Advertisement

ಮನೋಜ್‌ ಮುಕುಂದ್‌ ಸೇನಾ ಮುಖ್ಯಸ್ಥ

10:04 AM Dec 18, 2019 | Sriram |

ಹೊಸದಿಲ್ಲಿ: ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಮುಕುಂದ್‌ ನರವನೆ ಅವರನ್ನು ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಸೇನೆಯ ವೈಸ್‌ ಚೀಫ್ ಆಗಿ ಸೇವೆ ಸಲ್ಲಿಸುತ್ತಿರುವ ನರವನೆ ಅವರ ಹೆಸರನ್ನು ಕೇಂದ್ರ ಸರಕಾರದ ನೇಮಕ ಸಂಬಂಧದ ಅತ್ಯುನ್ನತ ಸಮಿತಿ ಆಯ್ಕೆ ಮಾಡಿದೆ. ಇದೇ ಡಿ.31ಕ್ಕೆ ಸೇನಾಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರು ನಿವೃತ್ತಿಯಾಗಲಿದ್ದು, ಇವರ ಅನಂತರ ನರವನೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Advertisement

37 ವರ್ಷಗಳ ಸೇನಾ ಅನುಭವದಲ್ಲಿ ನರವನೆ ಅವರು ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು ಚೀನ ಗಡಿಗೆ ಹೊಂದಿಕೊಂಡಿರುವ ಸೇನೆಯ ಈಸ್ಟರ್ನ್ ಕಮಾಂಡ್‌ನ‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶಿಷ್ಟ ಸೇವಾ ಪದಕ ಮತ್ತು ಅತೀ ವಿಶಿಷ್ಟ ಸೇವಾ ಪದಕ ಪಡೆದಿದ್ದಾರೆ.ಜ| ಬಿಪಿನ್‌ ರಾವತ್‌ ಅವರು ನಿವೃತ್ತಿ ಬಳಿಕ ದೇಶದ ಪ್ರಪ್ರಥಮ ರಕ್ಷಣಾ ಪಡೆಯ ಮುಖ್ಯಸ್ಥರಾಗಿ ನೇಮಕವಾಗುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next