Advertisement

Sena ಉದ್ಧವ್ ಪಕ್ಷದ 16 ಅಭ್ಯರ್ಥಿಗಳ ಲಿಸ್ಟ್ ಪ್ರಕಟ: ಮಾಜಿ ಕೇಂದ್ರ ಸಚಿವರು ಕಣಕ್ಕೆ

11:12 AM Mar 27, 2024 | Team Udayavani |

ಮುಂಬಯಿ: ಶಿವಸೇನೆ ಉದ್ಧವ್ ಠಾಕ್ರೆ ಪಕ್ಷ ಲೋಕಸಭಾ ಚುನಾವಣೆಗೆ 16 ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದೆ. ಮಹಾ ವಿಕಾಸ್ ಅಘಾಡಿ ಘಟಕವಾಗಿ ಇಂಡಿಯಾ ಮೈತ್ರಿ ಕೂಟದ ಭಾಗವಾಗಿ ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಅವರು ರಾಯಗಢ ಮತ್ತು ಅರವಿಂದ್ ಸಾವಂತ್ ದಕ್ಷಿಣ ಮುಂಬೈ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.

Advertisement

ಥಾಣೆಯಿಂದ ರಾಜನ್ ವಿಚಾರೆ, ಮುಂಬೈ ವಾಯುವ್ಯದಿಂದ ಅಮೋಲ್ ಕೀರ್ತಿಕರ್ ಮತ್ತು ಮುಂಬೈ ಈಶಾನ್ಯದಿಂದ ಸಂಜಯ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ. ಸಂಸದ ಗಜಾನನ ಕೀರ್ತಿಕರ್ ಅವರ ಪುತ್ರ ಅಮೋಲ್ ಕೀರ್ತಿಕರ್ ಅವರನ್ನೂ ಲೋಕಸಭೆ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

ಎಂವಿಎ ಮಿತ್ರ ಪಕ್ಷ ಎನ್‌ಸಿಪಿ (ಶರದ್ಚಂದ್ರ ಪವಾರ್) ತನ್ನ ಅಭ್ಯರ್ಥಿಗಳನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ. ಮತ್ತೊಂದೆಡೆ, ವಿಪಕ್ಷಗಳ ಭಾಗವಾಗಿರುವ ಕಾಂಗ್ರೆಸ್ ಮೈತ್ರಿ ಪಾಲುದಾರರೊಂದಿಗೆ ಕೆಲವು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.ಮಹಾರಾಷ್ಟ್ರದಲ್ಲಿ 48 ಲೋಕಸಭಾ ಸ್ಥಾನಗಳಿವೆ. ಎಂವಿಎ 44 ಕ್ಷೇತ್ರಗಳಿಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು ಉಳಿದ ನಾಲ್ಕು ಸ್ಥಾನಗಳನ್ನು ನಿರ್ಧರಿಸಲಾಗಿಲ್ಲ ಇನ್ನೂ ಚರ್ಚೆಗಳು ನಡೆಯುತ್ತಿವೆ. ಅಂತಿಮಗೊಂಡ 44 ಸ್ಥಾನಗಳಲ್ಲಿ ಶಿವಸೇನೆ 19, ಕಾಂಗ್ರೆಸ್ 16 ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಒಂಬತ್ತು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಪಕ್ಷವು 22 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದ ಕ್ಷೇತ್ರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next