Advertisement

ಅಕ್ಷರ ಸಂಸ್ಕೃತಿಯಲ್ಲಿ ಲೂಸಿ ಮಾತೆಯವರ ಸೇವೆ ಶಾಶ್ವತ

05:54 PM Nov 01, 2021 | Team Udayavani |

ಧಾರವಾಡ: ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ, 5 ಕೃತಿಗಳ ಲೋಕಾರ್ಪಣೆ ಹಾಗೂ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಉದ್ಘಾಟನೆ ಸಮಾರಂಭವನ್ನು ನಗರದ ಕವಿಸಂನಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಸಾನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಬದುಕಿನ ನಾಳೆಗಾಗಿ ಇಟ್ಟುಕೊಳ್ಳದೇ ಸರ್ವವನ್ನೂ ಸಮಷ್ಟಿಗಾಗಿ ಸಮರ್ಪಿಸಿದ ಲೂಸಿ ಸಾಲ್ಡಾನಾ ಆದರ್ಶ ಮಾತೆಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಎಲ್ಲೆಡೆ ಶಾಶ್ವತವಾದ ಅಕ್ಷರದ ಬೆಳಕು ಪ್ರಜ್ವಲಿಸಲು ತ್ಯಾಗಮಯಿ ಲೂಸಿ ಮಾತೆಯವರ ಸೇವೆ ಅಕ್ಷರ ಸಂಸ್ಕೃತಿಯಲ್ಲಿ ಶಾಶ್ವತವಾಗಿರುತ್ತದೆ ಎಂದರು.

ರಾಜ್ಯ ಪ್ರಶಸ್ತಿ ಪ್ರದಾನ: ಪತ್ರಕರ್ತರಾದ ಶ್ರೀಕಾಂತ ಬೆಟಗೇರಿ, ಡಿ.ವಿ. ಕಮ್ಮಾರ, ಪ್ರಶಾಂತ ದಿನ್ನಿ ಹಾಗೂ ವಿವಿಧ ಕ್ಷೇತ್ರಗಳ ಮಲ್ಲಿಕಾರ್ಜುನ ರಡ್ಡೇರ, ಮಂಜುನಾಥ ಗದ್ದಿಗೌಡರ(ಕಲಬುರ್ಗಿ), ಎಸ್‌.ವೈ. ಬಿಜಲಿ, ರಾಜಶ್ರೀ ಮಡಿವಾಳರ, ತನುಜಾಬಿ ನದಾಫ್‌, ಮನೋಹರ ಹಾತರಕಿ,
ಹೂವಪ್ಪ ಜಂಗಣ್ಣವರ, ಅಶೋಕ ಗರಗದ ಅವರಿಗೆ ಶ್ರಮಿಕರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾರ್ಜುನ ಚರಂತಿಮಠ, ಸುಚೇತಾ ಹೂಗಾರ, ಸಂಜೀವ ಪಾಟೀಲ, ಪಲ್ಲವಿ ಎಂ., ಎಲ್‌.ಎಸ್‌. ಕೇಸರಿ, ವಿಠuಲ ಮಡಿವಾಳರ, ಶೈಲಜಾ ಕೌಜಗೇರಿ, ಅರುಣಾ ಬೆಟಗೇರಿ, ಕಲ್ಪನಾ ಚಂದನಕರ, ಅರುಣ ಜೋಶಿ, ಬಸವರಾಜ ತುರಮರಿ, ಡಾ|ನಾಗೇಂದ್ರ ಛಲವಾದಿ, ಸುರೇಶ ಗೋವಿಂದರೆಡ್ಡಿ, ಶಿವಾಜಿ ಜಾಧವ, ಶೀಲಾ ಪಿ., ಎಸ್‌.ಬಿ. ಶಿವಸಿಂಪಿ, ಸಂಜಯ ಕೊಡಿ, ರಜಿಯಾ ಭಾಷಾ, ವಿ.ಎಂ. ನಾಗನಗೌಡ್ರ,ಎನ್‌.ಬಿ.ಗಿರಿಯಪ್ಪನವರ, ಪ್ರಭಾವತಿ ಅಂಗಡಿ,ಶೈಲಾ ಕಿತ್ತೂರ, ಸೈಯ್ಯದ್‌ಪೀರ ಕುಪ್ಪೇಲೂರ,ಬಸವರೆಡ್ಡಿ ಮಾಡಳ್ಳಿ ಅವರಿಗೆ ಶಿಕ್ಷಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಸರಕಾರಿ ಆದರ್ಶ ವಿದ್ಯಾಲಯ ಹಾಗೂ ಕೆಲಗೇರಿಯ ಸರಕಾರಿ ಹಿ.ಪ್ರಾ ಶಾಲೆ, ತಾಲೂಕಿನ ಕರಡಿಗುಡ್ಡದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಹುಬ್ಬಳ್ಳಿ ತಾಲೂಕಿನ ಹೆಬಸೂರ ಸರಕಾರಿ ಹಿ.ಪ್ರಾ.ಕನ್ನಡ ಹೆಣ್ಣು ಮಕ್ಕಳ ಶಾಲೆ, ಅಳ್ನಾವರದ ಸರಕಾರಿ ಮಾದರಿ ಉರ್ದು ಶಾಲೆಗಳಿಗೆ
ಶಾಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಪ್ರಿಯಾಂಕಾ ಓಲೆಕಾರ, ಪ್ರೀತಿ ಕೊಟಬಾಗಿ, ಹಸೀನಾ ಸಮುದ್ರಿ, ರಾಜೀವಸಿಂಗ್‌ ಹಲವಾಯಿ ಅವರನ್ನು ಗೌರವಿಸಲಾಯಿತು.

