Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬದ ಕುರಿತು ತೇಜೋವಧೆ ಹೊಸದಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು. ಕಾಂಗ್ರೆಸ್ ಪಾಪದ ಕೊಳೆಯನ್ನು ಅವರೇ ತೊಳೆಯಬೇಕು. ಬಿಜೆಪಿಯ ಜಿಲ್ಲಾ ಮುಖಂಡರು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಚುನಾವಣೆ ಮುಗಿದ ನಂತರ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಖಂಡಿತ ಮಾಡುತ್ತೇನೆ. ವಿಐಎಸ್‌ಎಲ್ ಕಾರ್ಖಾನೆ ಬಂದ್ ಆಗಲು ಬಿಟ್ಟಿಲ್ಲ. ಎಂಪಿಎಂ ಕಾರ್ಖಾನೆಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್. ಈ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದರು.
Related Articles
Advertisement
ಇಂದು ಸಂಸ್ಥಾಪನಾ ದಿನ
ಪಕ್ಷದ ಸಂಸ್ಥಾಪನಾ ದಿನವಾದ ಏ.6ರಂದು ಬೂತ್ ಮಟ್ಟದಿಂದ ಕಾರ್ಯಕ್ರಮ ಆಚರಣೆ ಮಾಡಲಾಗುವುದು ಎಂದು ಸಂಸದ ರಾಘವೇಂದ್ರ ಹೇಳಿದರು. 1980 ರ ಏ.6ರಂದು ನಮ್ಮ ಪಕ್ಷ ಆರಂಭವಾಯಿತು. ಇದರ ಅಂಗವಾಗಿ ರಾಷ್ಟಾದ್ಯಂತ ನಾಳೆ ಬೂತ್ ಮಟ್ಟದಿಂದ ಸಂಸ್ಥಾಪನಾ ದಿನ ಆಚರಿಸಲಾಗುವುದು.
ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ಏಕತೆ- ಮಾನವತಾವಾದದ ಧ್ಯೇಯವಾಕ್ಯ ಇಟ್ಟುಕೊಂಡು ದೀನದಯಾಳು ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆಶಯದಂತೆ ಕಾರ್ಯಕರ್ತರನ್ನು ಜೋಡಿಸಿಕೊಂಡು ಎಲ್ಲಾ ಬೂತ್‌ಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುವುದು ಎಂದರು.
ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯಗಳು ದೊರಕಬೇಕು ಎಂಬುದು ನಮ್ಮ ಹಿರಿಯರ ಆಶಯ. ಆರೋಗ್ಯ, ಶಿಕ್ಷಣ, ನೀರು, ಸ್ವಾಭಿಮಾನದ ಬದುಕು ಕಟ್ಟಿಕೊಡುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಇದರ ಅಡಿಯಲ್ಲಿಯೇ ನಾವು ಕೆಲಸ ಮಾಡುತ್ತೇವೆ. ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದರು. ಚುನಾವಣೆಗೆ ಇನ್ನು 32 ದಿನ ಬಾಕಿ ಇದೆ. ಈಗಾಗಲೇ ಬೂತ್‌ಮಟ್ಟದಿಂದ ನಾವು ಪ್ರಚಾರ ಆರಂಭಿಸಿದ್ದೇವೆ. ಕಾರ್ಯಕರ್ತರ ಪರಿಶ್ರಮ ಎದ್ದು ಕಾಣುತ್ತಿದೆ. ಮಹಿಳಾ ಸಮಾವೇಶಗಳು ಯಶಸ್ವಿಯಾಗುತ್ತಿವೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿದೆ. 18 ಕೋಟಿ ಸದಸ್ಯರು ಇಲ್ಲಿದ್ದಾರೆ. ಈಗ ಒಳ್ಳೆಯ ವಾತಾವರಣವಿದೆ. ಎಲ್ಲರೂ ಸೇರಿ ಈ ಚುನಾವಣಾ ರಥವನ್ನು ಯಶಸ್ವಿಯಾಗಿ ಎಳೆಯುತ್ತೇವೆ ಎಂದರು.