ಹೊಸದಿಲ್ಲಿ : ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಹಾಗೂ ಹಣ ಪಾವತಿಸುವ ಎಲ್ಲ ಎಲ್‌ಪಿಜಿ ಗ್ರಾಹಕರಿಗೆ ತೈಲ ಕಂಪೆನಿಗಳು ತಲಾ ಸಿಲಿಂಡರ್ ಮೇಲೆ 5 ರೂ.ಗಳ ಡಿಸ್‌ಕೌಂಟ್ ಕೊಡುಗೆಯನ್ನು ಪ್ರಕಟಿಸಿವೆ.
ಎಲ್‌ಪಿಜಿ ಗ್ರಾಹಕರು ರಿಫಿಲ್ ಗಳಿಗಾಗಿ ವೆಬ್ ಬುಕ್ಕಿಂಗ್ ಮಾಡುವ ಸಂದರ್ಭದಲ್ಲಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಗ್ಯಾಸ್ ಸಿಲಿಂಡರ್ ನ ಹಣವನ್ನು ಪಾವತಿಸಬಹುದಾಗಿದೆ.
ಗ್ರಾಹಕರು ವೆಬ್‌ನಲ್ಲಿ ಸಿಲಿಂಡರ್ ಬುಕ್ ಮಾಡುವಾಗಲೇ ಅವರಿಗೆ ಕಂಪ್ಯೂಟರ್ ಪರದೆಯ ಮೇಲೆ ರಿಫಿಲ್ ದರದಲ್ಲಿ ಪ್ರೋತ್ಸಾಹಕ ಮೊತ್ತ 5 ರೂ. ಕಳೆದು ಕಾಣುವ ಮೊತ್ತವು ಕಂಡು ಬರಲಿದೆ ಮತ್ತು ಅವರು ಆ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.
ಬುಕ್ ಮಾಡಲ್ಪಟ್ಟ ಎಲ್‌ಪಿಜಿ ಸಿಲಿಂಡರ್ ಮನೆಗೆ ಪೂರೈಸಲ್ಪಟ್ಟ ಸಂದರ್ಭದಲ್ಲಿ ಕೊಡಲಾಗುವ ಕ್ಯಾಶ್ ಮೆಮೋದಲ್ಲಿ ಡಿಸ್ಕೌಂಟ್ ಕಳೆದ ನಿವ್ವಳ ಮೊತ್ತವನ್ನು ಕಾಣಿಸಲಾಗುತ್ತದೆ.
ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದಡಿ ಎಲ್ಲ ತೈಲ ಕಂಪೆನಿಗಳು ಈ ಡಿಜಿಟಲ್ ಬುಕ್ಕಿಂಗ್ ಮತ್ತು ಪಾವತಿ ವ್ಯವಸ್ಥೆಗೆ ಕೈಜೋಡಿಸಿವೆ.