Advertisement

Mangaluru: ವಿದ್ಯಾರ್ಥಿಗಳಿಗೆ ಮದ್ಯದ ಆಮಿಷ… ಪಬ್‌ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

11:44 AM Jul 26, 2024 | Team Udayavani |

ಮಂಗಳೂರು: “ಸ್ಟೂಡೆಂಟ್ಸ್‌ ವೆಡ್ನೆಸ್ ಡೇ ನೈಟ್‌’ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮದ್ಯದ ಆಮಿಷವೊಡ್ಡಿ ಪಾರ್ಟಿಗೆ ಆಹ್ವಾನಿಸಿದ ಪೋಸ್ಟರ ಒಂದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ದೇರೆಬೈಲ್‌ ಕೊಂಚಾಡಿಯ ಪಬ್‌ ಒಂದು ವಿದ್ಯಾರ್ಥಿಗಳನ್ನು ಮದ್ಯದ ಪಾರ್ಟಿಗೆ ನೇರವಾಗಿ ಆಹ್ವಾನಿಸಿತ್ತು. ವಿದ್ಯಾರ್ಥಿಗಳಿಗೆ ಕಾಲೇಜು ಗುರು ತಿನ ಚೀಟಿ ತಂದರೆ ಮಾತ್ರ ಅವಕಾಶ. ಹುಡುಗಿಯರಿಗೂ ಆಹ್ವಾನವಿದೆ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿತ್ತು. ಈ ವಿಷಯ ಪೊಲೀಸ್‌ ಆಯುಕ್ತರ ಗಮನಕ್ಕೆ ಬಂದು ಕಾರ್ಯಕ್ರಮವನ್ನು ರದ್ದು ಪಡಿಸಲು ಆಯೋಜಕರಿಗೆ ಸೂಚಿಸಿದ್ದಾರೆ. ಈ ಕುರಿತಂತೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಕಾರ್ಯಕ್ರಮ ಆಯೋಜಿಸದಂತೆ ಸೂಚಿಸಿದ್ದೇನೆ. ಜತೆಗೆ ಪಬ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಯವರ ಗಮನಕ್ಕೆ ತರಲಾಗಿದೆ ಎಂದು ವಿವರಿಸಿದರು.

ಪೋಸ್ಟರ್‌ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳಿಗೆ ಈ ರೀತಿ ಮದ್ಯದ ಆಮಿಷ ನೀಡಿ ಕರೆಯುವುದು ಸರಿಯಲ್ಲ. ಸಾಮಾಜಿಕ ಆರೋಗ್ಯ ಹಾಳು ಮಾಡುವ ಇಂಥವರ ವಿರುದ್ಧ ಪರವಾನಗಿ ರದ್ದಿನಂಥ ಕಠಿಣ ಕ್ರಮ ಕೈಗೊಳ್ಳಬೇಕು‌ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಂತಹ ಪಬ್‌ಗಳ ಮೇಲೆ ನಿಗಾ ವಹಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Mangaluru: ತಿಂಗಳೊಳಗೆ ಗೋಹತ್ಯೆ ತಡೆಯದಿದ್ದರೆ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next