ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೆಗಾ ಹರಾಜು ಅಂತ್ಯವಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 204 ಆಟಗಾರರು ಬೇರೆ ಬೇರೆ ತಂಡಗಳಿಗೆ ಬಿಕರಿಯಾದರು.
ಈ ಬಾರಿಯ ಐಪಿಎಲ್ ನ ವಿಶೇಷವೆಂದರೆ ಎರಡು ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್. ಅದರಲ್ಲಿ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹರಾಜು ಕೂಟದಲ್ಲಿ ಉತ್ತಮ ತಂಡವನ್ನೇ ಕಟ್ಟಿದೆ. ಕನ್ನಡಿಗ ಕೆ.ಎಲ್.ರಾಹುಲ್ ನಾಯಕರಾಗಿರುವ ಲಕ್ನೋ ತಂಡ ಆಲ್ ರೌಂಡರ್ ಗಳಿಂದ ತುಂಬಿದೆ.
ಆಲ್ ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್, ಕೆ. ಗೌತಮ್, ಜೇಸನ್ ಹೋಲ್ಡರ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ ತಂಡದಲ್ಲಿದ್ದು, ಲಕ್ನೋ ಬಲಿಷ್ಠವಾಗಿ ಕಾಣುತ್ತಿದೆ.
ಕರ್ನಾಟಕದ ಮೂವರು ಆಟಗಾರು ಲಕ್ನೋ ತಂಡದಲ್ಲಿದ್ದಾರೆ. ನಾಯಕ ರಾಹುಲ್, ಮನೀಷ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್ ಲಕ್ನೋ ತಂಡ ಸೇರಿದ್ದಾರೆ.
ಇದನ್ನೂ ಓದಿ:ಐಪಿಎಲ್: ಅಚ್ಚರಿ, ಅನಿರೀಕ್ಷಿತಗಳ ಮೆಗಾ ಹರಾಜಿಗೆ ತೆರೆ
ಹರಾಜಿನ ಬಳಿಕ ನಾಯಕ ಕೆ.ಎಲ್.ರಾಹುಲ್ ಕೂ ಮಾಡಿದ್ದು, ‘ಹೊಸ ಪಯಣ ಶುರು’ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ತಂಡ:
ಕೆ.ಎಲ್. ರಾಹುಲ್ (ನಾ), ಮನನ್ ವೋಹ್ರ, ಮನೀಷ್ ಪಾಂಡೆ, ಕ್ವಿಂಟನ್ ಡಿ ಕಾಕ್, ಸ್ಟೋಯಿನಿಸ್, ಕೆ. ಗೌತಮ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್, ರವಿ ಬಿಷ್ಣೋಯಿ, ದುಷ್ಮಂತ ಚಮೀರ, ಶಾಬಾಜ್ ನದೀಮ್, ಅಂಕಿತ್ ರಜಪೂತ್, ಆವೇಶ್ ಖಾನ್, ಮಾರ್ಕ್ ವುಡ್, ಮೊಹ್ಸಿನ್ ಖಾನ್, ಆಯೂಷ್ ಬದಾನಿ, ಕೈಲ್ ಮೇಯರ್, ಕರಣ್ ಶರ್ಮ, ಎವಿನ್ ಲೆವಿಸ್, ಮಾಯಾಂಕ್ ಯಾದವ್.