Advertisement

ಎಲ್‌ಪಿಜಿ ದರ 2.71 ಹೆಚ್ಚಳ

06:00 AM Jul 01, 2018 | |

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ ದರ 2.71 ರೂ. ಏರಿಕೆ ಮಾಡಲಾಗಿದ್ದು, ಶನಿವಾರ ಮಧ್ಯ ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರದಲ್ಲಾಗಿರುವ ಏರಿಕೆ ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಎಲ್‌ಪಿಜಿ ದರ ಹೆಚ್ಚಳ ಮಾಡಿರುವುದಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(ಐಒಸಿ) ತಿಳಿಸಿದೆ. ಜತೆಗೆ, ಸಬ್ಸಿಡಿರಹಿತ ಎಲ್‌ಪಿಜಿ ದರದ ಜಿಎಸ್‌ಟಿ ಪರಿಷ್ಕರಣೆಗೂ ಇದಕ್ಕೆ ಕಾರಣ ಎಂದು ಹೇಳಿದೆ. 

Advertisement

ದರ ಏರಿಕೆಯ ಪರಿಣಾಮ ದೆಹಲಿ ಯಲ್ಲಿ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ ದರ 493.55 ರೂ.ಗೆ ತಲುಪಿದೆ. ಇದೇ ವೇಳೆ, ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುವ ಸಬ್ಸಿಡಿಯ ಮೊತ್ತವನ್ನು ಜುಲೈನಲ್ಲಿ 257.74 ರೂ.ಗೆ ಏರಿಸಲಾಗುತ್ತದೆ. ಜೂನ್‌ ತಿಂಗಳಲ್ಲಿ ಈ ಮೊತ್ತವು ಸಿಲಿಂಡರ್‌ಗೆ 204.95 ರೂ. ಆಗಿತ್ತು ಎಂದೂ ಐಒಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next