Advertisement

ಚಂದ್ರನ ಅಧ್ಯಯನ: ಶೇ. 61ರಷ್ಟು ಯಶಸ್ಸು

12:18 AM Jul 16, 2019 | Team Udayavani |

ಹೊಸದಿಲ್ಲಿ: ಕಳೆದ ಆರು ದಶಕಗಳಲ್ಲಿ ಚಂದ್ರನ ಅಧ್ಯಯನ ಕ್ಕಾಗಿ ನಾನಾ ದೇಶಗಳಿಂದ 109 ಪ್ರಯತ್ನಗಳಾಗಿದ್ದು, ಅವುಗಳಲ್ಲಿ 61 ಮಾತ್ರ ಯಶಸ್ವಿಯಾಗಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಹೇಳಿದೆ.

Advertisement

ಇಸ್ರೋದ ಚಂದ್ರಯಾನ-2 ಉಡಾವಣೆ ಮುಂದೂಡಲ್ಪಟ್ಟ ಬೆನ್ನಿಗೇ ನಾಸಾ ಈ ಮಾಹಿತಿ ಹಂಚಿಕೊಂಡಿದೆ. ಉಪಗ್ರಹ ಉಡಾವಣೆ ತಂತ್ರಜ್ಞಾನಕ್ಕಿಂತ ಚಂದ್ರನ ಅಧ್ಯಯನ ತಂತ್ರ ಜ್ಞಾನ ಹೆಚ್ಚು ಕ್ಲಿಷ್ಟಕರ ಎಂದಿರುವ ನಾಸಾ, “ಚಂದ್ರನ ಅಧ್ಯಯ ನಕ್ಕೆ ಮಾನವ ಮೊದಲು ಮುಂದಾಗಿದ್ದು, 1958ರಲ್ಲಿ. ಅಲ್ಲಿಂದ 2019ರ ವರೆಗೆ ಶೇ. 61ರಷ್ಟು ಉಡಾವಣೆಗಳು ಮಾತ್ರ ಯಶಸ್ವಿಯಾಗಿವೆ. 1958ರಲ್ಲಿ ಅಮೆರಿಕದ “ಪಯೋನಿಯರ್‌ 0′ ಎಂಬ ಉಡಾವಣೆ ವಿಫ‌ಲವಾಗಿತ್ತು. ಅದರ ಅನಂತರವೂ ಸತತ ವೈಫ‌ಲ್ಯಗಳು ಉಂಟಾಗಿ, 6ನೇ ಪ್ರಯತ್ನ ಯಶಸ್ವಿಯಾಗಿತ್ತು’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next