Advertisement

Fraud Case ಪಾರ್ಟ್‌ಟೈಂ ಕೆಲಸದ ಆಮಿಷ: 9.29 ಲಕ್ಷ ರೂ. ವಂಚನೆ

09:59 PM Sep 16, 2023 | Team Udayavani |

ಮಂಗಳೂರು: ಟೆಲಿಗ್ರಾಂ ಮೂಲಕ ಬಂದ ಆನ್‌ಲೈನ್‌ ಪಾರ್ಟ್‌ಟೈಂ ಕೆಲಸದ ಸಂದೇಶವನ್ನು ನಂಬಿ 9,29,986 ರೂ. ಕಳೆದುಕೊಂಡಿರುವ ಕುರಿತಂತೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬ ಟೆಲಿಗ್ರಾಂ ಮೂಲಕ ಪಾರ್ಟ್‌ ಟೈಂ ಆನ್‌ಲೈನ್‌ ಕೆಲಸದ ಬಗ್ಗೆ ಸಂದೇಶ ಕಳುಹಿಸಿದ್ದಾನೆ. ಇದನ್ನು ನಂಬಿದ ಅವರು ಬಳಿಕ ಟೆಲಿಗ್ರಾಂ ಗ್ರೂಪ್‌ ಒಂದಕ್ಕೆ ಸೇರಿ, ಅವರು ಕಳುಹಿಸಿದ ಲಿಂಕ್‌ ಮೂಲಕ ಟಾಸ್ಕ್ ಪೂರ್ಣಗೊಳಿಸಿದ್ದಾರೆ. ಅದಕ್ಕೆ 10 ಸಾವಿರ ರೂ. ಬೋನಸ್‌ ಲಭಿಸಿದ್ದು, ಅದರಲ್ಲಿ 1,044 ರೂ.ನ್ನು ತಮ್ಮ ಖಾತೆಗೆ ಹಿಂಪಡೆದಿದ್ದಾರೆ.

ಅನಂತರ ಹೆಚ್ಚಿನ ಕಮಿಷನ್‌ ಆಸೆಯಿಂದ ಮುಂದಿನ ಟಾಸ್ಕ್ ಪೂರ್ಣಗೊಳಿಸಲು 10 ಸಾವಿರ ರೂ. ಡೆಪಾಸಿಟ್‌ ಮಾಡಿದ್ದಾರೆ. ಬಳಿಕ ಬಳಿಕ ಹಂತ ಹಂತವಾಗಿ ಆಟವಾಡಿ 53,848 ರೂ. ತಮ್ಮ ಖಾತೆಗೆ ವಿದ್‌ಡ್ರಾ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಹೆಚ್ಚು ಕಮಿಷನ್‌ ಗಳಿಸಬಹುದು ಎನ್ನುವ ಆಸೆಯಿಂದ ಟಾಸ್ಕ್  ಗಾಗಿ ತಮ್ಮ ವಿವಿಧ ಖಾತೆಯಿಂದ 9.29 ಲಕ್ಷ ರೂ. ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅನಂತರ ಯಾವುದೇ ಟಾಸ್ಕ್ ನೀಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next