Advertisement

America ಪ್ರಜೆಗಳಿಗೆ ಸಾಲ ಆಮಿಷ: ಇಬ್ಬರ ಬಂಧನ

12:41 AM Jun 21, 2024 | Team Udayavani |

ಇಂದೋರ್‌: ಸಾಲ ನೀಡುವ ನೆಪದಲ್ಲಿ ಅಮೆರಿಕ ನಾಗರಿಕರನ್ನು ವಂಚಿಸಿರುವ ಆರೋಪದ ಮೇಲೆ ಕಾಲ್‌ಸೆಂಟರ್‌ ಮಾಜಿ ಉದ್ಯೋಗಿ ಸೇರಿ ಇಬ್ಬರನ್ನು ಮಧ್ಯಪ್ರ ದೇಶದ ಇಂದೋರ್‌ನಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಅಜಯ್‌ ತೋಮರ್‌ ಹಾಗೂ ರಾಹುಲ್‌ ಮಾಲಿ ಎಂದು ಗುರುತಿಸಲಾಗಿದೆ. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡಿ ಅನುಭವವಿದ್ದ ಅಜಯ್‌ ಇಂಗ್ಲೀಷ್‌ನಲ್ಲಿ ಮಾತನಾಡಲು ತಿಳಿದಿದ್ದರಿಂದ ಸುಲಭವಾಗಿ ಅಮೆರಿಕ ನಾಗರಿಕರ ಬಳಿ ಏಜೆಂಟ್‌ ಎಂದು ಮಾತನಾಡಿ ಸಾಲ ನೀಡುವುದಾಗಿ ಹೇಳಿ ಗಿಫ್ಟ್ ವೋಚರ್‌ಗಳನ್ನು ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next