Advertisement

ಎಲ್‌ಟಿಟಿಇ ಬೆಂಬಲಿಗರು ಇನ್ನೂ ಸಕ್ರಿಯ: ಲಂಕಾ ಅಧ್ಯಕ್ಷ

06:00 AM May 20, 2018 | Team Udayavani |

ಕೊಲಂಬೊ:  ಶ್ರೀಲಂಕಾದಲ್ಲಿ ಒಂಭತ್ತು ವರ್ಷಗಳ ಹಿಂದೆ ಎಲ್‌ಟಿಟಿಇ ಉಗ್ರ ಸಂಘಟ ನೆ ಯನ್ನು ಸದೆಡಿದಿದ್ದರೂ, ಆ ಸಂಘಟನೆಯ ಸಿದ್ಧಾಂತಗಳ್ಳುಳ್ಳ ವ್ಯಕ್ತಿಗಳು ಇಂದಿಗೂ ಹೊರದೇಶಗಳಲ್ಲಿ ಸಕ್ರಿಯವಾಗಿದ್ದಾರೆ. ಶ್ರೀಲಂಕಾದಲ್ಲಿ ತಮ್ಮದೇ ಪ್ರತ್ಯೇಕ ದೇಶ ಅಸ್ತಿ ತ್ವಕ್ಕೆ ತರಲು ಹವಣಿಸುತ್ತಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿ ಪಾಲಸಿರಿ ಸೇನಾ ಹೇಳಿದ್ದಾರೆ.

Advertisement

ಎಲ್‌ಟಿಟಿಇ ಸಂಘಟನೆಯನ್ನು ಮಟ್ಟ ಹಾಕಿದ 9ನೇ ವರ್ಷಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “”ಶ್ರೀಲಂಕಾ ಸೇನೆಯು ತಮಿಳು ಉಗ್ರರನ್ನು ಸೋಲಿಸುವಲ್ಲಿ ಸಫ‌ಲವಾಯಿತು. ಆದರೆ, ಅವರ ಸಿದ್ಧಾಂತಗಳನ್ನು ಹೊತ್ತು ತಿರುಗುವವರನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ವಿಫ‌ಲವಾಯಿತು. ಇದೀಗ, ಅದೇ ವ್ಯಕ್ತಿಗಳು ವಿದೇಶಗಳಲ್ಲಿ ಪುನಃ ಸಂಘಟಿತರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಕತ್ತಿ ಮಸೆಯುತ್ತಿದ್ದಾ ರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next