ಸ್ಟಾರ್ ಚಿತ್ರಗಳು ಬಿಡುಗಡೆ ಮುನ್ನ ಸುದ್ದಿಯಾಗುತ್ತವೆ. ಹೊಸಬರ ಚಿತ್ರಗಳು ಬಿಡುಗಡೆ ನಂತರ ಸದ್ದು ಮಾಡುತ್ತವೆ… ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ಮಾತು ಜನ ಜನಿತ.ಆದರೆ, ಇಲ್ಲೊಂದು ಹೊಸಬರ ಚಿತ್ರ, ಬಿಡುಗಡೆ ಮುನ್ನವೇ ಒಂದಷ್ಟು ಸುದ್ದಿಗೆ ಕಾರಣವಾಗಿದೆ.ಅದರ ಹೆಸರು “ಲುಂಗಿ’. ಹೌದು, ಈ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನವೇ ಒಂದಷ್ಟು ಸುದ್ದಿಯಾಗಿದೆ ಎಂಬುದೇ ಈ ಹೊತ್ತಿನ ಸುದ್ದಿ.
ಶೀರ್ಷಿಕೆ ಮೂಲಕ ಗಮನ ಸೆಳೆದ “ಲುಂಗಿ’, ಆ ಬಳಿಕ ಪೋಸ್ಟರ್, ಸಾಂಗ್, ಟ್ರೇಲರ್ ಮೂಲಕ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿತು. ಈಗ ಮತ್ತೂಂದು ಸುದ್ದಿಯೆಂದರೆ, ಬಿಡುಗಡೆ ಮುನ್ನವೇ ತೆಲುಗಿಗೆ ರೀಮೇಕ್ ಆಗುತ್ತಿದೆ. ಸಹಜವಾಗಿಯೇ ಚಿತ್ರತಂಡಕ್ಕೆ ಇದು ಖುಷಿಯನ್ನು ಹೆಚ್ಚಿಸಿದೆ. ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ ಅರ್ಜುನ್ ಲೂಯಿಸ್, ಚಿತ್ರದ ಬಗ್ಗೆಎಲ್ಲೆಡೆ ನಿರೀಕ್ಷೆ ಹೆಚ್ಚಿದೆ. ಇದೊಂದು ಎಂಜಿನಿಯರಿಂಗ್ ಓದಿದ ಹುಡುಗನೊಬ್ಬನ ಕಥೆ. ಸಾಮಾನ್ಯವಾಗಿ ಎಂಜಿನಿಯರಿಂಗ್ ಓದಿದವರು ಐಟಿ ಕಂಪೆನಿಯಲ್ಲೋ ಅಥವಾ ಅಬ್ರಾಡ್‌ನಲ್ಲೋ ಕೆಲಸ ಅರಸಿ ಹೋಗುವುದುಂಟು. ಆದರೆ, ಈ ಚಿತ್ರದ ನಾಯಕ ಮಾತ್ರ, ಬಿಇ ಓದಿದ್ದರೂ, ತಾನು ತನ್ನ ನೆಲದಲ್ಲೇ ಒಂದು ಬಿಝಿನೆಸ್ ಮಾಡಬೇಕು ಎಂದು ಹಠ ಹಿಡಿಯುತ್ತಾನೆ. ಆಗ ಒಂದು ಲೋಕಲ್ ಉದ್ಯಮಕ್ಕೆ ಕೈಹಾಕುತ್ತಾನೆ.ಅದೇ ಸಿನಿಮಾದ ಹೈಲೈಟ್. ಅದನ್ನು ಹಾಸ್ಯಮಯವಾಗಿಯೂ, ಸಂದೇಶ ಕೊಡುವ ಉದ್ದೇಶದಿಂದಲೂ ತೋರಿಸಲಾಗಿದೆ. ಪಕ್ಕಾ ಈಗಿನ ಯೂಥ್‌ಗೆ ಮಾಡಿರುವ ಸಿನಿಮಾ.ಪೋಷಕರೂ ಸಹ ಚಿತ್ರ ನೋಡಬೇಕು. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರಎಂದು ಭಾವಿಸಿದ್ದೇನೆ. ನಿಮ್ಮೆಲ್ಲರ ಸಹಕಾರ, ಬೆಂಬಲ ಇರಲಿ ಎಂದರು ಅರ್ಜುನ್ ಲೂಯಿಸ್
ಮತ್ತೂಬ್ಬ ನಿರ್ದೇಶಕ ಅಕ್ಷಿತ್ ಶೆಟ್ಟಿ ಅವರಿಗೂ ಇದು ಮೊದಲ ಚಿತ್ರ.”ಲುಂಗಿ’ ಮೇಲೆ ಅವರಿಗೆ ಇನ್ನಿಲ್ಲದ ಭರವಸೆ ಇದೆ. ಚಿತ್ರದಲ್ಲಿ ಮಂಗಳೂರು ಭಾಷೆ ಹೈಲೈಟ್ ಆಗಿದೆ.ಮೊದಲ ಸಲ ಎಲ್ಲರೂ ಹೊಸ ಪ್ರಯತ್ನ ಬೆನ್ನತ್ತಿ ಹೊರಟಿದ್ದೇವೆ. ಹರಸಬೇಕು ಎಂದರು ಅವರು.
