Advertisement

ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ ಪಂಜಾಬ್‌ ಕಿಂಗ್ಸ್‌: ಸ್ಥಿರ ನಿರ್ವಹಣೆಯೇ ಗುರಿ

12:53 AM Apr 28, 2023 | Team Udayavani |

ಮೊಹಾಲಿ: ಐಪಿಎಲ್‌ ಸ್ಪರ್ಧೆಯು ಇದೀಗ ಮಧ್ಯ ಘಟಕ್ಕೆ ತಲುಪಿದ್ದು ಪ್ಲೇ ಆಫ್ಗೇರಲು ಕಣದಲ್ಲಿರುವ ಪ್ರತಿಯೊಂದು ತಂಡಗಳು ಇನ್ನುಳಿದ ಎಲ್ಲ ಪಂದ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಖಚಿತ ಮಾತ್ರವಲ್ಲದೇ ಗೆಲುವಿನ ದೃಷ್ಟಿ ಇಟ್ಟುಕೊಂಡು ಹೋರಾಡುವ ಸಾಧ್ಯತೆಯಿದೆ. ಹೀಗಾಗಿ ಇನ್ನು ಮುಂದಿನ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವುದನ್ನು ನಿರೀಕ್ಷಿಸಬಹುದು.

Advertisement

ಸದ್ಯ ಆಡಿದ ಏಳು ಪಂದ್ಯಗಳಿಂದ ತಲಾ ನಾಲ್ಕರಲ್ಲಿ ಜಯ ಗಳಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಪರಸ್ಪರ ಮುಖಾಮುಖೀಯಾಗಲಿದೆ. ಪ್ಲೇ ಆಫ್ಗೆ ತೇರ್ಗಡೆಯಾಗುವ ಕಠಿನ ಹಾದಿಯಲ್ಲಿ ಎರಡೂ ತಂಡಗಳು ಸ್ಥಿರ ನಿರ್ವಹಣೆ ನೀಡುವ ಗುರಿ ಇಟ್ಟುಕೊಂಡಿವೆ.

ಲಕ್ನೋ ಪಿಚ್‌ ಬ್ಯಾಟಿಂಗ್‌ಗೆಅಷ್ಟೊಂದು ಯೋಗ್ಯವಾಗಿಲ್ಲ. ನಾಯಕ  ಕೆಎಲ್‌ ರಾಹುಲ್‌ ಅವರ ಸ್ಟ್ರೈಕ್‌ ರೇಟ್‌ ಮತ್ತೆ ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಕಳೆದ ಶನಿವಾರ ಗುಜರಾಟ್‌ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಲಕ್ನೋ ತಂಡ 135 ರನ್ನುಗಳ ಗುರಿಯನ್ನು ತಲುಪಲು ಸಾಧ್ಯವಾಗದಿರುವುದು ಚಿಂತೆಗೆ ಕಾರಣವಾಗಿದೆ. ಆ ಪಂದ್ಯದಲ್ಲಿ ರಾಹುಲ್‌ ಕೊನೆಯ ಓವರ್‌ ತನಕವೂ ಆಡಿದ್ದರೂ ತಂಡಕ್ಕೆ ಮಹತ್ವದ ಜಯ ತಂದುಕೊಡಲು ವಿಫ‌ಲರಾಗಿದ್ದರು. ವೈಯಕ್ತಿಕವಾಗಿ 68 ರನ್‌ ಗಳಿಸಿದ್ದರೂ ತಂಡ 7 ವಿಕೆಟಿಗೆ 128 ರನ್‌ ಗಳಿಸಲಷ್ಟೇ ಶಕ್ತವಾಗಿ 7 ರನ್ನುಗಳಿಂದ ಪಂದ್ಯವನ್ನು ಸೋತಿತ್ತು.

ರಾಹುಲ್‌ ಇಲ್ಲಿಯವರೆಗಿನ ಪಂದ್ಯಗಳಲ್ಲಿ 113.91 ಸ್ಟ್ರೈಕ್‌ ರೇಟ್‌ ಹೊಂದಿದ್ದರೂ ತಂಡ ಗೆಲುವು ಕಂಡಿರುವುದು ಕಡಿಮೆ. ಗೆಲುವಿನ ಗುರಿಯೊಂದಿಗೆ ರಾಹುಲ್‌ ಬ್ಯಾಟಿಂಗ್‌ ಪ್ರದರ್ಶನ ನೀಡುವುದು ಅತ್ಯಗತ್ಯವಾಗಿದೆ.

ರಾಹುಲ್‌ ಜತೆಗೆ ಕೈಲ್‌ ಮೇಯರ್, ದೀಪಕ್‌ ಹೂಡ, ಕೃಣಾಲ್‌ ಪಾಂಡ್ಯ, ನಿಕೋಲಾಸ್‌ ಪೂರನ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಲು ಸಮರ್ಥರಿದ್ದಾರೆ.
ಮಾರ್ಕ್‌ ವುಡ್‌ ಅನುಪಸ್ಥಿತಿ ವೇಗಿ ಮಾರ್ಕ್‌ ವುಡ್‌ ಅವರ ಅನುಪಸ್ಥಿತಿಯಿಂದ ಲಕ್ನೋದ ದಾಳಿ ಪರಿಣಾಮಕಾರಿಯಾಗಿ ದುರ್ಬಲಗೊಂಡಿದೆ. ಅನಾರೋಗ್ಯದಿಂದ ಅವರು ಎ. 15ರಿಂದ ಯಾವುದೇ ಪಂದ್ಯ ಆಡಿಲ್ಲ. ಅವರು ಶೀರ್ಘ‌ ತಂಡಕ್ಕೆ ಮರಳುವುದನ್ನು ತಂಡ ನಿರೀಕ್ಷಿಸುತ್ತಿದೆ. ಕಳೆದ ಮೂರು ಪಂದ್ಯಗಳಲ್ಲಿ ಆಡಿರದಿದ್ದರೂ ಅವರು ತಂಡದ ಗರಿಷ್ಠ ವಿಕೆಟ್‌ ಪಡೆದವರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಆವೇಶ್‌ ಖಾನ್‌, ಕೃಣಾಲ್‌ ಪಾಂಡ್ಯ, ನವೀನ್‌ ಉಲ್‌ ಹಕ್‌, ರವಿ ಬಿಷ್ಣೋಯಿ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಬೌಲಿಂಗ್‌ ದಾಳಿಯ ನೇತೃತ್ವ ವಹಿಸಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next