ನವದೆಹಲಿ: ಬೆಂಗಳೂರು ಮೂಲದ ಮೈಂಡ್ ಟ್ರೀ ಸಂಸ್ಥೆಯು, ಲಾರ್ಸೆನ್ ಆ್ಯಂಡ್ ಟೂಬ್ರೋ ಅಂಗಸಂಸ್ಥೆಯಾದ “ಎಲ್ ಆ್ಯಂಡ್ ಟಿ ಇನ್ಫೋಟೆಕ್’ ಸಂಸ್ಥೆಯ ಜೊತೆಗೆ ವಿಲೀನಗೊಳ್ಳಲಿದೆ.
2.2 ಬಿಲಿಯನ್ ಡಾಲರ್ ಮೊತ್ತದ (ಅಂದಾಜು 16 ಲಕ್ಷ ಕೋಟಿ ರೂ.) ಕಂಪನಿಯಾಗಿ ಮಾರ್ಪಡಲಿದೆ. ಮುಂದಿನ ವಾರದಲ್ಲಿ ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.
ವಿಲೀನಗೊಂಡ ನಂತರ, ಹೊಸದಾಗಿ ರೂಪುಗೊಳ್ಳುವ ಹೊಸ ಕಂಪನಿಯ ನಿರ್ವಹಣೆಯನ್ನು ಲಾರ್ಸೆನ್ ಆ್ಯಂಡ್ ಟೂಬ್ರೋ ಎಂಜಿನಿಯರಿಂಗ್ ಕಂಪನಿಯೇ ವಹಿಸಿಕೊಳ್ಳಲಿದೆ. ಎಲ್ ಆ್ಯಂಡ್ ಟಿ ಕಂಪನಿಯು, 2019ರಲ್ಲೇ “ಮೈಂಡ್ ಟ್ರೀ’ ಕಂಪನಿಯನ್ನು ಕೊಳ್ಳುವ ಪ್ರಕ್ರಿಯೆಗೆ ಮುಂದಾಗಿತ್ತು.
ಇದನ್ನೂ ಓದಿ:ಮಲ್ಟಿ ಲೆವೆಲ್ ಮಾರ್ಕೆಟಿಂಗ್:ಇಡಿಯಿಂದ ಆ್ಯಮ್‌ವೇ ಇಂಡಿಯಾಗೆ ಸೇರಿದ 757 ಕೋ. ರೂ ಆಸ್ತಿ ಜಪ್ತಿ
“ಮೈಂಡ್ ಟ್ರೀ’ ಹಾಗೂ “ಎಲ್ ಆ್ಯಂಡ್ ಟಿ’ ಇನ್ಫೋಟೆಕ್‌ಗಳ ವಿಲೀನದಿಂದಾಗಿ ಸೃಷ್ಟಿಯಾಗಲಿರುವ ಹೊಸ ಕಂಪನಿಯು, “ಮೈಂಡ್ ಟ್ರೀ’ಯ ಶೇ. 64ರಷ್ಟು ಷೇರುಗಳನ್ನು ಹೊಂದಿರಲಿದೆ. ಇದರ ಮೌಲ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ 63,000 ಕೋಟಿ ರೂ.ಗಳಷ್ಟಿದೆ. ಇನ್ನು, ಎಲ್ ಆ್ಯಂಡ್ ಟ್ರೀ ಇನ್ಫೋಟೆಕ್ ಸಂಸ್ಥೆಯ ಶೇ. 74ರಷ್ಟು ಷೇರುಗಳು ಹೊಸ ಕಂಪನಿಯ ಪಾಲಾಗಲಿದ್ದು, ಅದರ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂ.ಗಳಷ್ಟಿದೆ.