Advertisement

ಗನ್‌ನಿಂದ ಹಲ್ಲೆಕೋರರ ಹಿಮ್ಮೆಟ್ಟಿಸಿದ ಮಹಿಳೆ

08:00 AM Feb 06, 2018 | Harsha Rao |

ಲಕ್ನೋ: ಪತಿಯ ಮೇಲೆ ಎರಗಿದ ದುಷ್ಕರ್ಮಿಗಳನ್ನು ಪತ್ನಿಯೇ ಗುಂಡು ಹಾರಿಸಿ ಓಡಿಸಿದ ಅಚ್ಚರಿಯ ಬೆಳವಣಿಗೆಯೊಂದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಕಾಕೋರಿ ಎಂಬಲ್ಲಿ ನಡೆದಿದೆ. ಈ ವೀಡಿಯೋ ಇದೀಗ ವೈರಲ್‌ ಆಗಿದೆ. ಪತ್ರಕರ್ತ ಆಬಿದ್‌ ಅಲಿ ಅವರನ್ನು ವಿಚಾರಿಸಿಕೊಂಡು ವ್ಯಕ್ತಿಯೊಬ್ಬ ಬಂದಿದ್ದ. ಮನೆಯ ಗೇಟ್‌ನ ಬೀಗ ತೆಗೆದು ನೋಡುತ್ತಿದ್ದಂತೆ ಒಳನುಗ್ಗಿದ ಐವರು ಏಕಾಏಕಿ ಆಬಿದ್‌ ಮೇಲೆ ಹಲ್ಲೆ ನಡೆಸುತ್ತಾರೆ. ಅಲ್ಲದೆ ಅವರನ್ನು ರಸ್ತೆಗೆ ಎಳೆದುಕೊಂಡು ಹೋಗಿ ಥಳಿಸುತ್ತಾರೆ. ಅಷ್ಟರಲ್ಲಿ ಮನೆಯೊಳಗಿಂದ ಧಾವಿಸಿ ಬಂದ ಪತ್ನಿ, ದುಷ್ಕರ್ಮಿಗಳನ್ನು ಗುರಿಯಾ ಗಿಸಿಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸುವ ದೃಶ್ಯಗಳು ದಾಖಲಾಗಿವೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next