Advertisement

ಈ ಶಾಲಾ ಸಮೂಹದಲ್ಲಿದ್ದಾರೆ ಬರೋಬ್ಬರಿ 50 ಸಾವಿರ ಮಕ್ಕಳು!

09:38 AM Oct 26, 2019 | Team Udayavani |

ಲಕ್ನೋ: ಇಲ್ಲಿನ ಶಾಲಾ ಸಮೂಹ ಈಗ ಗಿನ್ನೆಸ್‌ ದಾಖಲೆ ಪುಸ್ತಕಕ್ಕೆ ಸೇರಿದೆ. ಕಾರಣ ಮಕ್ಕಳ ಸಂಖ್ಯೆ. ಮಕ್ಕಳ ಸಂಖ್ಯೆಯನ್ನು ಕೇಳಿದರೆ ಬೆಚ್ಚಿ ಬೀಳಬೇಕು. ಬರೋಬ್ಬರಿ 55,547 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Advertisement

ಜಗದೀಶ್‌ ಗಾಂಧಿ ಎನ್ನುವವರು ಸಿಟಿ ಮಾಂಟೆಸ್ಸರಿ ಸ್ಕೂಲ್‌ ಹೆಸರಿನ ಈ ಶಾಲೆಯನ್ನು ಆರಂಭಿಸಿದ್ದು, ಆಗ ಐವರು ಮಕ್ಕಳಿದ್ದರಂತೆ. ಈಗ ವಿವಿಧ ಶಾಖೆಗಳು ಸೇರಿ ಒಟ್ಟು 50 ಸಾವಿರ ದಾಟಲು ವಿದ್ಯಾರ್ಥಿಗಳು ಹೆತ್ತವರು ಕಾರಣರಾಗಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ. ಇದರಿಂದ ಶಾಲೆ ಜಗತ್ತಿನಲ್ಲೇ ಅತಿ ಹೆಚ್ಚು ಮಕ್ಕಳಿರುವ ಶಾಲೆಯಾಗಿ ಗುರುತಿಸಲ್ಪಟ್ಟಿದೆ.

ಈ ಶಾಲೆಯಲ್ಲಿ ಬಹು ವಿಧದ ಕಲಿಕೆಯಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆ ಗುರಿಯಾಗಿದೆಯಂತೆ, ದೈಹಿಕ, ಆಧ್ಯಾತ್ಮಿಕ, ಶೈಕ್ಷಣಿಕ ಉನ್ನತಿಗೆ ಉತ್ತಮ ವ್ಯವಸ್ಥೆಗಳು, ಜಾಗತಿಕ ಮಟ್ಟದ ಪರೀಕ್ಷೆಗಳಿಗೆ ಸಿದ್ಧವಾಗಲು ತರಬೇತಿ ಇತ್ಯಾದಿಗಳು ಇವೆಯಂತೆ. ಸಿಎಮ್‌ಎಸ್‌ ಶಾಲೆ ಒಟ್ಟು 18 ಶಾಖೆಗಳನ್ನು ಲಕ್ನೋ ನಗರದಾದ್ಯಂತ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next