Advertisement

ಯುಪಿ:ಸಂಬಂಧಿಕರ ಮನೆಯ ಊಟ ಸೇವಿಸಿ 9 ಮಂದಿ ಬಲಿ 

10:25 AM Jan 11, 2018 | |

ಲಕ್ನೋ: ಉತ್ತರಪ್ರದೇಶದಲ್ಲಿನಡೆದದುರಂತ ವೊಂದರಲ್ಲಿ ಸಂಬಂಧಿಕರ ಮನೆಯಲ್ಲಿ ಊಟ ಸೇವಿಸಿ  9 ಮಂದಿ  ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ. 

Advertisement

ವರದಿಯಾದಂತೆ ತಾಲ್‌ ಖುರ್ದ್‌ ಎಂಬಲ್ಲಿ ಔತಣ ಸೇವಿಸಿ ತೆರಳಿದ್ದ 9 ಮಂದಿ  ಅಸ್ವಸ್ಥರಾಗಿ ಸಾವನ್ನಪ್ಪಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಲಾಗಿದೆ.

ಈ ಬಗ್ಗೆ ಸರಕಾರ ತನಿಖಾ ತಂಡವೊಂದನ್ನು ನೇಮಿಸಿದ್ದು,ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರ ಪೈಕಿ ಓರ್ವ ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವುದಾಗಿ  ಬಾರಾಬಂಕಿ ಎಡಿಎಂ ಅನಿಲ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next