Advertisement

ಜ.10ಕ್ಕೆ ಈ ವರ್ಷದ ಮೊದಲ ಚಂದ್ರ ಗ್ರಹಣ

11:00 AM Jan 09, 2020 | sudhir |

ಹೊಸದಿಲ್ಲಿ: ಪ್ರಸಕ್ತ ವರ್ಷದ ಮೊದಲ ಚಂದ್ರ ಗ್ರಹಣ ಜ.10ರಂದು ನಡೆಯಲಿದೆ. ಭಾರತದಲ್ಲಿ ಆ ದಿನ ರಾತ್ರಿ 10:37 ರಿಂದ ಜ. 11ರ ಬೆಳಗ್ಗೆ 2.42 ನಿಮಿಷ ಗಳ ಕಾಲ ಗೋಚರಿಸಲಿದೆ. ಅಂದರೆ ಒಟ್ಟು 4 ಗಂಟೆ 5 ನಿಮಿಷಗಳ ಕಾಲ ದೇಶದಲ್ಲಿ ಗ್ರಹಣ ಕಾಣಿಸಿ ಕೊಳ್ಳಲಿದೆ.

Advertisement

ಅರೆ ನೆರಳಿನ ಈ ಚಂದ್ರಗ್ರಹಣವನ್ನು ಐರೋಪ್ಯ ಒಕ್ಕೂಟ, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕದ ಹೆಚ್ಚಿನ ಭಾಗಗಳು, ದಕ್ಷಿಣ ಅಮೆರಿಕದ ಪೂರ್ವ ಭಾಗಗಳು, ಪೆಸಿಫಿಕ್‌, ಅಟ್ಲಾಂಟಿಕ್‌, ಹಿಂದೂ ಮಹಾಸಾಗರ, ಆರ್ಕ್‌ಟಿಕ್‌ ಪ್ರದೇಶಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ.

ಕಾಸ್ಮೋ ಸೇಪಿಯನ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ದೇಶದ ಕಾಲಮಾನ ಜ.10 ರಾತ್ರಿ 10:37ರಿಂದ ಜ.11ರ ಬೆಳಗ್ಗೆ 2:42 ಗಂಟೆಯ ವರೆಗೆ ನೇರ ಪ್ರಸಾರದಲ್ಲಿ ವೀಕ್ಷಿಸಲು ಅವಕಾಶ ಉಂಟು. ಇತ್ತೀಚೆಗೆ ನಡೆದ ಸೂರ್ಯಗ್ರಹಣ ವೀಕ್ಷಿಸಿದಂತೆ ವಿಶೇಷ ವ್ಯವಸ್ಥೆಗಳು ಚಂದ್ರ ಗ್ರಹಣ ವೀಕ್ಷಿಸಲು ಬೇಡ. ಮೋಡಗಳು ಬಾನಿನಲ್ಲಿ ಇಲ್ಲದೇ ಇದ್ದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next