Advertisement
ಪ್ರವಾಸಿ ಇಂಗ್ಲೆಂಡ್ ಎದುರಿನ ಸರಣಿಯ ವೇಳೆ 4 ಟೆಸ್ಟ್, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಾಗುವುದು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿ. 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಇದೇ ವೇಳೆ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಹೆಸರಿಸಿರುವ ದಕ್ಷಿಣ ಆಫ್ರಿಕಾ 6 ಮಂದಿ ಹೊಸಬರಿಗೆ ಅವಕಾಶ ನೀಡಿದೆ. ಭಾರತದೆದುರಿನ 3ನೇ ಟೆಸ್ಟ್ ಪಂದ್ಯದ ವೇಳೆ ಗಾಯಾಳಾಗಿ ಹೊರಗುಳಿದಿದ್ದ ಸ್ಪಿನ್ನರ್ ಕೇಶವ್ ಮಹಾರಾಜ್ ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್ (ನಾಯಕ), ಟೆಂಬ ಬವುಮ, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಬ್ಯೂರನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಪೀಟರ್ ಮಾಲನ್, ಐಡನ್ ಮಾರ್ಕ್‌ರಮ್, ಜುಬೇರ್ ಹಮ್ಜಾ, ಅನ್ರಿಚ್ ನೋರ್ಜೆ, ಡೇನ್ ಪೀಟರ್‌ಸನ್, ಆ್ಯಂಡಿಲ್ ಫೆಲುಕ್ವಾಯೊ, ವೆರ್ನನ್ ಫಿಲಾಂಡರ್, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ರುಡಿ ಸೆಕೆಂಡ್, ರಸ್ಸಿ ವಾನ್ ಡರ್ ಡುಸೆನ್.