Advertisement

ಚಂದ್ರಗ್ರಹಣ: ಕುಕ್ಕೆ ಖಾಲಿ ಖಾಲಿ

02:19 PM Feb 01, 2018 | Team Udayavani |

ಸುಬ್ರಹ್ಮಣ್ಯ : ಖಗ್ರಾಸ ಚಂದ್ರಗ್ರಹಣ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಬುಧವಾರ ಭಕ್ತರ ಸಂಖ್ಯೆ ವಿರಳವಾಗಿತ್ತು. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕ್ಷೇತ್ರ ಖಾಲಿಯಾಗಿ ಗೋಚರಿಸಿತು.

Advertisement

ದೇವರ ದರ್ಶನ ಹಾಗೂ ಸೇವೆಯ ಸಮಯದಲ್ಲೂ ವ್ಯತ್ಯಯ ಮಾಡಲಾಗಿತ್ತು. ಭಕ್ತರು ಬೆಳಗ್ಗೆ 6.30ರಿಂದ 9ರ ತನಕ ದೇವರ ದರ್ಶನ ಪಡೆದರು. ಬೆಳಗ್ಗೆ 8 ಗಂಟೆಗೆ ಮಹಾಪೂಜೆ ನೆರವೇರಿತು. ಕೆಲವು ಭಕ್ತರಷ್ಟೇ ದೇವಸ್ಥಾನದ ಬಳಿ ಕಾಯುತ್ತಿದ್ದರು. ಮಧ್ಯಾಹ್ನ ಅನ್ನ ಪ್ರಸಾದದ ವ್ಯವಸ್ಥೆಯೂ ಇರಲಿಲ್ಲ. ದೇಗುಲದ ಮುಂಭಾಗ ರಥಬೀದಿ ಬಿಕೋ ಎನ್ನುತ್ತಿತ್ತು. ಬಹುತೇಕ ವ್ಯಾಪಾರಸ್ಥರು ಅಂಗಡಿ -ಮುಂಗಟ್ಟು ಮುಚ್ಚಿ ವಿಶ್ರಾಂತಿ ಪಡೆದರು. ನಗರದಲ್ಲಿ ಸ್ವಯಂಪ್ರೇರಿತ ಬಂದ್‌ ವಾತಾವರಣವಿತ್ತು. ವಾಹನಗಳ ಓಡಾಟವೂ ಇಳಿಮುಖವಾಗಿತ್ತು.

ಸುಬ್ರಹ್ಮಣ್ಯ ಕ್ಷೇತ್ರವಲ್ಲದೆ ಪಕ್ಕದ ಶ್ರೀ ಹರಿಹರೇಶ್ವರ ದೇವಸ್ಥಾನ, ಕಟ್ಟ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲೂ ಪೂಜೆ, ದೇವರ ದರ್ಶನದ ಅವಧಿ ಹಾಗೂ ಸೇವೆಯಲ್ಲಿ ವ್ಯತ್ಯಯವಾಗಿದ್ದರಿಂದ ಭಕ್ತರ ಸಂಖ್ಯೆ ಬಹಳ ಕಡಿಮೆಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next