ನಾಯಕ ಪ್ರಣವ್ ಹೆಗಡೆ ಅವರಿಗೂ ಇದು ಮೊದಲ ಚಿತ್ರ. ಆ ಬಗ್ಗೆಹೇಳುವ ಪ್ರಣವ್ ಹೆಗಡೆ, ಈ ಚಿತ್ರಕ್ಕೆ ಕಳೆದ ಒಂದುವರೆ ವರ್ಷದಿಂದಲೂ ಎಲ್ಲರೂ ಶ್ರಮಿಸಿದ್ದೇವೆ.ಆರು ಹಂತಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಾರಣ, ಚಿತ್ರಕ್ಕೆ ಎಲ್ಲೂ ಕೊರತೆ ಬರಬಾರದು, ಗುಣಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ. ಚಿತ್ರದ ಹಾಡೊಂದನ್ನು ಅರ್ಮಾನ್ ಮಲ್ಲಿಕ್ ಅವರಿಂದಲೇ ಹಾಡಿಸಬೇಕು ಎಂಬ ಉದ್ದೇಶದಿಂದ ಅವರಿಗಾಗಿ 38 ದಿನಗಳ ಕಾಲ ಕಾದು ಹಾಡಿಸಿದ್ದೇವೆ. ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ಇದ್ದುದರಿಂದಲೇ ಒಳ್ಳೆಯ ಚಿತ್ರ ಮಾಡಲು ಸಾಧ್ಯವಾಗಿದೆ.ಚಿತ್ರದ ಹೈಲೈಟ್ ಅಂದರೆ, ಅದುಸಂಗೀತ. ಹಾಡುಗಳ, ಹಿನ್ನೆಲೆ ಸಂಗೀತ ಕೇಳಿದವರಿಗೆ ಸಿನಿಮಾ ಹಿಡಿಸದೇಇರದು.ಈಗಿನ ಯುವಕರಿಗೆ ಸಿನಿಮಾ ಮಜಾ ಕೊಡಲಿದೆ ಎಂಬ ಗ್ಯಾರಂಟಿ ಕೊಡ್ತೀನಿ ಅಂದರು ಅವರು.
ಅಹಲ್ಯಾ ಸುರೇಶ್ ಅವರಿಗೆಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದು ಹೊಸ ಅನುಭವ ಕೊಟ್ಟಿದೆಯಂತೆ. ಪ್ರಣವ್ ಅವರಿಗಿದು ಮೊದಲ ಸಿನಿಮಾ ಎನಿಸಲ್ಲ. ಅಷ್ಟೊಂದು ಅದ್ಭುತವಾಗಿ ನಟಿಸಿದ್ದಾರೆ. ನನಗೆ ನಗಬೇಡ ಅಂದೆ..ಎಂಬಹಾಡು ಫೇವರೇಟ್. ಉಳಿದಂತೆ ಚಿತ್ರದಲ್ಲಿ ಸಾಕಷ್ಟು ಸಂದೇಶವಿದೆ. ಅಷ್ಟೇ ಹಾಸ್ಯವೂ ಇದೆ. ಚಿತ್ರದಬಗ್ಗೆ ನಾನು ಕಾಂಪ್ಲಿಮೆಂಟ್ಸ್ ಜೊತೆ ಕಂಪ್ಲೇಂಟ್ಸ್ ಕೂಡ ಸ್ವೀಕರಿಸುತ್ತೇನೆ ಎಂದರು ಅಹಲ್ಯಾ ಸುರೇಶ್.
ಛಾಯಾಗ್ರಾಹಕ ರಿಜೊಜ್ವೋ ಪಿ.ಜಾನ್ ಅವರಿಗೆ ಹೊಸಬರ ಜೊತೆ ಕೆಲ್ಸ ಮಾಡಿದ ಅನುಭವ ಅನನ್ಯವಂತೆ. ಎಲ್ಲವೂ ಇಲ್ಲಿ ನ್ಯಾಚುರಲ್ ಆಗಿ ಮೂಡಿಬಂದಿದೆಯಂತೆ. ಸಿನಿಮಾ ಎಲ್ಲಾ ವರ್ಗದವರಿಗೂ ಇಷ್ಟ ಆಗುತ್ತೆತೆ ಎಂದರು ಅವರು.
ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ, ವಿನೀತ್ ಮಾತನಾಡಿದರು.