Advertisement
2020ರಲ್ಲಿ ಎರಡು ಬಾರಿ ಚಂದ್ರಗ್ರಹಣ, ಒಂದು ಬಾರಿ ಸೂರ್ಯಗ್ರಹಣ ಗೋಚರಿಸಿದ್ದು, ನಾಲ್ಕನೇ ಗ್ರಹಣ ಜುಲೈ 5ರಂದು ಗೋಚರಿಸಲಿದೆ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.
ಜುಲೈ 5ರ ಭಾನುವಾರ ಸಂಭವಿಸುವ ತೆಳುಛಾಯೆ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ 11.22ಕ್ಕೆ ಗ್ರಹಣ ಪೂರ್ಣಗೊಳ್ಳಲಿದೆ. ಒಟ್ಟು ಎರಡು ತಾಸು 45 ನಿಮಿಷಗಳ ಕಾಲ ಗ್ರಹಣ ನಡೆಯಲಿದೆ. ಏನಿದು ಪೆನುಂಬ್ರ ಗ್ರಹಣ ಅಂದರೆ ಜುಲೈ 5ರಂದು ಭೂಮಿಯ ನೆರಳಿನ ಹೊರಭಾಗದ ಮಾರ್ಗವಾಗಿ ಚಲಿಸಲಿರುವ ಚಂದ್ರ, ಅರ್ಧ ಭಾಗ ಅಥವಾ ಪೂರ್ಣ ಪ್ರಮಾಣದಲ್ಲಿ ಮರೆಯಾಗದೆ ತೆಳುಛಾಯೆಯಲ್ಲಿ ಸಂಪೂರ್ಣವಾಗಿ ಗೋಚರಿಸಲಿದ್ದಾನೆ. ಈ ತೆಳುಛಾಯೆ ಚಂದ್ರಗ್ರಹಣ ಜನ್ಮರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲವಂತೆ.
Related Articles
ನವೆಂಬರ್ 30ರಂದು ಚಂದ್ರಗ್ರಹಣ (ಪೆನುಂಬ್ರ) ಸಂಭವಿಸಲಿದೆ. ಆದರೆ ಇದು ಭಾರತದಲ್ಲಿ ಗೋಚರವಾಗವುದಿಲ್ಲ. ಏಷ್ಯಾ ಭಾಗ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕ್, ಅರ್ಕಾಟಿಕ್ ಪ್ರದೇಶದಲ್ಲಿ ಗ್ರಹಣ ಗೋಚರಿಸಲಿದೆ.
Advertisement