನಲ್ ಪ್ರವೇಶಿಸಿದ ಭಾರತದ ಅಗ್ರ ಟೆನಿಸ್‌ ವನಿತಾ ಸಿಂಗಲ್ಸ್ಆಟಗಾರ್ತಿ ಅಂಕಿತಾ ರೈನಾ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

Advertisement

ಶನಿವಾರ ನಡೆದ ಸೆಮಿಫೈನಲ್ನಲ್ಲಿ ಅಂಕಿತಾ ಆತಿಥೇಯ ನಾಡಿನ ದುವಾನ್‌ ಯಿಂಗಿಂಗ್‌ ವಿರುದ್ಧ 3-6, 6-1, 2-6 ಸೆಟ್‌ಗಳಿಂದ ಸೋತು ಫೈನಲ್ ಪ್ರವೇಶಿಸುವಲ್ಲಿ ವಿಫ‌ಲರಾದರು.

ಮೊದಲ ಸೆಟ್‌ನಲ್ಲಿ ಸೋತ ಅಂಕಿತಾ ದ್ವಿತೀಯ ಸೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ದುವಾನ್‌ ಅವರನ್ನು ಒಂದು ಅಂಕಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ದುವಾನ್‌ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.


Advertisement

Udayavani is now on Telegram. Click here to join our channel and stay updated with the latest news.

Next