Advertisement
ಜರ್ಮನಿಯ ಸರಕಾರಿ ಸ್ವಾಮ್ಯದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ‘ಕಾಶ್ಮೀರದ ಸಮಸ್ಯೆಯನ್ನು ಯಾರೂ ಓಗೊಡಲೇ ಇಲ್ಲ. ಏಕೆಂದರೆ, ಪಾಶ್ಚಿ ಮಾತ್ಯ ರಾಷ್ಟ್ರಗಳಿಗೆ ತಮ್ಮ ವಾಣಿಜ್ಯ ಹಿತಾಸಕ್ತಿಯೇ ಮುಖ್ಯವಾಗಿದೆ. ಭಾರತವು ದೊಡ್ಡ ಮಾರುಕಟ್ಟೆಯಾಗಿರುವ ಕಾರಣ, ಯಾರೂ ಆ ದೇಶದ ವಿರುದ್ಧ ಸೊಲ್ಲೆತ್ತುತ್ತಿಲ್ಲ’ ಎಂದೂ ಖಾನ್ ಹೇಳಿದ್ದಾರೆ.
Related Articles
ಕಳವು ಮತ್ತು ವಂಚನೆ ಮೂಲಕವೇ ಕ್ಷಿಪಣಿ ತಂತ್ರಜ್ಞಾನ ಪಡೆದುಕೊಂಡ ಪಾಕಿಸ್ಥಾನದ ಕಿಡಿಗೇಡಿತನ ಮತ್ತೂಮ್ಮೆ ಬಯಲಾಗಿದೆ. ಆ ದೇಶಕ್ಕಾಗಿ ಪರಮಾಣು ತಂತ್ರಜ್ಞಾನವನ್ನು ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಅಮೆರಿಕ ಸರಕಾರ ತಿಳಿಸಿದೆ.
Advertisement
ಅವರೆಲ್ಲರೂ ರಾವಲ್ಪಿಂಡಿಯ ‘ಬ್ಯುಸಿನೆಸ್ ವರ್ಲ್ಡ್’ ಎಂಬ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದವರು ಎಂದು ಗೊತ್ತಾಗಿದೆ. ಬಂಧಿತರು ಅಮೆರಿಕದಲ್ಲಿ ಸಿದ್ಧಪಡಿಸಿದ ಪರಮಾಣು ಸರಕನ್ನು ವರ್ಷಗಳ ಕಾಲ ಪಾಕ್‌ಗೆ ಸಾಗಿಸುತ್ತಿದ್ದರು. ಈ ಮೂಲಕ ದೇಶದ ಭದ್ರತೆಗೆ ಅಪಾಯ ಉಂಟುಮಾಡಿದ್ದಾರೆ ಎಂದು ಸಹಾಯಕ ಅಟಾರ್ನಿ ಜನರಲ್ ಜಾನ್ ಡೆಮರ್ಸ್ ಹೇಳಿದ್ದಾರೆ.
2014ರ ಸೆಪ್ಟಂಬರ್‌ನಿಂದ 2019ರ ಅಕ್ಟೋಬರ್‌ವರೆಗೆ ಐವರು ಕಾನೂನು ಬಾಹಿರವಾಗಿ ಪರಮಾಣು ಸರಕುಗಳನ್ನು ಪಾಕ್‌ಗೆ ಸಾಗಿಸುತ್ತಿದ್ದರು. ಆರೋಪಪಟ್ಟಿಯಲ್ಲಿ 29 ವಿವಿಧ ಕಂಪೆನಿಗಳಲ್ಲಿ ಈ ಐವರು ಕಾರ್ಯಾಚರಣೆ ನಡೆಸಿದ್ದರು ಎಂದು ಹೇಳಲಾಗಿದೆ.