Advertisement
ವಿದೇಶಿಗರೂ ಮೆಚ್ಚಿದ ಲುಂಗಿಭಾರತೀಯ ಕುಟುಂಬಗಳಿಗೆ ಹೆಚ್ಚು ಪರಿಚಿತವಾಗಿರುವ ಸಾಮಾನ್ಯ ಲುಂಗಿಯು ಪಾಶ್ಚಿಮಾತ್ಯರ ಗಮನ ಸೆಳೆದಿದ್ದೇ ಒಂದು ವಿಶೇಷ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಲುಂಗಿ ಉಟ್ಟು ಬೋರಲು ಮಲಗಿದರೆ ಯಾವ ಸೆಕೆಯೂ ಬಾಧಿಸದು ಎನ್ನುವುದು ಹಲವು ಲುಂಗಿ ಪ್ರಿಯರ ವಾದವಾದರೂ ಎಲ್ಲರೂ ಇದಕ್ಕೆ ಅಸ್ತು ಅಂದಿಲ್ಲ. ಕೆಲವು ಕಂಪೆನಿಗಳು ಲುಂಗಿಗೆ ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ಸುಲಭವಾಗಿ ಕಳಚಿ ಬೀಳದಂತೆ, ಕಿಸೆಗಳು ಇರುವಂತ ಮಾರ್ಪಡುಗಳನ್ನು ಮಾಡಿಕೊಟ್ಟು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಷ್ಟ ಪಡುವಂತೆ ಮಾಡುತ್ತಿದೆ.
ತೀರಾ ಇತ್ತೀಚೆಗೆ, ಲಾಂಗಿ ಬ್ರದರ್ಸ್ ಎಂಬ ವೆಬ್‌ಸೈಟ್ ಲಾಂಗಿಯನ್ನು ಜಗತ್ತಿಗೆ ಪರಿಚಯಿಸಿತು, ವೀಡಿಯೊದಲ್ಲಿ, ಅವರು ಅದರ ಬಹುಮುಖತೆಯನ್ನು ಉತ್ತೇಜಿಸಲು ಪ್ರಯತ್ನಿಸಿದ್ದಾರೆ. ಇದನ್ನು ಸ್ಕಾರ್ಪ್, ಬೀಚ್ ಟವೆಲ್, ತ್ವರಿತ ಬದಲಾಯಿಸುವ ಕೋಣೆ ಮತ್ತು ಚೀಲವಾಗಿ ಬಳಸಬಹುದು ಎಂದು ವೀಡಿಯೋಯಲ್ಲಿ ತೋರಿಸಿದ್ದರು. ಇದು ವಿದೇಶಿಗರ ಗಮನ ಸೆಳೆಯುವಳ್ಳಿ ಸಹಕಾರಿಯಾಯಿತು ಎಂಬುದು ಒಂದು ವಾದವಿದೆ. ಲುಂಗಿ ಬ್ಯಾಗ್; ಹಾಸ್ಯಾಸ್ಪದ
ಲುಂಗಿ ಬ್ರದರ್ಸ್ ವಿಡಿಯೋ ವೈರಲ್ ಆದ ಬಳಿಕ ಲುಂಗಿಗೆ ಜಾಗತಿಕ ಮನ್ನಣೆ ಸಿಕ್ಕಿರಬಹುದು. ಲುಂಗಿಯ ಪರಿಚಯವಿಲ್ಲದ ವ್ಯಕ್ತಿಗೆ ಅದೊಂದು ಫ್ಯಾಶನ್ ಆಗಿ ಕಾಣುತ್ತದೆ; ಆದರೆ ಇದನ್ನು ಸ್ಕಾರ್ಪ್, ಬ್ಯಾಗ್ ಇತ್ಯಾದಿಗಳಾಗಿ ಬಳಸಬಹುದು ಎಂದು ಲಾಂಗಿ ಬ್ರದರ್ಸ್ ಹೇಳುವುದು ಹಾಸ್ಯಾಸ್ಪದವಾಗಿದೆ. ಅವರು ವೈರಲ್ ಆಗಬಹುದೆಂದು ಯಾರೂ ಭಾವಿಸಿರಲಿಲ್ಲ. ಎಂದು ಕೇರಳದ ಎಂಜಿನಿಯರ್ ಭರತ್‌ಕೃಷ್ಣ ಹೇಳುತ್ತಾರೆ.
Related Articles
Advertisement
ಫ್ಯಾಶನ್ ಉದ್ಯಮದಲ್ಲಿರುವವರು ಯಾವಾಗಲೂ ಹೆಚ್ಚು ಸಕಾರಾತ್ಮಕವಾಗಿ ಯೋಚಿಸುತ್ತಿರುತ್ತಾರೆ. ಲುಂಗಿಯು ಜಾಗತಿಕವಾಗಿ ಹಲವರಿಗೆ ಇಷ್ಟವಾಗಬಹುದು ಹಾಗೂ ತನ್ನ ಸ್ವರೂಪಗಳನ್ನು ಬದಲಿಸುತ್ತಾ ಸಾಗಬಹುದು. ಅದು ಅವರರವರ ದೃಷ್ಟಿಕೋನದಲ್ಲಿರುತ್ತದೆ. ನೀವು ಲುಂಗಿಯನ್ನು ಬ್ಲೇಜರ್‌ನೊಂದಿಗೆ ಉಡುವಿರೋ? ಅದೇ ಮುಂದೆ ಫ್ಯಾಶನ್ ಟ್ರೆಂಡ್ ಆಗುತ್ತದೆ ಎಂಬುದು ವಸ್ತ್ರ ವಿನ್ಯಾಸಕಿಯಾಗಿರುವ ಇಂದ್ರಾಕ್ಷಿ ಪಟ್ನಾಯಕ್ ಅವರ ಅಭಿಪ್ರಾಯ.