Advertisement

ಅಡುಗೆ ಅನಿಲ ಬೆಲೆ ಕೂಡಾ ಕಡಿಮೆ ಮಾಡಬೇಕು: ಡಿ ಕೆ ಶಿವಕುಮಾರ್

06:12 PM Nov 04, 2021 | Team Udayavani |

ಬೆಂಗಳೂರು: ಪೆಟ್ರೋಲ್ -ಡೀಸೆಲ್ ಬೆಲೆ ಮಾತ್ರವಲ್ಲ, ಅಡುಗೆ ಅನಿಲ ಬೆಲೆ ಸಹ ಕಡಿಮೆ ಮಾಡಬೇಕು. ಕೇಂದ್ರ ಸರ್ಕಾರ ಮಹಿಳೆಯರ ಕಷ್ಟ ಅರಿತು ಸ್ಪಂದಿಸಬೇಕು ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿ ಮಾಡಬೇಕು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ನಿರುದ್ಯೋಗಿ ಗಳ ಸಂಖ್ಯೆ ಹೆಚ್ಚಿದೆ. ಇದು ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂದರು.

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರು ಮಾರ್ಕೆಟ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರಸ್ ಗೆ ಬರುವವರು ಬೇಕಾದಷ್ಟು ಇದ್ದಾರೆ. ನನಗೆ ಅಥವಾ ಬೇರೊಬ್ಬರಿಗೆ ಇಷ್ಟವಿಲ್ಲ ಎನ್ನುವ ಪ್ರೆಶ್ನೆಯಿಲ್ಲ. ಪಕ್ಷದ ತೀರ್ಮಾನ ಮುಖ್ಯ. ಈಗ ಹೋಗಿರುವ 15 ಜನರ ಸ್ಥಿತಿ ಏನಾಗುತ್ತದೆ ನೋಡೋಣ ಎಂದರು.

ಇದನ್ನೂ ಓದಿ:ನಮ್ಮ ಯೋಧರು ಭಾರತ ಮಾತೆಯನ್ನು ರಕ್ಷಿಸುವ ಸುರಕ್ಷಾ ಕವಚಗಳು: ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next