ಸಾಹಿತಿ ವೈ.ಬಿ.ಕಡಕೋಳ ಅವರ ಸ್ವರ್ಗ ನರಕ, ಬದುಕು-ಬರಹ, ತುಂಬಿದ ಹೊಳೆ, ಅಡುಗೆ ವೈವಿಧ್ಯ ಹಾಗೂ ಹಬ್ಬಗಳ ಸಿರಿ ಕೃತಿಗಳನ್ನು ಮಕ್ಕಳ ಸಾಹಿತಿ ಶಂಕರ ಹಲಗತ್ತಿ, ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯಾಧ್ಯಕ್ಷ ಗುರು ತಿಗಡಿ, ಶಿಕ್ಷಣಾಧಿ ಕಾರಿ ವಿದ್ಯಾ ನಾಡಿಗೇರ,
ಡಯಟ್‌ ಉಪನ್ಯಾಸಕಿ ಡಾ|ರೇಣುಕಾ ಅಮಲಝರಿ ಹಾಗೂ ಜೀವನ ಶಿಕ್ಷಣ ಸಂಪಾದಕ ಡಾ|ಗುರುಮೂರ್ತಿ ಯರಗಂಬಳಿಮಠ ಅವರು ಬಿಡುಗಡೆಗೊಳಿಸಿದರು. ಅಕ್ಷರಮಾತೆ ಲೂಸಿ ಸಾಲ್ಡಾನಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘಗಳ ಪರಿಷತ್ತಿನ ಮಹಾಪ್ರಧಾನ ಕಾರ್ಯದರ್ಶಿ ಅಶೋಕ ಸಜ್ಜನ, ಚಂದ್ರಶೇಖರ ತಿಗಡಿ ಸೇರಿದಂತೆ ಹಲವರು ಮಾತನಾಡಿದರು.

Advertisement

ಜಿ.ಟಿ. ಶಿರೋಳ, ಬಾಬಾಜಾನ ಮುಲ್ಲಾ, ಹಿರಿಯ ಪತ್ರಕರ್ತ ಪುಂಡಲೀಕ ಬಾಳ್ಳೋಜಿ, ವಿವಿಧ ಶಿಕ್ಷಕರ ಸಂಘಗಗಳ ಎಸ್‌.ವೈ. ಸೊರಟ, ಮಲ್ಲಿಕಾರ್ಜುನ ಉಪ್ಪಿನ, ಸಂಗಮೇಶ ಖನ್ನಿನಾಯ್ಕರ, ಶಿವಾನಂದ ಕೂಡಸೋಮಣ್ಣವರ, ಆರ್‌. ನಾರಾಯಣಸ್ವಾಮಿ ಚಿಂತಾಮಣಿ, ಗುರು ಪೋಳ, ಎಸ್‌.ಎಫ್‌. ಪಾಟೀಲ, ಶಂಶೇರಖಾನ್‌, ಟಿ.ಕೆ. ನಾಗೇಶ, ಸುವರ್ಣಾ ನಾಯಕ, ಶಂಕರಪ್ಪ ಘಟ್ಟಿ, ಸಾಲ್ಡಾನಾ ಸೇವಾ ಸಂಸ್ಥೆ ಅಧ್ಯಕ್ಷ ಎಲ್‌.ಐ.ಲಕ್ಕಮ್ಮನವರ, ಗೌರವಾಧ್ಯಕ್ಷ ಭೀಮಪ್ಪ ಕಾಸಾಯಿ, ಚಂದ್ರಶೇಖರ ತಿಗಡಿ, ಕಾರ್ಯಾಧ್ಯಕ್ಷ ಅಕ್ಷರಲಿ ಸೋಲಾಪೂರ, ಅಜಿತಸಿಂಗ್‌ ರಜಪೂತ, ರುದ್ರೇಶ ಕುರ್ಲಿ, ಆರ್‌.ಎಸ್‌. ಹಿರೇಗೌಡರ, ಕಾಶಪ್ಪ ದೊಡವಾಡ, ನಾರಾಯಣ ಭಜಂತ್ರಿ, ಎಸ್‌.ಎಸ್‌.ಧನಿಗೊಂಡ, ಭಾರತಿ ಸಾಧನಿ, ವಿ.ಎನ್‌. ಕೀರ್ತಿವತಿ, ಗಂಗವ್ವ ಕೋಟಿಗೌಡರ, ಕೆ.ಎಂ.ಮುನವಳ್ಳಿ, ಶಿವಲೀಲಾ ಪೂಜಾರ, ಅಶೋಕ ಬಳಿಗೇರ, ಶಕುಂತಲಾ ಅರಮನಿ, ಶರಣು ಪೂಜಾರ, ಫಕ್ಕೀರಪ್ಪ ಮಡಿವಾಳರ, ರಮೇಶ ಮಂಗೋಡಿ, ಐ.ಎಚ್‌ .ನದಾಫ್‌, ಎಂ.ಎನ್‌.ಸತ್ತೂರ, ಅಲ್ಲಾಭಕ್ಷ ನದಾಫ್‌, ಎಂ.ಜಿ.ಸುಬೇದಾರ, ಎಂ.ಟಿ.ಸುಂಕದ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next